ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಫೋರ್ಡ್ ಇಂಡಿಯಾ ತಮ್ಮ ಫ್ರೀಸ್ಟೈಲ್ ಕ್ರಾಸ್‍ಓವರ್ ಹ್ಯಾಚ್‍‍ಬ್ಯಾಕ್ ಕಾರನ್ನು ಇದೆ ಏಪ್ರಿಲ್ ತಿಂಗಳಿನಲ್ಲಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.09 ಬೆಲೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಮಾಹಿತಿಗಳ ಪ್ರಕಾರ ಫೋರ್ಡ್ ಫ್ರೀಸ್ಟೈಲ್ ಕಾರು ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಮಾಹಿತಿಗಳ ಪ್ರಕಾರ ಫೋರ್ಡ್ ಫ್ರೀಸ್ಟೈಲ್ ಕಾರು ಹೊಸ ರೂಬಿ ರೆಡ್ ಬಣ್ಣದ ಅಯ್ಕೆ ಮತ್ತು ದೇಹ ಬಣ್ಣದ ಒಆರ್‍‍ವಿಎಮ್‍‍ಗಳು ಮತ್ತು ಅಡ್ಜಸ್ಟಬಲ್ ರಿಯರ್ ಹೆಡ್‍‍ರೆಸ್ಟ್ ಗಳನ್ನು ಹೊಸದಾಗಿ ಪಡೆದುಕೊಂಡಿದೆ. ಈ ಅಪ್ಡೇಟ್‍‍ನ ನಂತರ ಹೊಸ ಕಾರಿನ ಬೆಲೆಯು ಕೊಂಚ ಹೆಚ್ಚಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್
Variant Petrol Diesel
Ambiente ₹ 5.23 Lakh ₹ 6.18 Lakh
Trend ₹ 6.09 Lakh ₹ 6.99 Lakh
Titanium ₹ 6.58 Lakh ₹ 7.48 Lakh
Titanium+ ₹ 7.03 Lakh ₹ 7.89 Lakh
ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಫೋರ್ಡ್ ಫಿಗೊ ಫ್ರೀಸ್ಟೈಲ್ ತಮ್ಮ ಫಿಗೊ ಹ್ಯಾಚ್‍‍ಬ್ಯಾಕ್ ಕಾರಿನ ವಿನ್ಯಾಸವನ್ನು ಆದರಿಸಿದ್ದು, ಫ್ರೀಸ್ಟೈಲ್ ಕ್ರಾಸ್‍ಓವರ್ ಹ್ಯಾಸ್‍‍ಬ್ಯಾಕ್ ಕಾರಿನ ಮುಂಭಾಗದಲ್ಲಿ ಗ್ರಿಲ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಸ್ಮೋಕ್ಡ್ ಹೆಡ್‍‍ಲ್ಯಾಂಪ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‍‍ಗಳನ್ನು ಪಡೆದುಕೊಂಡಿದೆ. ಅಲ್ಲದೆ ಜೊತೆಗೆ ಕಾರಿನ ದೇಹವನ್ನು ಪ್ಲಾಸ್ಟಿಕ್ ಕ್ಲೇಡಿಂಗ್ ಅನ್ನು ಒದಗಿಸಲಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಫ್ರೀಸ್ಟೈಲ್ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‍‍ಗೇಟ್ ಕ್ಲಸ್ಟರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‍‍ಗಳನ್ನು ನೀಡಲಾಗಿದೆ. ಜೊತೆಗೆ ಕಪ್ಪು ಬಣ್ಣದೊಂದಿಗೆ ಸಜ್ಜುಗೊಳಿಸಲಾದ 15 ಇಂಚಿನ ಲಾಯ್ ವ್ಹೀಲ್‍‍ಗಳನ್ನು ಒದಗಿಸಲಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಫೋರ್ಡ್ ಫ್ರೀಸ್ಟೈಲ್ ಕಾರಿನ ಒಳಭಾಗಾಲ್ಲಿ 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲರ್ ಮತ್ತು ಪವರ್ ಫೋಲ್ಡಿಂಗ್ ಒಆರ್‍‍ವಿಮ್‍‍ಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ ಸೆಂಸಿಂಗ್ ವೈಪರ್ಸ್ ಮತು ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಎಂಜಿನ್ ಸಾಮರ್ಥ್ಯ

ಫೋರ್ಡ್ ಫ್ರೀಸ್ಟೈಲ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಆಧಾರಿತ ಫ್ರೀಸ್ಟೈಲ್ ಕಾರುಗಳು 1.2 ಲೀಟ ಡ್ರಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 95ಬಿಹೆಚ್‍‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಇನ್ನು ಡೀಸೆಲ್ ಆಧಾರಿತ ಫ್ರೀಸ್ಟೈಲ್ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 100ಬಿಹೆಚ್‍‍ಪಿ ಮತ್ತು 250ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರದೂ ಎಂಜಿನ್‍‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಫೋರ್ಡ್ ಫ್ರೀಸ್ಟೈಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಫ್ರೀಸ್ಟೈಲ್ ಕ್ರಾಸ್ಓವರ್ ಹ್ಯಾಚ್‍‍ಬ್ಯಾಕ್ ಪೆಟ್ರೋಲ್ ಮಾದರಿಯ ಕಾರುಗಳು ಈಗಾಗಲೆ ಹೆಚ್ಚು ಮಾರಾಟಗೊಳ್ಳುತ್ತಿದ್ದು, ಇದೇಗ ಸಂಸ್ಥೆಯು ಈ ಕಾರಿಗೆ ಹೊಸ ವೈಶಿಷ್ಟ್ಯತೆಗಳು ಮತ್ತು ಹೊಸ ಬಣ್ಣದ ಆಯ್ಕೆಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಈ ಕಾರು ಮಾರುಕಟ್ಟೆಯಲ್ಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಮತ್ತು ಮಾರುತಿ ಸೆಲೆರಿಯೊ ಎಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ford hatchback
English summary
Ford Freestyle To Be Updated With New Features And Colour Option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X