ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

By Praveen Sannamani

2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರಮುಖ ವಾಹನ ಉತ್ಪಾದಕರು ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ. ಹೀಗಾಗಿ ಪರಿಸರ ಸ್ನೇಹಿಯಾಗಲಿರುವ ಎಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರದಿಂದ ವಿಶೇಷ ಸೌಲಭ್ಯಗಳನ್ನು ನೀಡುವ ಬಗ್ಗೆ ಸುಳಿವು ಸಿಕ್ಕಿದ್ದು, ನಂಬರ್ ಪ್ಲೇಟ್ ವಿನ್ಯಾಸವು ಈಗಾಗಲೇ ಗಮನಸೆಳೆಯುತ್ತಿವೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲಾ ಆಟೋ ಉತ್ಪಾದಕರು ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮಧ್ಯೆ ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ. ಇದು ಇವಿ ವಾಹನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬಲಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಈ ಯೋಜನೆ ಭಾರೀ ಪ್ರಾಮುಖ್ಯತೆ ಪಡೆಯಲಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ನೀತಿ ಆಯೋಗ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರ ಸಾರಿಗೆ ಇಲಾಖೆಯು ಗ್ರೀನ್ ನಂಬರ್ ಪ್ಲೆಟ್ ಒದಗಿಸಲು ಒಪ್ಪಿಗೆ ಸೂಚಿಸಿದ್ದು, ಎಲೆಕ್ಟ್ರಿಕ್ ಕಾರುಗಳ ಖರೀದಿಯನ್ನು ಉತ್ತೇಜಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಹೊಸ ಯೋಜನೆಗೆ ನಿನ್ನೆಯಿಂದಲೇ ಅಧಿಕೃತವಾಗಿ ಚಾಲನೆ ದೊರೆತಿದ್ದು, ಮಹೀಂದ್ರಾ ಸಂಸ್ಥೆಯ ಇ-ವೆರಿಟೊ ಕಾರುಗಳು ದೇಶದಲ್ಲಿ ಮೊದಲ ಬಾರಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್ ಪಡೆದುಕೊಂಡ ಪರಿಸರ ಸ್ನೇಹಿ ವಾಹನ ಎಂಬ ಹೆಗ್ಗಳಿಕೆ ಪಾತ್ರವಾದವು.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಇದಷ್ಟೇ ಅಲ್ಲದೇ, ಎಲೆಕ್ಟ್ರಿಕ್ ಕಾರು ಖರೀದಿಸುವ ಮಾಲೀಕರಿಗೆ 3 ವರ್ಷದ ತನಕ ದೇಶಾದ್ಯಂತ ಪಾರ್ಕಿಂಗ್ ಶುಲ್ಕ ವಿನಾಯ್ತಿ ನೀಡುವುದರ ಜೊತೆಗೆ ಸಿಮಿತ ಅವಧಿಗೆ ಟೋಲ್ ಫ್ರಿ ಸೌಲಭ್ಯವನ್ನು ಮುಂಬರುವ ದಿನಗಳಲ್ಲಿ ಒದಗಿಸಲಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಸದ್ಯ ದೇಶದಲ್ಲಿ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಮಾತ್ರ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಸದ್ಯದಲ್ಲೇ ಹೋಂಡಾ, ಹ್ಯುಂಡೈ, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನೆ ಸಂಸ್ಥೆಗಳು ಸಹ ತಮ್ಮ ವಿನೂತನ ಇ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ತವಕದಲ್ಲಿವೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಹೀಗಾಗಿ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಯಾಗಲಿದ್ದು, ಹಸಿರು ಬಣ್ಣ ನಂಬರ್ ಪ್ಲೇಟ್ ಮತ್ತು ಮಾಲಿನ್ಯ ಮುಕ್ತ ಸಮಾಜ ಪರಿಕಲ್ಪನೆಯೊಂದಿಗೆ ಆಟೋ ಉದ್ಯಮದ ಚಿತ್ರಣವನ್ನೇ ಬದಲಿಸಲಿವೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಕೇಂದ್ರದಿಂದ ಯುವ ಜನತೆಗೆ ಹೊಸ ಆಫರ್

ಹೌದು, ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾರಾಟದ ವಿಚಾರವಾಗಿ ಹಲವು ಹೊಸ ಕ್ರಮಗಳನ್ನು ತೆಗೆದುಕೊಂಡಿದ್ದು, 16ರಿಂದ 18 ವರ್ಷದ ಯುವ ಸಮುದಾಯವು ಎಲೆಕ್ಟ್ರಿಕ್ ವಾಹನಗಳನ್ನು ಚಾಲನೆ ಮಾಡಲು ಯಾವುದೇ ಡ್ರೈವಿಂಗ್ ಲೈಸೆನ್ಸ್ ಹೊಂದುವ ಅವಶ್ಯಕತೆಯಿಲ್ಲಾ ಎಂದು ಹೇಳಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಸದ್ಯ ಆರ್‌ಟಿಓ ನಿಯಮಗಳ ಪ್ರಕಾರ 50ಸಿಸಿಗಿಂತ ಕಡಿಮೆ ಎಂಜಿನ್ ಹೊಂದಿರುವ ಬೈಕ್‌ಗಳನ್ನು ಮಾತ್ರ ಓಡಿಸುವ ಅವಕಾಶವಿದ್ದು, ವಾಸ್ತಾವವಾಗಿ ಭಾರತೀಯ ಮಾರುಕಟ್ಟೆಯಲ್ಲಿ 50 ಸಿಸಿಗಿಂತ ಕಡಿಮೆ ಎಂಜಿನ್ ಹೊಂದಿರುವ ಯಾವೊಂದು ಬೈಕ್‌ಗಳಲ್ಲ. ಹೀಗಾಗಿ ಕೇಂದ್ರ ಪ್ರಕಟಿಸಿರುವ ನಿರ್ಧಾರವು ಇವಿ ವಾಹನ ಉತ್ತೇಜನಕ್ಕೆ ಹೆಚ್ಚಿನ ಗಮನಹರಿಸಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಇದರ ಜೊತಗೆ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಮಾಲ್, ವಸತಿ ಪ್ರದೇಶಗಳಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕೆಂಬ ಸಲಹೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ದೊರೆಯಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಇನ್ನು ಎಲೆಕ್ಟ್ರಿಕ್ ಕಾರುಗಳ ಬಳಕೆಯಿಂದ ಪರಿಸರ ಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದಾಗಿದ್ದು, 2030ರ ವೇಳೆಗೆ ಹೊಸ ಯೋಜನೆ ಯಶಸ್ವಿಗೊಂಡಲ್ಲಿ ಶೇ.37ರಷ್ಟು ಮಾಲಿನ್ಯ ಪ್ರಮಾಣವನ್ನು ತಡೆದುಹಾಕಬಹುದಾಗಿದೆ.

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಾದಲ್ಲಿ 60 ಬಿಲಿಯನ್ ಡಾಲರ್‌ನಷ್ಟು ಇಂಧನ ವೆಚ್ಚ ಉಳಿತಾಯವಾಗಲಿದ್ದು, ವಾಹನ ಉದ್ಯಮ ಬಹುದೊಡ್ಡ ಬದಲಾವಣೆಯಾಗಲಿದೆ.

MOST READ: ಬದಲಾದ ಹೊಸ ವಿಮಾ ಪಾಲಿಸಿ- ಗಗನಮುಖಿಯಾದ ಹೋಂಡಾ ಬೈಕ್‌ಗಳ ಬೆಲೆ ಪಟ್ಟಿ ಇಲ್ಲಿದೆ ನೋಡಿ..

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ಈ ರೀತಿಯ ನಂಬರ್ ಪ್ಲೇಟ್ ಸಿಗುತ್ತೆ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳ ಯೋಜನೆ ಬಗ್ಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ವಿವಿಧ ಯೋಜನೆಗಳನ್ನು ಹೊಂದಿವೆಯಾದರೂ ಮಹತ್ವದ ಯೋಜನೆಯನ್ನು ಅಳವಡಿಸಿಕೊಳ್ಳುವುದು ಕೂಡಾ ಸವಾಲಿನ ಕೆಲಸವಾಗಿದೆ. ಇದಕ್ಕೆ ಕಾರಣ ದೇಶದಲ್ಲಿ ವಿದ್ಯುತ್ ಕೊರತೆ ಹೊಸ ಯೋಜನೆಗೆ ಪೂರಕವಾಗಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Most Read Articles

Kannada
Read more on electric cars evergreen
English summary
Green Number Plates Introduced For Electric Cars In India — Mahindra eVerito The First Car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X