ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

By Praveen Sannamani

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.99ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಪೂರಕವಾದ ಮಾರುಕಟ್ಟೆ ಒದಗಿಸುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ಕಾರುಗಳ ಬೆಲೆ ತಗ್ಗಿಸುವ ಉದ್ದೇಶ ಮಹತ್ವದ ನಿರ್ಣಯವೊಂದನ್ನ ಕೈಗೊಂಡಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಕೇಂದ್ರ ಸರ್ಕಾರವು ಪ್ರಮುಖ18 ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಇಳಿಕೆ ಮಾಡಿದ್ದು, ಇದರಲ್ಲಿ ಎಲೆಕ್ಟ್ರಿಕ್ ಕಾರುಗಳ ಮುಖ್ಯ ಮುಖ್ಯ ತಾಂತ್ರಿಕ ಅಂಶವಾದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ತಗ್ಗಿಸಿರುವುದು ಇವಿ ಕಾರುಗಳ ಮೇಲಿನ ಬೆಲೆ ಇಳಿಕೆಗೆ ಸಹಕಾರಿಯಾಗುವುದರ ಜೊತೆಗೆ ಮಾರಾಟಕ್ಕೂ ಅನುಕೂಲವಾಗಲಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಹೀಗಾಗಿ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲೆ ಇಷ್ಟು ದಿನ ಇದ್ದ ಶೇ.28ರಷ್ಟು ಜಿಎಸ್‌ಟಿ ತೆರಿಗೆಯು ಇನ್ಮುಂದೆ ಶೇ.18ಕ್ಕೆ ಇಳಿಕೆಯಾಗಲಿದ್ದು, ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನ ರೂಪಿಸಿತ್ತಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

2.50 ಲಕ್ಷ ಪ್ರೋತ್ಸಾಹ ಧನ

ಹೊಸ ಯೋಜನೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್‌ ಕಾರುಗಳನ್ನು ಪರಿಮಾಣಕಾರಿಯಾಗಿ ತಗ್ಗಿಸುವುದು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೊತ್ಸಾಹಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಪ್ರತಿ ಕಾರಿನ ಖರೀದಿ ಮೇಲೆ ಬರೋಬ್ಬರಿ 2. 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಯೋಜನೆಯ ಪ್ರಕಾರ, ಈಗಾಗಲೇ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಹಳೆಯ ಬಿಎಸ್ 3 ಕಾರುಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತಹ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಪ್ರೊತ್ಸಾಹ ಧನ ಪಡೆಯಲು ಹೀಗೆ ಮಾಡುವುದು ಕಡ್ಡಾಯ..!

ಒಂದು ವೇಳೆ ನೀವು ಬಿಎಸ್ 3 ಡೀಸೆಲ್ ಅಥವಾ ಪೆಟ್ರೋಲ್ ಹೊಂದಿದ್ದು, ಎಲೆಕ್ಟ್ರಿಕ್ ಕಾರ್‌ನೊಂದಿಗೆ ಬದಲಾವಣೆ ಮಾಡುವುದಾದರೇ ಮೊದಲು ನಿಮ್ಮ ಹಳೆಯ ಕಾರುಗಳನ್ನು ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಸ್ಕ್ರ್ಯಾಪ್ ಮಾಡಿಸುವುದು ಕೂಡಾ ಕಡ್ಡಾಯವಾಗಿರುತ್ತದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಅಂದ್ರೆ ನಿಮ್ಮ ಹಳೆಯ ಪೆಟ್ರೋಲ್ ಅಥವಾ ಡಿಸೇಲ್ ಕಾರುಗಳು ಗುಜುರಿಗೆ ಸೇರಿದ ನಂತರವೇ ಎಲೆಕ್ಟ್ರಿಕ್ ಕಾರಿನ ಎಕ್ಸ್‌ಚೆಂಜ್‌ ಮೇಲೆ ರೂ. 2.50ಲಕ್ಷ ಪ್ರೊತ್ಸಾಹ ಧನ ಸಿಗಲಿದೆ. ಮತ್ತೊಂದು ವಿಚಾರ ಅಂದ್ರೆ ನೀವು ಖರೀದಿಸುವ ಎಲೆಕ್ಟ್ರಿಕ್ ಕಾರುಗಳ ಬೆಲೆ ಆಧಾರ ಮೇಲೆ ಪ್ರೊತ್ಸಾಹ ಧನ ನಿಗದಿಯಾಗುತ್ತೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಇದಕ್ಕಾಗಿಯೇ ಬರೋಬ್ಬರಿ 9 ಸಾವಿರ ಕೋಟಿ ವ್ಯಯ ಮಾಡುತ್ತಿರುವ ಕೇಂದ್ರವು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಶೇ.50 ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಿದೆ. ಹೀಗಾಗಿ ಹಳೆಯ ಮಾದರಿಯ ಕಾರುಗಳನ್ನು ಹೊಂದಿರುವ ಕಾರು ಮಾಲೀಕರಿಗೆ ಇಂತದೊಂದು ಆಫರ್ ಘೋಷಣೆ ಮಾಡುತ್ತಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಇದರ ಜೊತೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೂ ಸಹ ರೂ.30 ಸಾವಿರ ಪ್ರೊತ್ಸಾಹ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು ಇದಕ್ಕಾಗಿ 1.5 ಲಕ್ಷ ಮೇಲ್ಪಟ್ಟ ಎಲೆಕ್ಟಿಕ್ ಬೈಕ್‌ಗಳನ್ನು ಖರೀದಿ ಮಾಡಿರಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಿದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪ್ರತಿ ಗಲ್ಲಿ ಗಲ್ಲಿಗೂ ಚಾರ್ಜಿಂಗ್ ಪಾಯಿಂಟ್ ತೆರೆಯಲು ಸಿದ್ದತೆ ನಡೆಸಲಾಗುತ್ತಿದ್ದು, ಹೆದ್ದಾರಿಗಳಲ್ಲಿ ಸಂಚರಿಸುವ ಇವಿ ಕಾರುಗಳಿಗಾಗಿ ಪ್ರತಿ 25 ಕಿ.ಮಿ ಒಂದಂತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ.

ಬದಲಾದ ತೆರಿಗೆ ನೀತಿ- ಎಲೆಕ್ಟ್ರಿಕ್ ಕಾರುಗಳು ಮತ್ತಷ್ಟು ಅಗ್ಗ

ಜೊತೆಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಂತ ಗ್ರಾಹಕರಿಗೆ ಮತ್ತಷ್ಟು ಹೊಸ ಆಫರ್ ‌ನೀಡಿರುವ ಕೇಂದ್ರ ಸರ್ಕಾರವು, ನಿಗದಿತ ಅವಧಿಗೆ ಇವಿ ಕಾರುಗಳಿಗೆ ಟ್ರೋಲ್ ಫ್ರಿ ಮತ್ತು ಎರಡು ವರ್ಷಗಳ ಇನ್ಸುರೆನ್ಸ್, ಬಿಡಿಭಾಗಗಳ ಖರೀದಿ ಮೇಲೆ ರಿಯಾಯ್ತಿ ದರ ಅನ್ವಯವಾಗುವಂತೆ ನಿಯಮ ರೂಪಿಸುತ್ತಿದೆ.

Most Read Articles

Kannada
Read more on electric cars evergreen gst
English summary
GST On Batteries For Electric Cars Reduced From 28 To 18 Per Cent.
Story first published: Tuesday, July 24, 2018, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X