ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ದೇಶದಲ್ಲಿ 2020ರ ಒಳಗೆ ವಿದ್ಯುತ್ ವಾಹನಗಳ ಸಂಖ್ಯೆಯು ಹೆಚ್ಚಬೇಕೆಂದು ಸರ್ಕರವು ಆದೇಶಿಸಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ವಾಹನಗಳಲ್ಲಿ ಬಳಸಲಾಗುವ ಬ್ಯಾಟರಿಯ ಬೆಲೆಯು ಕಡಿಮೆಯಾಗಲಿದೆ.

By Rahul Ts

ದೇಶದಲ್ಲಿ 2020ರ ಒಳಗೆ ವಿದ್ಯುತ್ ವಾಹನಗಳ ಸಂಖ್ಯೆಯು ಹೆಚ್ಚಬೇಕೆಂದು ಸರ್ಕರವು ಆದೇಶಿಸಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ವಾಹನಗಳಲ್ಲಿ ಬಳಸಲಾಗುವ ಬ್ಯಾಟರಿಯ ಬೆಲೆಯು ಕಡಿಮೆಯಾಗಲಿದೆ. ಎಲೆಕ್ಟ್ರಿಕ್ ವಾಹನದಲ್ಲಿ ಮುಖ್ಯವಾಗಿ ಬೇಕಾದದ್ದು ಬ್ಯಾಟರಿ ಆದ್ದರಿಂದ ಬ್ಯಾಟರಿನ ಬೆಲೆಯನ್ನು ಕಡಿಮೆ ಮಾಡಿದಲ್ಲಿ ಕಾರಿನ ಬೆಲೆಯು ಕೂಡ ಕಡಿಮೆಯಾಗಲಿದೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಮಾಹಿತಿಗಳ ಪ್ರಕಾರ ಭಾರತ ಸರ್ಕಾರವು ಬ್ಯಾಟರಿಗಳ ಮೇಲಿನ ಜಿಎಸ್‍‍ಟಿಯನ್ನು ಶೇಕಡ 28 ರಿಂದ 12 ವರೆಗು ಕಡಿತಗೊಳಿಸಬೇಕೆಂದು ಮನವಿ ಮಾಡಿಕೊಂಡಿದೆ. ಈ ಆದೇಶವು ಜಾರಿಗೆ ಬಂದರೆ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಕಡಿಮೆಯಾಗಲಿದೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿಯೆ ದುಬಾರಿಯಾಗಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯ ಕಡೆ ಮುಖ ಮಾಡಿದೆ. ಹಾಗಾಗಿ ಭಾರತ ಸರ್ಕಾರವು ಕೂಡ ರಸ್ಥೆಗಳಲ್ಲಿ ಹೆಚ್ಚು ವಿದ್ಯುತ್ ವಾಹನಗಳು ಸಂಚರಿಸಬೇಕೆಂಬ ಉದ್ದೇಶದಿಂದ ಈ ಮನವಿಯನ್ನು ಮಾಡಿದೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಪ್ರಸ್ಥುತ ಮಾರುಕಟ್ಟೆಯಲ್ಲಿ ಕೇವಲ ಮಹಿಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಮಾತ್ರ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದ್ದು, ಬ್ಯಾಟರಿಯ ಬೆಲೆಯನ್ನು ಕಡಿಮೆ ಮಾಡಿದಲ್ಲಿ ಕಾರಿನ ಉತ್ಪಾದವ ವೆಚ್ಚವು ಕೂಡ ಕಡಿಮೆಯಾಗಲಿದೆ. ಇದರಿಂದಾಗಿ ವಾಹನ ತಯಾರಕ ಸಂಸ್ಥೆಗಳು ಭಾರತದಲ್ಲಿಯೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿಕೊಳ್ಳಬಹುದಾಗಿದೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಇದಲ್ಲದೆ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್‍‍ಗಳ ಪರಿಕಲ್ಪನೆಯು ಕೂಡ ಬೆಳವಣಿಗೆಯಾಗಲಿದ್ದು, ಎಲೆಕ್ಟ್ರಿಕ್ ಕಾರುಗಳಿಗಾಗಿ ಬಳಸಲಾಗುವ ಬ್ಯಾಟರಿಗಳನ್ನು ಈಗಲೂ ಕೂಡ ಯುನೈಟೆಡ್ ಸ್ಟೆಟ್ಸ್ ಮತ್ತು ಚೀನಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಎಲೆಕ್ಟ್ರಿಕ್ ಕಾರಿನ ಬ್ಯಾಟರಿಗಳನ್ನು ಪ್ರತೀ ಕಿಲೋ‍ವ್ಯಾಟ್‍‍ಗೆ ಲೆಕ್ಕ ಹಾಕಲಾಗುತ್ತದೆ. 2010ರಲ್ಲಿ ಒಂದು ಕಿಲೋವ್ಯಾಟ್‍ ಬ್ಯಾಟರಿಗಳ ಬೆಲೆಯು ರೂ 67,392 ಸಾವಿರಕ್ಕೆ ಮಾರಾಟಗೊಳುತಿತ್ತು, ಆನಂತರ ಬೆಲೆಯಲ್ಲಿ ಕಡಿತವನ್ನು ಕಂಡಿತು.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಆದರೆ ಪ್ರಸ್ಥುತ ಎಲೆಕ್ಟ್ರಿಕ್ ಕಾರಿನ ಪ್ರತೀ ಕಿಲೋವ್ಯಾಟ್‍‍ನ ಬೆಲೆಯು ರೂ 15,163 ರಿಂದ 16,848 ಸಾವೈರದ ವರು ಮಾರಾಟಗೊಳ್ಳುತ್ತಿದೆ. ಆದ್ರೆ ವರದಿಯ ಪ್ರಕಾರ 2026ರ ವೇಳೆಗೆ ಪ್ರತೀ ಕಿಲೋವ್ಯಾಟ್‍‍ಗೆ ಕೇವಲ ರೂ 6,739 ಆಗಲಿದೆಯಂತೆ.

ಕಡಿಮೆಯಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬೆಲೆ..

ಕೆಲದಿನಗಳ ಹಿಂದಷ್ಟೆ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಹಸಿರು ಬಣ್ಣದ ನಂಬರ್ ಪ್ಲೇಟ್‍‍ಗಳನ್ನು ಅಳವಡಿಸಲು ಒಪ್ಪಿಗೆಯನ್ನು ನೀಡಿದ್ದು, ಈ ಆದೇಶದಿಂದ ಖಾಸಗಿ ಕಾರುಗಳು ಹಸಿರು ನಂಬರ್‍ ಪ್ಲೇಟ್‍ ಅನ್ನು ಬಿಳಿಯ ಅಂಕಿಗಳೊಂದಿಗೆ ಬಳಸಿಕೊಳ್ಳಬಹುದಾಗಿದೆ. ಆದರೆ ಟ್ಯಾಕ್ಸಿ ವಾಹನಗಳು ಮಾತ್ರ ಹಸಿರು ನಂಬರ್ ಬೋರ್ಡ್‍‍ನ ಮೇಳೆ ಹಳದಿ ಬಣ್ಣದಲ್ಲಿ ಸಂಖ್ಯೆಗಳನ್ನು ಬಳಸಿಕೊಳ್ಳಬೇಕು ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟ್ಯೂಬ್‌ಲೆಸ್ ಟೈರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ಎಲೆಕ್ಟ್ರಿಕ್ ಕಾರುಗಳಿಗೆ ಇನ್ಮುಂದೆ ವಿಶೇಷ ಮಾದರಿಯ ನಂಬರ್ ಪ್ಲೇಟ್

Most Read Articles

Kannada
English summary
GST To Reduce On Batteries Of Electric Vehicles In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X