Just In
- 44 min ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- 1 hr ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- 1 hr ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- 2 hrs ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಈ ಮಾಡಿಫೈ ಲಂಬೋರ್ಗಿನಿ ಕಾರಿನ ಮೂಲ ಯಾವುದು ಗೊತ್ತಾ?
ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಈ ಮಾಡಿಫೈ ಲಂಬೋರ್ಗಿನಿ ಕಾರಿನ ಮೂಲ ಯಾವುದು ಗೊತ್ತಾ?
ನಗರ ಪ್ರದೇಶಗಳಲ್ಲಿ ಕಾರು, ಬೈಕ್ಗಳನ್ನು ಮಾಡಿಫೈ ಮಾಡಿಸುವುದು ಹೊಸತೆನಲ್ಲ. ಆದರೂ ಕೆಲ ಬಾರಿ ಮಾಡಿಫೈ ವಾಹನ ತಯಾಕರು ಮೂಲ ವಾಹನಗಳಿಂತಲೂ ಅದ್ಭುತ ರೀತಿಯಲ್ಲಿ ಹೊಸ ಹೊಸ ನಮೂನೆಯ ವಾಹನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಮುಂಬೈ ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆಯೊಂದು ಅಭಿವೃದ್ಧಿ ಮಾಡಿರುವ ಲ್ಯಾಂಬೋರ್ಗಿನಿ ಕಾರು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಹೋಂಡಾ ಕಾರ್ಸ್ ನಿರ್ಮಾಣದ ಅಕ್ರಾಡ್ ಸೆಡಾನ್ ಕಾರಿನ ಎಂಜಿನ್ ಬಳಸಿಕೊಂಡು ಸೂಪರ್ ಕಾರು ಮಾದರಿಯಾದ ಲಂಬೋರ್ಗಿನಿ ಅವೆಂಟಡೊರ್ ಮಾಡಿಫೈ ಮಾಡಲಾಗಿದ್ದು, 4 ಕೋಟಿ ಬದಲಾಗಿ 10ರಿಂದ 12 ಲಕ್ಷ ಖರ್ಚು ಮಾಡಿದಲ್ಲಿ ಈ ಸೂಪರ್ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಬಳಿ ಅಕ್ರಾಡ್ ಸೆಡಾನ್ ಕಾರು ಇರಬೇಕು ಅಷ್ಟೇ.
ಮುಂಬೈ ಮೂಲದ ಇಮ್ಜಿ ಪ್ರೋಡಕ್ಷನ್ ಎನ್ನುವ ಮಾಡಿಫೈ ಸಂಸ್ಥೆಯೇ ಈ ಸೂಪರ್ ಕಾರಿನ ಮಾಡಿಫೈ ಆವೃತ್ತಿಯನ್ನು ನಿರ್ಮಾಣ ಮಾಡಿದ್ದು, ಮೂಲ ಕಾರಿನ ಮಾದರಿಯಲ್ಲೇ ಮಾಡಿಫೈ ಆವೃತ್ತಿಯನ್ನು ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೂರದಿಂದ ನೋಡುವಾಗ ಮಾಡಿಫೈ ಕಾರು ಮೂಲ ಕಾರಿನಂತೆ ಕಾಣುವುದಲ್ಲದೇ ನಿಜವಾದ ಕಾರು ಮಾದರಿಯು ಈ ಮಾಡಿಫೈ ಕಾರಿನ ಮುಂದೆ ಏನು ಅಲ್ಲ ಎನ್ನುವ ರೀತಿ ಸಿದ್ದಗೊಳಿಸಿದ್ದಾರೆ. ಕಾರಿನ ಸ್ಪಾಯ್ಲರ್, ಬಾಡಿ ಕಿಟ್, ಗ್ರಾಫಿಕ್ಸ್ ಮತ್ತು ಅಲಾಯ್ ಚಕ್ರಗಳ ಬಳಕೆಯು ಮಾಡಿಫೈ ಕಾರಿನ ಅಂದವನ್ನು ಹೆಚ್ಚಿಸಿರುವುದು ಮಾತ್ರ ಸುಳ್ಳಲ್ಲ.
ಲಂಬೋರ್ಗಿನಿ ಅವೆಂಟಡೊರ್ ಮಾಡಿಫೈಗಾಗಿ ಹೋಂಡಾ ಅಕ್ರಾಡ್ ಟಾಪ್ ಎಂಡ್ ಮಾದರಿಯನ್ನು ಬಳಕೆ ಮಾಡಲಾಗಿದ್ದು, ಕಾರಿನ ಎಂಜಿನ್ ವಿಭಾಗವನ್ನು ಹೊರತು ಪಡಿಸಿ ಬಹುತೇಕ ವಿನ್ಯಾಸಗಳನ್ನು ಸೂಪರ್ ಕಾರಿನ ಮಾದರಿಯಲ್ಲೇ ಮರುಜೋಡಣೆ ಮಾಡಲಾಗಿದೆ.
ಐಷಾರಾಮಿ ವಿನ್ಯಾಸಕ್ಕಾಗಿ ಬರೋಬ್ಬರಿ 10 ರಿಂದ 12 ಲಕ್ಷ ಖರ್ಚು ಮಾಡಿ ಮಾಡಿಫೈ ಮಾಡಿರುವುದಲ್ಲದೇ ಸೂಪರ್ ಕಾರಿನಲ್ಲಿ ಅಳವಡಿಸಲಾಗುವ ಎಲೆಕ್ಟ್ರಿಕ್ ಸ್ಪಿಚ್ ಪ್ರೇರಿತ ತೆಗೆದು ಹಾಕಿಕೊಳ್ಳಬಹುದಾದ ರೂಫ್ಟಾಪ್, ಸ್ಪೋರ್ಟಿ ವಿನ್ಯಾಸಗಳು, ಆರೇಂಜ್ ಶೆಡ್ಸ್ ಇದರಲ್ಲಿ ಬಳಕೆ ಮಾಡಿರುವುದು ಸೂಪರ್ ಕಾರು ಪ್ರೇಮಿಗಳ ಆಕರ್ಷಣೆಗೆ ಕಾರಣವಾಗಿದೆ.
ಇನ್ನು ಕಾರಿನ ಎಂಜಿನ್ ಮಾದರಿಯು 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮಾಡಿಫೈ ಮಾಡಿರುವ ಹಿನ್ನೆಲೆಯಲ್ಲಿ ಮೂಲ ಕಾರಿಗಿಂತ ತುಸು ಎಂಜಿನ್ ಪರ್ಫಾಮೆನ್ಸ್ನಲ್ಲಿ ವ್ಯತ್ಯಾಸ ಕಂಡುಬರಲಿದೆ. ಅಷ್ಟು ಹೊರತು ಪಡಿಸಿ ಮಾಡಿಫೈ ಕಾರು ಲಂಬೋರ್ಗಿನಿ ಮೂಲ ಕಾರಿನಷ್ಟೇ ಆಕರ್ಷಕವಾಗಿದೆ.
ಆದ್ರೆ ಕಾರಿನ ಗ್ರೌಂಡ್ ಕ್ಲಿಯೆರನ್ಸ್ ವಿಚಾರಕ್ಕೆ ಬಂದಲ್ಲಿ ಮಾಡಿಫೈ ಲಂಬೋರ್ಗಿನಿ ಕಾರು ಕಚ್ಚಾ ರಸ್ತೆಗಳಲ್ಲಿ ಚಾಲನೆ ಕಷ್ಟಕರವಾಗಲಿದ್ದು, ಕೇವಲ ಅಂದ ಚೆಂದ ಅನ್ನಿಸುವ ರಸ್ತೆಗಳನ್ನೇ ಮಾತ್ರ ಓಡಿಸಲು ಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಹೀಗಾಗಿ ಇದು ಸಿಟಿ ಪ್ರದೇಶಗಳಲ್ಲಿ ಹೊರತು ಪಡಿಸಿ ಆಪ್ ರೋಡ್ಗೆ ಬಂದ್ರೆ ಕಾರಿನ ರೂಪವೇ ಮತ್ತಷ್ಟು ಬದಲಾಗಬಹುದು.
ಅದರ ಹೊರತಾಗಿ ಕಡಿಮೆ ವೆಚ್ಚಗಳಲ್ಲಿ ಮಾಡಿಫೈ ಕಾರಿನಲ್ಲಿ ಅಳವಡಿಸಲಾಗಿರುವ ಸೌಲಭ್ಯಗಳು ಉತ್ತಮವಾಗಿದ್ದು, ಸಿಟಿ ಪ್ರದೇಶಗಳಲ್ಲಿ ಮಾತ್ರ ಕಾರು ಚಾಲನೆ ಮಾಡಲು ಆದ್ರೆ ಸಾಕು ಎನ್ನುವವರು ನಿಮ್ಮ ಸಿಟಿ ಕಾರನ್ನು ಇವರಲ್ಲಿ ಮಾಡಿಫೈ ಮಾಡಿಸಿಕೊಳ್ಳಬಹುದು.
ಲಂಬೋರ್ಗಿನಿ ಮಾಡಿಫೈ ಕಾರಿನ ಪರ್ಫಾಮೆನ್ಸ್ ಕುರಿತಾದ ವಿಡಿಯೋ ಇಲ್ಲಿದೆ ನೋಡಿ...