ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಾಹನಗಳ ಬೆಲೆ ಏರಿಕೆ ಮಾಡುತ್ತಿದೆ.

By Praveen Sannamani

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಾಹನಗಳ ಬೆಲೆ ಏರಿಕೆ ಮಾಡುತ್ತಿದ್ದು, ಇದೇ ವೇಳೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಸಹ ಪ್ರಮುಖ ಉತ್ಪನ್ನಗಳ ಮೇಲೆ ದರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಮುಂದಾಗಿದೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಹೋಂಡಾ ಸಂಸ್ಥೆಯು ಜಾರಿಗೆ ಮಾಡುತ್ತಿರುವ ಹೊಸ ದರ ಪಟ್ಟಿಯು ಆಗಸ್ಟ್ 1ರಿಂದ ಅನ್ವಯವಾಗಲಿದ್ದು, ವಿವಿಧ ಕಾರು ಮಾದರಿಗಳ ಬೆಲೆಗಳಿಗೆ ಅನುಗುಣವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಪ್ರತಿ ಕಾರು ಮಾದರಿಯ ಮೇಲೂ ರೂ. 10 ಸಾವಿರದಿಂದ ರೂ. 35 ಸಾವಿರದ ತನಕ ಬೆಲೆ ಹೆಚ್ಚಳವಾಗಬಹುದು ಎನ್ನಲಾಗಿದೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಕಳೆದ ಮೇ ತಿಂಗಳಿನಲ್ಲಿ ಹೊಸದಾಗಿ ಬಿಡುಗಡೆಯಾದ 2018ರ ನ್ಯೂ ಅಮೇಜ್ ಕಾರುಗಳ ಬೆಲೆಯನ್ನು ಸಹ ಏರಿಕೆ ಮಾಡುತ್ತಿದ್ದು, ಹೆಚ್ಚುತ್ತಿರುವ ಅಬಕಾರಿ ಸುಂಕ, ಉತ್ಪಾದನಾ ವೆಚ್ಚಗಳನ್ನು ನಿಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಈ ಹಿಂದೆ ಜೂನ್ ಮೊದಲ ವಾರದಲ್ಲೂ ಶೇ.2 ರಷ್ಟು ಕಾರುಗಳ ಬೆಲೆ ಹೆಚ್ಚಳ ಮಾಡಿದ್ದ ಹೋಂಡಾ ಸಂಸ್ಥೆಯು ಇದೀಗ ಮತ್ತೆ ಬೆಲೆ ಬರೆ ಎಳೆಯಲು ಮುಂದಾಗಿದ್ದು, ಅಬಕಾರಿ ಸುಂಕದ ಹೊರೆಯನ್ನು ತಗ್ಗಿಸಲು ಕಾರಿನ ಬೆಲೆಗಳಲ್ಲಿ ಹೆಚ್ಚಳಕ್ಕೆ ಮುಂದಾಗಿದೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಸದ್ಯ ಹೋಂಡಾ ಸಂಸ್ಥೆಯು ಬ್ರಿಯೊ, ಜಾಝ್ (ಹ್ಯಾಚ್‌ಬ್ಯಾಕ್), ಅಮೇಜ್, ಸಿಟಿ, ಅರ್ಕಾಡ್ (ಸೆಡಾನ್), ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ, ಬಿಆರ್-ವಿ ಕ್ರಾಸ್ಓವರ್ ಮತ್ತು ಸಿಆರ್-ವಿ ಎಸ್‌ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಾರುಗಳ ಬೆಲೆಯು ಆರಂಭಿಕವಾಗಿ ರೂ. 4.73 ಲಕ್ಷದಿಂದ ಟಾಪ್ ಎಂಡ್ ಮಾದರಿಗಳು ರೂ. 43.21 ಲಕ್ಷದವರೆ ಬೆಲೆ ಪಡೆದುಕೊಂಡಿವೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಮತ್ತೆರಡು ಹೊಸ ಕಾರು ಮಾದರಿಗಳನ್ನು ಸಹ ಪರಿಚಯಿಸುತ್ತಿರುವ ಹೋಂಡಾ ಸಂಸ್ಥೆಯು ಹೊಸ ವಿನ್ಯಾಸದ ಸಿವಿಕ್ ಮತ್ತು ಸಿಆರ್-ವಿ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಇದರ ಮಧ್ಯೆ ಬೆಲೆ ಹೆಚ್ಚಳ ಮಾಡುತ್ತಿರುವುದು ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಈ ಬಗ್ಗೆ ಮಾತನಾಡಿರುವ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ರಾಜೇಶ್ ಗೋಯೆಲ್ ಅವರು, 'ಕಳೆದ ಕೆಲ ತಿಂಗಳಿನಿಂದ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಹೆಚ್ಚಳವಾಗುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಅಬಕಾರಿ ಸುಂಕಗಳಿಂದಾಗಿ ಕಾರುಗಳ ಬೆಲೆಗಳನ್ನು ಹೆಚ್ಚಳ ಮಾಡದೆ ಯಾವ ಮಾರ್ಗವೂ ಇಲ್ಲ' ಎಂದಿದ್ದಾರೆ.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಹೀಗಾಗಿ ಮುಂಬರುವ ತಿಂಗಳು ಅಗಸ್ಟ್ 1ರಿಂದಲೇ ಹೋಂಡಾ ಕಾರುಗಳ ಬೆಲೆಯ ದುಬಾರಿಯಾಗಲಿದ್ದು, ಇದೇ ವೇಳೆ ಆಯಾ ನಗರಗಳಲ್ಲಿನ ಅಧಿಕೃತ ಡೀಲರ್ಸ್‌ಗಳು ಸಹ ಕಾರುಗಳ ಬೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಕೂಡಾ ತರಬಹುದು.

ದುಬಾರಿಯಾಗುತ್ತಿವೆ ಕಾರು ಖರೀದಿ- ಹೋಂಡಾ ಕಾರುಗಳ ಬೆಲೆಯಲ್ಲೂ ಭಾರೀ ಬದಲಾವಣೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ವೆಚ್ಚ ಮತ್ತು ಅಬಕಾರಿ ಸುಂಕ ಏರಿಕೆ ಹಿನ್ನೆಲೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಬೆಲೆ ಎರಿಕೆ ಮಾಡುತ್ತಿದ್ದು, ಹೋಂಡಾ ಸಂಸ್ಥೆಯ ಜೊತೆ ಜೊತೆಗೆ ಐಷಾರಾಮಿ ಕಾರುಗಳ ಉತ್ಪಾದನಾ ಸಂಸ್ಥೆಗಳಾದ ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಗಳು ಸಹ ಆಗಸ್ಟ್ 1ರಿಂದ ಕಾರುಗಳ ಬೆಲೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿವೆ.

Most Read Articles

Kannada
Read more on honda price hike
English summary
Honda City, Amaze, Jazz, WR-V Prices To Be Increased From August 2018.
Story first published: Wednesday, July 11, 2018, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X