ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಇಂಡೋನೇಷ್ಯಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಮೋಟಾರ್ ಮೇಳದಲ್ಲಿ ಪ್ರತಿಷ್ಠಿತ ಹೋಂಡಾ ಸಂಸ್ಥೆಯು ವಿನೂತನ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಯೊಂದನ್ನು ಅನಾವರಣಗೊಳಿಸಿದ್ದು, ಕಾರಿನಲ್ಲಿರುವ ವಿಶೇಷತೆಗಳು ಹ್ಯಾಚ್‌ಬ್ಯಾಕ್ ಕುತೂಹಲ ಹುಟ್ಟುಹಾಕಿ

By Praveen Sannamani

ಇಂಡೋನೇಷ್ಯಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಮೋಟಾರ್ ಮೇಳದಲ್ಲಿ ಪ್ರತಿಷ್ಠಿತ ಹೋಂಡಾ ಸಂಸ್ಥೆಯು ವಿನೂತನ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಯೊಂದನ್ನು ಅನಾವರಣಗೊಳಿಸಿದ್ದು, ಕಾರಿನಲ್ಲಿರುವ ವಿಶೇಷತೆಗಳು ಹ್ಯಾಚ್‌ಬ್ಯಾಕ್ ಕುತೂಹಲ ಹುಟ್ಟುಹಾಕಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಹೋಂಡಾ ಸಂಸ್ಥೆಯು ಮುಂಬರುವ ದಿನಗಳಲ್ಲಿ 2ನೇ ತಲೆಮಾರಿನ ಬ್ರಿಯೊ ಹ್ಯಾಚ್‌ಬ್ಯಾಕ್ ಮಾದರಿಯನ್ನು ಪರಿಚಯಿಸಲು ಸಜ್ಜಾಗುತ್ತಿದ್ದು, ಅದೇ ಪ್ಯಾಟ್‌ಫಾರ್ಮ್‌ ಅಡಿಯಲ್ಲಿ ಅಭಿವೃದ್ಧಿಯಾಗಿರುವ ಸ್ಮಾಲ್ ಆರ್‌ಎಸ್ ಪರಿಕಲ್ಪನಾ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆಯೂ ಮಹತ್ವದ ಸುಳಿವು ನೀಡಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಸಂಪೂರ್ಣ ಸ್ಪೋರ್ಟಿ ಡಿಸೈನ್ ಆಧಾರದ ಮೇಲೆ ನಿರ್ಮಾಣವಾಗಿರುವ ಹೋಂಡಾ ಸ್ಮಾಲ್ ಆರ್‌ಎಸ್ ಕಾರುಗಳು ಹಲವು ವಿಭಿನ್ನತೆಯನ್ನು ಹೊಂದಿದ್ದು, ವಿಶೇಷ ಫ್ರಂಟ್ ಬಂಪರ್, ಸೈಡ್ ಗ್ರಿಲ್, ಹುಡ್ ಸ್ಕೂಪ್ ಮತ್ತು ಸೈಡ್ ಸ್ಟಿಕರ್ ಪಡೆದುಕೊಂಡಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಇದರ ಜೊತೆಗೆ ಮೂರು ವಿವಿಧ ಹಂತದ ಏರ್ ಇನ್‌ಟೆಕ್‌ನೊಂದಿಗೆ ಎಲ್ಇಡಿ ಸ್ಟ್ರೀಪ್, ಫೇಸ್‌ಲಿಫ್ಟ್ ಮೊಬಿಲಿಯೊ ಮಾದರಿಯ ಪಿಯಾನೊ ಬ್ಲ್ಯಾಕ್, ಮುಂಭಾಗದ ಮಧ್ಯದಲ್ಲಿ ಹೋಂಡಾ ಲೊಗೊ ಇದ್ದು, ಇದು ಕಾರಿನ ಹೊರ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತಂದಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಇನ್ನು ಹೊಸ ಕಾರಿನಲ್ಲಿ ಹೆಚ್ಚಿನ ಬದಲಾವಣೆಯಾಗಿ ಸ್ಪೋರ್ಟಿ ಮಾದರಿಯ ಲಾರ್ಜ್ ರೂಫ್ ಸ್ಪಾಯ್ಲರ್, ಅಲಾಯ್ ಚಕ್ರಗಳು, ಫ್ಲಕ್ಸ್ ಡಿಸ್ಫ್ಯೂರ್ ಗ್ರಾಸ್ ಬೂಟ್ ಲಿಡ್, ಟೈಲ್ ಗೇಟ್, ಟ್ವಿನ್ ಎಕ್ಸಾಸ್ಟ್ ಮತ್ತು ಫೋರ್ಡ್ ಫಿಗೊ ಮಾದರಿಯ ಟೈಲ್ ಗೇಟ್ ಪಡೆದುಕೊಂಡಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಎಂಜಿನ್ ಸಾಮರ್ಥ್ಯ

ಸ್ಮಾಲ್ ಆರ್‌ಎಸ್ ಎಂಜಿನ್ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದ್ರು ಕೆಲವು ವರದಿಗಳ ಪ್ರಕಾರ 1.4-ಲೀಟರ್ ವಿಟೆಕ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಗಳಿದ್ದು, ಫೌರ್ ಸಿಲಿಂಡರ್‌ನೊಂದಿಗೆ 88 ಬಿಎಚ್‌ಪಿ ಮತ್ತು 109ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಈ ಮೂಲಕ ಹ್ಯಾಚ್‌ಬ್ಯಾಕ್ ಪರ್ಫಾಮೆನ್ಸ್ ಇಷ್ಟಪಡುವ ಕಾರು ಪ್ರಿಯರಿಗೆ ಇದೊಂದು ಉತ್ತಮ ಆಯ್ಕೆಯಾಗಿರಲಿದ್ದು, ಸ್ಮಾರ್ಟ್ ಕನೆಕ್ಟಿವಿಟಿ, ಟೆಕ್ ಫ್ರೇಂಡ್ಲಿ ಆಪ್ಶನ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಂಡ್ರಾಯಿಡ್ ಆಟೋ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಹೋಂಡಾ ಸ್ಮಾಲ್ ಆರ್‌ಎಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಬ್ರಿಯೊ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಹೋಂಡಾ ಸಂಸ್ಥೆಯು ಅದೇ ಪ್ಲ್ಯಾಟ್‌ಫಾರ್ಮ್ ಅಡಿ ಸ್ಮಾಲ್ ಆರ್‌ಎಸ್ ಅಭಿವೃದ್ಧಿ ಮಾಡಿದೆ. ಹೀಗಾಗಿ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರಿನ ಬಿಡುಗಡೆಯ ದಿನಾಂಕ ಮತ್ತು ಬೆಲೆ ಬಗ್ಗೆ ಹೋಂಡಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಮಾಹಿತಿಯನ್ನು ಬಿಡುಗಡೆ ಮಾಡಲಿದೆ.

Most Read Articles

Kannada
Read more on honda hatchback
English summary
Honda Small RS Concept Unveiled — Previews The New Brio Hatchback.
Story first published: Friday, April 20, 2018, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X