127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಕೆಲವರಿಗೆ ಕಾನೂನು ಉಲ್ಲಂಘನೆ ಮಾಡುವುದು ಅಂದ್ರೆ ಒಂದು ಥರಾ ಮಾಜಾ ಅಂತಾ ಕಾಣುತ್ತೆ. ಯಾಕೇಂದ್ರೆ ಇಲ್ಲೊಬ್ಬ ಕಾರು ಮಾಲೀಕ 127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಲ್ಲದೇ ಲಕ್ಷಾಂತರ ರೂಪಾಯಿ ದಂಡ ಹಾಕಿಸಿಕೊಂಡಿದ್ದಾನೆ.

By Praveen Sannamani

ಕೆಲವರಿಗೆ ಕಾನೂನು ಉಲ್ಲಂಘನೆ ಮಾಡುವುದು ಅಂದ್ರೆ ಒಂದು ಥರಾ ಮಾಜಾ ಅಂತಾ ಕಾಣುತ್ತೆ. ಯಾಕೇಂದ್ರೆ ಇಲ್ಲೊಬ್ಬ ಕಾರು ಮಾಲೀಕ 127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಲ್ಲದೇ ಲಕ್ಷಾಂತರ ರೂಪಾಯಿ ದಂಡ ಹಾಕಿಸಿಕೊಂಡಿದ್ದಾನೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಸಾಮಾನ್ಯವಾಗಿ ಬಹುತೇಕ ವಾಹನ ಸವಾರರು ಒಂದಿಲ್ಲಾ ಒಂದು ರೀತಿಯಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿಯೇ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಕಾರು ಮಾಲೀಕ ಮಾತ್ರ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 127 ಬಾರಿ ಓವರ್ ಸ್ಪೀಡಿಂಗ್ ಮಾಡಿ ಕೇಸ್ ಜಡಿಸಿಕೊಂಡಿದ್ದಾನೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಅಂದಹಾಗೆ ಈ ವಿಚಿತ್ರ ಪ್ರಕರಣ ನಡೆದಿರುವುದು ಹೈದ್ರಾಬಾದ್‌ನಲ್ಲಿ. ತೆಲಂಗಾಣ ನೋಂದಣಿಯ ಹೋಂಡಾ ಝಾ ಕಾರು ಮಾಲೀಕನು ಇಂತದೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, 127 ಪ್ರಕರಣಗಳಲ್ಲಿ ಸರಾಸರಿ ಪ್ರತಿ ಗಂಟೆಗೆ 163 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿದ್ದಾನೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಸದ್ಯ ಪೊಲೀಸರ ಕೈ ಸಿಕ್ಕಿಬಿದ್ದಿರುವ ಕಾರಿನ ನೋಂದಣಿ ಸಂಖ್ಯೆಯನ್ನು ಬಹಿರಂಗಗೊಳಿಸಲಾಗಿದ್ದು, ಟಿಎಸ್09, ಇಆರ್2975 ನೋಂದಣಿ ಸಂಖ್ಯೆಯ ಹೋಂಡಾ ಝಾ ಕಾರು ಮಾಲೀಕನಿಗೆ ಇ ಚಲನ್ ಮೂಲಕ ದಂಡ ವಿಧಿಸಲಾಗಿದೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ದಾಖಲಾದ 127 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಹೈದ್ರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲೇ ನಡೆದಿದ್ದು, ಕಾನೂನು ಬಾಹಿರವಾಗಿ ಓವರ್ ಸ್ಪೀಡ್ ಮಾಡಿದ ಹಿನ್ನೆಲೆ 127 ಪ್ರಕರಣಗಳಿಂದ ಬರೋಬ್ಬರಿ 1 ಲಕ್ಷ 80 ಸಾವಿರ ದಂಡ ವಸೂಲಿ ಮಾಡಲಾಗಿದೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೈದ್ರಾಬಾದ್‌ನ ಔಟರ್ ರಿಂಗ್ ರಸ್ತೆಯಲ್ಲಿ ಸದ್ಯ ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ವೇಗವನ್ನು ಮಿತಗೊಳಿಸಲಾಗಿದೆ. ಹೀಗಿದ್ದರೂ, ಹೋಂಡಾ ಝಾ ಕಾರು ಮಾಲೀಕ ಮಾತ್ರ ಪ್ರತಿ ಸರಿ ಗಂಟೆಗೆ 160 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲೇ ಚಲಿಸಿದ್ದಲ್ಲೇ ಇತರೆ ವಾಹನ ಸವಾರರಿಗೂ ಕಿರಿಕಿರಿ ಉಂಟು ಮಾಡಿದ್ದ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೀಗಾಗಿ ತಲಾ ಒಂದು ಓವರ್ ಸ್ಪೀಡ್ ಪ್ರಕರಣಕ್ಕೆ ರೂ.1,435ರಂತೆ ಒಟ್ಟು 127 ಪ್ರಕರಣಗಳಿಗೆ ರೂ. 1,82,245 ವಸೂಲಿ ಮಾಡಲಾಗಿದ್ದು, ಇದರಲ್ಲಿ ಪ್ರತಿ ಪ್ರಕರಣದ ಮೇಲೂ ರೂ.35 ಬಳಕೆದಾರರ ಶುಲ್ಕವನ್ನು ಸೇರಿಸಲಾಗಿದೆ.

127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದಿ ಈ ಕಾರಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ 127 ಪ್ರಕರಣಗಳು ದಾಖಲಾಗುವ ತನಕವು ಒಂದು ಬಾರಿಯೂ ಹೋಂಡಾ ಕಾರಿನ ಮಾಲೀಕ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಆದ್ರೆ ಈ ಬಾರಿ ಅವನ ಅದೃಷ್ಟ ಕೆಟ್ಟಿತ್ತು ಅಂತಾ ಕಾಣುತ್ತೆ. ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ದಂಡ ಕಟ್ಟಲು ಪರಿತಪಿಸುತ್ತಿದ್ದಾನೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

02. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

03. ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ- ಬೆಲೆ ಎಷ್ಟು?

04. ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

05. ಮೈಲೇಜ್ ವಿಚಾರದಲ್ಲಿ ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

Most Read Articles

Kannada
Read more on traffic rules police
English summary
This Dude In Hyderabad Gets Speeding Fines Of Rs 1.8 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X