ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ದಕ್ಷಿಣ ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಸ್ಯಾಂಟ್ರೊ ಹ್ಯಾಚ್‍‍ಬ್ಯಾಕ್ ಕಾರನ್ನು ಬದಾಲಾವಣೆಗಳೊದೊಂದಿಗೆ ಮತ್ತೇ ಬಿಡುಗಡೆಗೊಳಿಸುತ್ತಿರುವ ವಿಷಯ ಬಹುತೇಕರಿಗೆ ತಿಳಿದಿದೆ. ಆದರೆ ಮಾಹಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಅಕ್ಟೋಬರ್ 10ರಿಂದ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರುಮಾಡಲಿದೆ ಎನ್ನಲಾಗಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಹ್ಯುಂಡೈ ಸಂಸ್ಥೆಯು ತಮ್ಮ ಹೊಸ ಸ್ಯಾಂಟ್ರೊ ಕಾರನ್ನು ಅದ್ದೂರಿಯಾಗಿ ಅಕ್ಟೋಬರ್ 9ರಂದು ಬಹಿರಂಗಗೊಳಿಸಲಿದ್ದು, ಮುಂದಿನ ದಿನ (ಅಕ್ಟೋಬರ್ 10-2018) ರಿಂದ ಪ್ರೀ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಲಿದೆ. ಈ ಪ್ರೀ-ಬುಕ್ಕಿಂಗ್ ಪ್ರಕ್ರಿಯೆಯು ಅಕ್ಟೋಬರ್ 22ರಂದು ಕೊನೆಗೊಳ್ಳಲಿದೆ ಎಂದು ಕೂಡಾ ಮಾಹಿತಿ ಸಿಕ್ಕಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಇನ್ನು ಹ್ಯುಂಡೈ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಟ್ಟು ಅಕ್ಟೊಬರ್ 23ಕ್ಕೆ 20 ವರ್ಷಗಳಾಗುವ ಸಂದರ್ಭದಲ್ಲಿ, ಅದೇ ದಿನದಂದು ಸಂಸ್ಥೆಯ ಮಾರಾಟದಲ್ಲಿ ಹಲವಾರು ಯಶಸ್ಸನ್ನು ನೀಡಿದ ಸ್ಯಾಂಟ್ರೋ ಕಾರನ್ನು ಮತ್ತೇ ಬಿಡುಗಡೆಗೊಳಿಸಲಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಹೊಸದಾಗಿ ಬರಲಿರುವ ಸ್ಯಾಂಟ್ರೋ ಕಾರುಗಳು ಈಗಾಗಲೆ ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿ ದೊರೆತಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ. ಆದರೇ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸದಿರಲು ಹ್ಯುಂಡೈ ನಿರ್ಧರಿಸಿದೆ ಎನ್ನಲಾಗಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಇದರ ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರುಗಳಲ್ಲಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲ್ ಬಾಯ್ ಡಿಸೈನ್ ಹೊಂದಿರಲಿವೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಬಿಡುಗಡೆಗೊಳ್ಳಲಿರುವ ಹೊಸ ಹ್ಯುಂಡೈ ಸ್ಯಾಂಟ್ರೊ ಕಾರಿನ ಒಳಭಾಗದಲ್ಲಿ ಪ್ರೀಮಿಯಮ್ ಫೀಚರ್‍‍ಗಳನ್ನು ನೀಡಲಾಗಿದ್ದು, ಡ್ಯುಯಲ್-ಟೋನ್ ಬ್ಲಾಕ್ ಅಥವಾ ಉಣ್ಣೆ ಬಟ್ಟೆಯಿಂದ ಸಜ್ಜುಗೊಳಿಸಲಾಗಿದೆ. ಇದಲ್ಲದೇ 3 ಸ್ಪೋಕ್ ಸ್ಟೀರಿಂಗ್ ವ್ಹೀಲ್ಸ್, ಮಲ್ಟಿ ಇನ್ಫಾರ್ಮೇಷನ್ ಆಯ್ಕೆಯನ್ನು ಡ್ಯುಯಲ್ ಪಾಡ್ ಇಸ್ಟ್ರೂಮೆಂಟ್ ಕ್ಲಸ್ಟರ್ ಹಾಗು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಪಡೆಯಲಿದೆ ಎನ್ನಲಾಗಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಸ್ಯಾಂಟ್ರೊ ಹೊಸ ಕಾರುಗಳನ್ನ ಅಕ್ಟೋಬರ್ 23ರಂದು ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.4 ಲಕ್ಷದಿಂದ ರೂ. 4.60 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಶೀಘ್ರವೇ ಹೊಸ ಸ್ಯಾಂಟ್ರೊ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಶುರು

ಇನ್ನು ಮಾರುಕಟ್ಟೆಗೆ ಮತ್ತೆ ಮೋಡಿ ಮಾಡಲು ಬರಲಿರುವ ಹ್ಯುಂಡೈ ಸ್ಯಾಂಟ್ರೊ ಕಾರುಗಳು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ರೆನಾಲ್ಟ್ ಕ್ವಿಡ್, ಟಾಟಾ ಟಿಯಾಗೊ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ವ್ಯಾಗನಾರ್ ಮತ್ತು ಇನ್ನಿತರೆ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿರುವ ತವಕದಲ್ಲಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಇದಕ್ಕೆ ಪೂರಕ ಎನ್ನವಂತೆ ಮಾರುತಿ ಸುಜುಕಿ ಸಂಸ್ಥೆಯು ಎಂಟ್ರಿ ಲೆವಲ್ ಕಾರುಗಳಲ್ಲಿ ಅಭಿವೃದ್ಧಿಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಪ್ರಥಮ ಎಲೆಕ್ಟ್ರಿಕ್ ಕಾರು ಆವೃತ್ತಿಯಾಗಿ ವ್ಯಾಗನ್‍ ಆರ್ ಕಾರನ್ನು ಬಹಿರಂಗಗೊಳಿಸಿದೆ. ಇಷ್ಟೆ ಅಲ್ಲದೇ ಮುಂದಿನ ತಿಂಗಳಿನಿಂದ ಈ ಕಾರಿನ ಟೆಸ್ಟಿಂಗ್ ಅನ್ನು ಕೂಡಾ ಶುರುಮಾಡಲಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಮಾರುತಿ ಸುಜುಕಿಯು ಇ-ವರ್ಷನ್ ವ್ಯಾಗನ್‍ಆರ್ ಕಾರನ್ನು ಟೊಯೊಟಾ ಜೊತೆಗೂಡಿ ಉತ್ಪಾದಿಸಲಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಸ್ಪರ್ಧಾತ್ಮಕವಾಗಿ ಇರಲಿದೆ ಎನ್ನಲಾಗಿದೆ. ಮತ್ತು ಬ್ಯಾಟರಿಗಳ ಬೆಲೆ ಅಧಿಕವಿರುವ ಕಾರಣ ರೆಗ್ಯುಲರ್ ಮಾಡಲ್ ಮ್ಯಾಗನ್ ಆರ್ ಮಾದರಿಗಿಂತಾ ಎರಡರಷ್ಟು ಜಾಸ್ತಿ ಇರಲಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ವ್ಯಾಗನ್ಆರ್ ಇವಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರಲಿದ್ದು,2020ರ ಏಪ್ರಿಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರು ಗುಜರಾತ್‍‍ನಲ್ಲಿರುವ ಸುಜುಕಿ ಪ್ಲಾಂಟ್‍‍ನಲ್ಲಿ ತಯಾರಾಗಲಿದ್ದು, ಇದರ ಬ್ಯಾಟರಿಯ ಉತ್ಪಾದನೆಯನ್ನು ಟೊಯೊಟಾ ಜೊತೆಗಿನ ಪಾಲುದಾರಿಕೆಯಲ್ಲಿ ಉತ್ಪಾದಿಸುತ್ತೆವೆ ಎಂದು ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಮಾರುತಿ ಸುಜುಕಿ ಮತ್ತು ಟೊಯೊಟಾ ಪಾಲುದಾರಿಕೆಯಲ್ಲಿ ತಯಾರಾಗಲಿರುವ ಮೊದಲ ಎಲೆಕ್ಟ್ರಿಕ್ ಕಾರಾಗಿದ್ದು, ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‍‍ಟ್ರೈನ್ ಬ್ಯಾಟರಿಯನ್ನು ತಯಾರಿಸುವುದಾಗಿ ಹೇಳಿಕೊಂಡಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಜೊತೆಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರು ಕಡಿಮೆ ತೂಕದ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ. ಈ ಹೊಸ ಪ್ಲಾಟ್‍‍ಫಾರ್ಮ್ ಕಾರಿನ ತೂಕವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ವ್ಯಾಗನ್‍ಆರ್ ಇವಿ ಉತ್ಪಾದನೆಗೆ ಯಾವ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಮಾರುತಿ ಯೋಜಿಸುತ್ತಿದ್ದು, ಪ್ರಸ್ತುತ ತಲೆಮಾರಿನ ವ್ಯಾಗನ್‍ಆರ್ ಕಾರನ್ನು ಹರಿಯಾಣದ ಗುರ್‍‍‍ಗ್ರಾಮ್ ಪ್ಲಾಂಟ್‍‍ನಲ್ಲಿ ಉತ್ಪಾದಿಸುತ್ತಿದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಮಾಹಿತಿಗಳ ಪ್ರಕಾರ, ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ಆರ್ ಕಾರುಗಳನ್ನು ಕೂಡ ಅದೇ ಪ್ಲಾಂಟ್‍‍ನಲ್ಲಿ ಉತ್ಪಾದಿಸಲಿದೆ ಎಂದು ಹೇಳಲಾಗಿದ್ದು, ಕಾರಿನ ಬ್ಯಾಟರಿಯನ್ನು ಗುಜರಾತ್‍‍ನಿಂದ ತರಸಿಕೊಳ್ಳಲಾಗುತ್ತದೆ.

ಪ್ರದರ್ಶನಗೊಂಡ ಮಾರುತಿ ಸುಜುಕಿ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು..

ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು 1999ರಲ್ಲಿ ಬಿಡುಗಡೆಗೊಂಡಿದ್ದು, ಈ ಹಾಚ್‍‍ಬ್ಯಾಕ್ ಕಾರು ಇದೀಗ 20 ಲಕ್ಷಕ್ಕೂ ಹೆಚ್ಚು ಯೂನಿಟ್ ಮಾರಾಟಗೊಂಡಿವೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಲಭ್ಯವಿದ್ದು, ಹೊಸ ತಲೆಮಾರಿನ ವ್ಯಾಗನ್‍ಆರ್ ಕಾರು ಇದೇ ವರ್ಷ ಬಿಡುಗಡೆಗೊಳ್ಳಲಿದೆ.

Most Read Articles

Kannada
Read more on hyundai santro hatchback
English summary
Hyundai AH2 (Santro) Pre-Bookings To Begin Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X