ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಜನಪ್ರಿಯ ಹ್ಯಾಚ್‍‍ಬ್ಯಾಕ್ ಕಾರು ಹ್ಯುಂಡೈ ಐ20 ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‍ನ ವೇಳೆ ಅತಿ ಕಡಿಮೆ ರೇಟಿಂಗ್ ಪಡೆದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ವೇಳೆ ಅತಿ ಕಡಿಮೆ ಅಂಕದೊಂದಿಗೆ ಸಾಧಾರಣ ಕಾರು ಆವೃತ್ತಿಯಾಗಿ ಹೊರಹೊಮ್ಮಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಹ್ಯುಂಡೈ ಐ20 ಕಾರು ಅತಿಹೆಚ್ಚು ಜನಪ್ರಿಯ ಮಾದರಿಯಾಗಿದ್ದರೂ, ಪ್ರಯಾಣಿಕ ಸುರಕ್ಷತೆ ವಿಚಾರಕ್ಕೆ ಬಂದಾಗ ಕಳಪೆ ಗುಣಮಟ್ಟದ ಕಾರು ಮಾದರಿ ಎಂಬುವುದು ಸಾಬೀತಾಗಿದೆ. ಹಾಗಾದ್ರೆ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ನಡೆಸಿದ ಪರೀಕ್ಷೆಯ ಸಂಪೂರ್ಣ ವರದಿಯಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ..

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಇದೇ ಮೊದಲ ಬಾರಿಗೆ #SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಅದಕ್ಕಾಗಿಯೇ ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಕ್ರ್ಯಾಶ್ ಟೆಸ್ಟ್‌ಗಳನ್ನು ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಯುರೋ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗಾಗಿ ರೇಟಿಂಗ್ ನೀಡುತ್ತವೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಇದರಲ್ಲಿ ಹ್ಯುಂಡೈ ಐ20 ಕಾರುಗಳು ಕೇವಲ 3 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಮಾತ್ರವೇ ಶಕ್ತವಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಿಯಮದ ಪ್ರಕಾರ 4 ಸ್ಟಾರ್ ರೇಟಿಂಗ್‌ಗಿಂತ ಕಡಿಮೆ ರೇಟಿಂಗ್ ಹೊಂದಿರುವ ಕಾರುಗಳಿಂದ ಪ್ರಯಾಣಿಕರಿಗೆ ಗುಣಮಟ್ಟದ ಸುರಕ್ಷತೆ ಒದಗಿಸಲು ಅಸಾಧ್ಯ ಎನ್ನಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಕ್ರ್ಯಾಶ್ ಟೆಸ್ಟಿಂಗ್‍ನ ಕುರಿತಾಗಿ ಗ್ಲೋಬಲ್ ಎನ್‍ಸಿಎಪಿ " ಪರೀಕ್ಷೆಯಲ್ಲಿ ಇಬ್ಬರು ಪ್ರಾಯದ ವಯಸ್ಕರ ಎದೆ ಭಾಗಕ್ಕೆ ಹೆಚ್ಚು ಗಾಯವನ್ನು ಉಂಟು ಮಾಡಿದ ಪರಿಣಾಮ ಕೇವಲ ಮೂರು ಅಂಕಗಳನ್ನು ನೀಡಲಾಗಿದೆ. ಜೊತೆಗೆ ಈ ಕಾರು ಕಳಪೆ ಗುಣಮಟ್ಟದ ರಕ್ಷಣಾ ಉಪಕರಣಗಳನ್ನು ಪಡೆದುಕೊಂಡಿರುವುದರಿಂದ ಡ್ರೈವರ್ ಹಾಗೂ ಮುಂಭಾಗದಲ್ಲಿ ಕೂರುವ ಪ್ರಯಾಣಿಕರ ಮೊಣಕಾಲುಗಳಿಗೂ ಕೂಡಾ ರಕ್ಷಣೆ ಇಲ್ಲ ಎಂದು ಹೇಳಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು, ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತದೆ. ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಇದೀಗ ಹ್ಯುಂಡೈ ಐ20 ಕೂಡಾ 3 ಸ್ಟಾರ್ ರೇಟಿಂಗ್ ಪಡೆದಿದ್ದು, ಅಪಘಾತ ಸಂದರ್ಭಗಳಲ್ಲಿ ಯುವಕರಿಗೆ ಶೇ.71ರಷ್ಟು ಸುರಕ್ಷತೆ, ಮಕ್ಕಳಿಗೆ ಶೇ.66ರಷ್ಟು ಸುರಕ್ಷತೆ ಮತ್ತು ವೃದ್ದರಿಗೆ ಶೇ.56 ರಷ್ಟು ಸುರಕ್ಷತೆ ನೀಡುವಲ್ಲಿ ಮಾತ್ರ ಶಕ್ತವಾಗಿದೆ.

ಹ್ಯುಂಡೈ ಐ20 ಸುರಕ್ಷತೆ ಬಗ್ಗೆ ನಡೆಸಲಾಗುವ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ನೋಡಿ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಹೀಗಾಗಿ ಕಾರು ಖರೀದಿದಾರರು ಕೇವಲ ಜನಪ್ರಿಯತೆ ಆಧಾರದ ಮೇಲೆ ಕಾರು ಆಯ್ಕೆ ಮಾಡುವುದಕ್ಕಿಂತ ಸುರಕ್ಷತೆಯನ್ನು ಹೊಂದಿರುವ ಕಾರುಗಳನ್ನು ಆಯ್ಕೆ ಮಾಡುವ ಅವಶ್ಯಕತೆಯಿದ್ದು, ಕೇವಲ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಇಂತಹ ಕಾರುಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಹತ್ತು ಬಾರಿ ಯೋಚನೆ ಮಾಡಿ.

Most Read Articles

ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡಲಿರುವ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರಿನ ಫೋಟೋ ಗ್ಯಾಲರಿ..

Kannada
English summary
Hyundai i20 Global NCAP Crash Test Results Revealed — Gets Three-Star Safety Rating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X