ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಬಂಡವಾಳ ಹೂಡಿಕೆ

ದೇಶಿಯ ಮಾರುಕಟ್ಟೆಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮಾರುತಿ ಸುಜುಕಿ ನಂತರ 2ನೇ ಅತಿದೊಡ್ಡ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುತ್ತಿದೆ.

By Praveen Sannamani

ದೇಶಿಯ ಮಾರುಕಟ್ಟೆಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮಾರುತಿ ಸುಜುಕಿ ನಂತರ 2ನೇ ಅತಿದೊಡ್ಡ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುತ್ತಿದ್ದು, ಇದಕ್ಕಾಗಿ ಬರೋಬ್ಬರಿ 6,500 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

2020ರ ವೇಳೆಗೆ ಪ್ರತಿ ವರ್ಷ 1 ಮಿಲಿಯನ್ ಹೆಚ್ಚುವರಿ ಕಾರುಗಳ ಉತ್ಪಾದನೆಯ ಗುರಿಹೊಂದಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಇದಕ್ಕಾಗಿ ಬೃಹತ್ ಯೋಜನೆಯೊಂದನ್ನು ರೂಪಿಸುತ್ತಿದ್ದು, ಇದರ ಜೊತೆಗೆ ವಿವಿಧ ಮಾದರಿಯ 9 ಹೊಸ ಕಾರು ಆವೃತ್ತಿಗಳನ್ನು ಸಹ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶ ಹೊಂದಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

ಈ ಹಿನ್ನೆಲೆ ತನ್ನ ಕಾರು ಉತ್ಪಾದನಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಪ್ರತಿ ವರ್ಷ 50 ಸಾವಿರ ಹೆಚ್ಚುವರಿ ಹೊಸ ಕಾರುಗಳನ್ನು ಉತ್ಪಾದಿಸುವ ಮೂಲಕ 2019ರ ವೇಳೆಗೆ ವಾರ್ಷಿಕವಾಗಿ 7.5 ಲಕ್ಷ ಕಾರುಗಳ ಮಾರಾಟ ಮಾಡಲಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ನಂತರ ಹ್ಯುಂಡೈ ಕಾರುಗಳಿಗೆ ಭಾರೀ ಬೇಡಿಕೆಯಿದ್ದು, ಇದೇ ಕಾರಣಕ್ಕೆ ಹೊಸ ಮಾದರಿಯ ಪ್ಯಾಸೆಂಜರ್ ಕಾರುಗಳು ಸೇರಿದಂತೆ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳನ್ನು ಸಹ ಬಿಡುಗಡೆ ಮಾಡಲಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಇಂಡಿಯಾ ಎಂ.ಡಿ ವೈ.ಕೆ.ಕೂ ಅವರು, ಜಾಗತಿಕವಾಗಿ ಭಾರತವು ಆಟೋ ಉದ್ಯಮದಲ್ಲಿ ಉತ್ತಮ ಭವಿಷ್ಯ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹ್ಯುಂಡೈ ಸಂಸ್ಥೆಯು ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಉತ್ಸುಕವಾಗಿದೆ ಎಂದಿದ್ದಾರೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

ಇದರಿಂದ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ತೀವ್ರಗೊಳಿಸಲಿರುವ ಹ್ಯುಂಡೈ ಸಂಸ್ಥೆಯು ಇದಕ್ಕಾಗಿ ವಿಫುಲ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಲಿದ್ದು, ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೊಂದಿಗೆ ಮತ್ತಷ್ಟು ಪೈಪೋಟಿ ನಡೆಸಲಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಹ್ಯುಂಡೈ ಇಂಡಿಯಾದಿಂದ 6,500 ಕೋಟಿ ಹೂಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗುಣಮಟ್ಟದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹ್ಯುಂಡೈ ಸಂಸ್ಥೆಯು ಈಗಾಗಲೇ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಬೃಹತ್ ಬಂಡವಾಳ ಹೂಡಿಕೆಯೊಂದಿಗೆ ಕಾರು ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ.

Most Read Articles

Kannada
English summary
Hyundai Motors India To Invest Rs 6,500 Crore — To Increase Production Capacity By 50,000 Units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X