ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

By Praveen Sannamani

ದೇಶದ ಎರಡನೇ ಅತಿ ದೊಡ್ಡ ವಾಹನ ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯ ವಿವಿಧ ಕಾರು ಉತ್ಪನ್ನಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದು, ಸದ್ಯ ಮತ್ತೊಂದು ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸುಳಿವು ನೀಡಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಜೀಪ್ ಕಂಪಾಸ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಹೊಣೆ ಹೊತ್ತಿರುವ ಫಿಯೆಟ್ ಕೈಸ್ಲರ್ ಆಟೋಮೊಬೈಲ್ ಸಂಸ್ಥೆಯು ತನ್ನ ಷೇರು ಮಾರಾಟಕ್ಕೆ ಮುಂದಾಗಿದ್ದು, ಫಿಯೆಟ್ ಕೈಸ್ಲರ್ ಷೇರು ಖರೀದಿಸಲು ಹಲವು ಕಾರು ಉತ್ಪಾದನಾ ಸಂಸ್ಥೆಗಳು ಮುಂದೆ ಬಂದಿವೆ. ಇದರಲ್ಲಿ ಹ್ಯುಂಡೈ ಸಂಸ್ಥೆ ಕೂಡಾ ಒಂದಾಗಿದ್ದು, ಒಂದು ವೇಳೆ ಮೆಗಾ ಡೀಲ್ ಹ್ಯುಂಡೈ ಪರವಾದ್ರೆ ಜೀಪ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಹೊಣೆ ಹ್ಯುಂಡೈ ಪಾಲಾಗಲಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಹ್ಯುಂಡೈ ಮತ್ತು ಎಂಜಿ ಮೋಟಾರ್ಸ್ ನಡುವೆ ಪೈಪೋಟಿ

ಫಿಯೆಟ್ ಕೈಸ್ಲರ್ ಸಂಸ್ಥೆಯು ಯಾವಾಗ ತನ್ನ ಷೇರು ಮಾರಾಟಕ್ಕೆ ಮುಂದಾಯ್ತೊ ಷೇರು ಖರೀದಿಸಲು ಹಲವು ಆಟೋ ಉತ್ಪಾದನಾ ಸಂಸ್ಥೆಗಳು ತಾನು ನಾನು ಮುಂದು ದೊಂಬಾಲು ಬಿದ್ದಿವೆ. ಅದರಲ್ಲಿ ಹ್ಯುಂಡೈ ಮತ್ತು ಎಂಜಿ ಮೋಟಾರ್ಸ್ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಆದ್ರೆ ಫಿಯೆಟ್ ಕೈಸ್ಲರ್ ಸಂಸ್ಥೆಯು ಮೂಲತಃ ಅಮೆರಿಕದ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಚೀನಾ ಮೂಲದ ಎಂಜಿ ಮೋಟಾರ್ಸ್‌ ಸಂಸ್ಥೆಯನ್ನು ತನ್ನ ಪಾಲುದಾರರನ್ನಾಗಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಇದಕ್ಕೆ ಕಾರಣ, ಕೊರಿಯಾ ಮೂಲದ ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ಸದ್ಯ ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಸಂಸ್ಥೆಯಾದ ಫಿಯೆಟ್ ಕೈಸ್ಲರ್ ಸಂಸ್ಥೆಯು ಎಂಜಿ ಮೋಟಾರ್ಸ್ ಬದಲಾಗಿ ಹ್ಯುಂಡೈಗೆ ತನ್ನ ಷೇರುಗಳನ್ನು ಮಾರಾಟಬಹುದು.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಹೀಗಿದ್ದರೂ ಫಿಯೆಟ್ ಕೈಸ್ಲರ್ ಸಂಸ್ಥೆಯ ಷೇರು ಖರೀದಿಸಲು ಎಂಜಿ ಮೋಟಾರ್ಸ್ ಸಂಸ್ಥೆಯು ಲಾಭಿ ನಡೆಸಿದ್ದು, ಅಂತಿಮವಾಗಿ ಜೀಪ್ ಸಂಸ್ಥೆಯು ಯಾರ ಪಾಲಾಗುತ್ತೆ ಎನ್ನುವುದೇ ಸದ್ಯದ ಕುತೂಹಕಾರಿ ಪ್ರಶ್ನೆಯಾಗಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಒಂದು ವೇಳೆ ಫಿಯೆಟ್ ಕೈಸ್ಲರ್ ಸಂಸ್ಥೆಯ ಷೇರುಗಳು ಹ್ಯಂಡೈ ಮೋಟಾರ್ಸ್ ಪಾಲಾದ್ದಲ್ಲಿ ಕೊರಿಯಾ ಜೊತೆಗಿನ ಅಮೆರಿಕದ ಬಾಂಧವ್ಯಕ್ಕೆ ಮತ್ತೊಂದು ಸಾಕ್ಷಿಯಾಗಲಿದ್ದು, ಎಂಜಿ ಮೋಟಾರ್ಸ್ ಈ ಅವಕಾಶವನ್ನು ಕಳೆದುಕೊಂಡಲ್ಲಿ ಚೀನಾ ವಿರೋಧಿಸುವ ಅಮೆರಿಕ ಅಧ್ಯಕ್ಷ ಟ್ರಂಫ್ ನಡೆ ಮತ್ತೊಮ್ಮೆ ಜಗಜಾಹೀರಾಗಲಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಈ ಬಗ್ಗೆ ಹ್ಯುಂಡೈ ಸಿಇಒ ಚುಂಗ್ ಮೊಂಗ್ ಕೂ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಫಿಯೆಟ್ ಕೈಸ್ಲರ್ ಸಂಸ್ಥೆಯ ಮುಖ್ಯಸ್ಥ ಸಾರ್ಗಿಯೋ ಮಾರ್ಚಿಯೋನೆ ಅವರ ನಿವೃತ್ತಿಗೂ ಮುನ್ನವೇ ಜಗತ್ತಿನ ಅತಿದೊಡ್ಡ ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಡೆಸಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಹ್ಯುಂಡೈ ಪಾಲಾದ್ರೆ ಏನು ಲಾಭ?

ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳನ್ನು ಹೊರತುಪಡಿಸಿ ಏಷಿಯಾ ರಾಷ್ಟ್ರಗಳಲ್ಲಿ ಅಷ್ಟಕ್ಕಷ್ಟೇ ಕಾರು ಮಾರಾಟ ಜಾಲವನ್ನು ಹೊಂದಿರುವ ಜೀಪ್ ಸಂಸ್ಥೆಯು ಹ್ಯುಂಡೈ ಪಾಲಾದ್ರೆ ಹೊಸ ಸಂಚಲಯನವೇ ಸೃಷ್ಠಿಯಾಗಲಿದ್ದು, ಹ್ಯುಂಡೈ ತನ್ನ ಮಾರಾಟ ಜಾಲದ ಮೂಲಕ ಜೀಪ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಅಧ್ಯಾಯ ಶುರು ಮಾಡಲಿದೆ.

ಜೀಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹ್ಯುಂಡೈ?

ಇನ್ನು ಎಂಜಿ ಮೋಟಾರ್ಸ್ ಸಂಸ್ಥೆಯು ಮೂಲತಃ ಬ್ರಿಟಿಷ್ ಕಾರು ಉತ್ಪಾದನಾ ಸಂಸ್ಥೆಯಾಗಿದ್ದರೂ ನಷ್ಟದಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಸೈಕ್ ಸಂಸ್ಥೆಯು ತನ್ನ ಅಧೀನಕ್ಕೆ ತೆಗೆದುಕೊಂಡು ಹೊಸ ಕಾರುಗಳ ಉತ್ಪಾದನೆಯ ಜವಾಬ್ದಾರಿ ಹೊತ್ತಿದ್ದು, 2019ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಬರೋಬ್ಬರಿ 8 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಉತ್ಪಾದನಾ ಘಟಕವನ್ನು ಆರಂಭ ಮಾಡಿದೆ.

Most Read Articles

Kannada
Read more on hyundai jeep
English summary
Hyundai might acquire FCA along with Jeep, Dodge.
Story first published: Saturday, June 30, 2018, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X