ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಹ್ಯುಂಡೈ ಇಂಡಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ವೆರ್ನಾ ಸೆಡಾನ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ವೆರ್ನಾ 1.4-ಲೀಟರ್ ಡೀಸೆಲ್ ಎಂಜಿನ್ ವೆರಿಯೆಂಟ್ ಅನ್ನು ಬಿಡುಗಡೆ ಮಾಡಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಹ್ಯುಂಡೈ ಸಂಸ್ಥೆಯು 1.4-ಲೀಟರ್ ಡೀಸೆಲ್ ವೆರಿಯೆಂಟ್‌ನಲ್ಲೇ ಇ ಮತ್ತು ಇಎಕ್ಸ್ ಎನ್ನುವ ಆವೃತ್ತಿಗಳನ್ನು ಹೊರತಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯನ್ನು 1.4 ಇ ಆವೃತ್ತಿಗೆ ರೂ. 9.29 ಲಕ್ಷ ಮತ್ತು 1.4 ಇಎಕ್ಸ್ ಆವೃತ್ತಿಗೆ ರೂ. 9.99 ಲಕ್ಷಕ್ಕೆ ನಿಗದಿಗೊಳಿಸಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಹಾಗೆಯೇ ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವೆರ್ನಾ 1.6-ಲೀಟರ್ ವೆರಿಯೆಂಟ್‌ನಲ್ಲಿ ಹೊಸದಾಗಿ ಎಸ್ಎಕ್ಸ್ ಪ್ಲಸ್(ಪೆಟ್ರೋಲ್ ಆಟೋಮ್ಯಾಟಿಕ್) ಮತ್ತು ಎಸ್ಎಕ್ಸ್ ಒ (ಡೀಸೆಲ್ ಆಟೋಮ್ಯಾಟಿಕ್) ಆವೃತ್ತಿಗಳನ್ನು ಹೊರತಂದಿರುವ ಹ್ಯುಂಡೈ, ಮಾರುತಿ ಸಿಯಾಜ್ ಕಾರಿಗೆ ಟಕ್ಕರ್ ನೀಡುವ ನೀರಿಕ್ಷೆಯಲ್ಲಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಹ್ಯುಂಡೈ ಈ ಹಿಂದೆ 2017ರಲ್ಲೇ ಹೊಸ ತಲೆಮಾರಿನ ವೆರ್ನಾ 1.6 ವೆರಿಯೆಂಟ್‌ಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಬಿಡುಗಡೆಗೊಳಿಸಿದ್ದಲ್ಲದೇ 1.4-ಲೀಟರ್ ವೆರಿಯೆಂಟ್ ಅನ್ನು ಪೆಟ್ರೋಲ್ ಎಂಜಿನ್ ಮಾತ್ರವೇ ಬಿಡುಗಡೆ ಮಾಡಿತ್ತು.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಇದೀಗ 1.4-ಲೀಟರ್‌‌ನಲ್ಲಿ ಡೀಸೆಲ್ ವೆರಿಯೆಂಟ್ ಕೂಡಾ ಖರೀದಿಗೆ ಲಭ್ಯವಾಗಿರುವುದ ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಕಡಿಮೆ ಬೆಲೆಗಳಲ್ಲಿ ಬಿಡುಗಡೆ ಮಾಡಲಾಗಿರುವ 1.4 ವೆರಿಯೆಂಟ್ ಡೀಸೆಲ್ ಆವೃತ್ತಿಯು ಮತ್ತಷ್ಟು ಜನಪ್ರಿಯತೆಗೆ ಕಾರಣವಾಗಲಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಸದ್ಯ 1.6 ವೆರಿಯೆಂಟ್‌ಗಳಲ್ಲಿ ಡಿಸೇಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.85 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಆವೃತ್ತಿಯು ರೂ. 9.25 ಲಕ್ಷ ಬೆಲೆಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ಹೊಸದಾಗಿ ಬಿಡುಗಡೆಯಾಗಿರುವ 1.4-ಲೀಟರ್ ಡೀಸೆಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 89-ಬಿಎಚ್‌ಪಿ ಮತ್ತು 220-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದೇ ಎಂಜಿನ್ ಮಾದರಿಯು ಎಲೈಟ್ ಐ20 ಮತ್ತು ಐ20 ಆಕ್ಟೀವಾ ಕಾರುಗಳಲ್ಲೂ ಕಾಣಬಹುದಾಗಿದೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಇನ್ನು ಹ್ಯುಂಡೈ 1.6-ಲೀಟರ್ ವೆರಿಯೆಂಟ್‌ನಲ್ಲಿ ಹೊಸದಾಗಿ ಪರಿಚಯಿಸಿರುವ ಎಸ್ಎಕ್ಸ್ ಪ್ಲಸ್(ಪೆಟ್ರೋಲ್ ಆಟೋಮ್ಯಾಟಿಕ್) ಮತ್ತು ಎಸ್ಎಕ್ಸ್ ಒ (ಡೀಸೆಲ್ ಆಟೋಮ್ಯಾಟಿಕ್) ಆವೃತ್ತಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕ್ರಮವಾಗಿ ರೂ.11.52 ಲಕ್ಷಕ್ಕೆ ಮತ್ತು ರೂ. 13.99 ಲಕ್ಷ ಬೆಲೆ ಹೊಂದಿವೆ.

MOST READ: ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಹೊಸ ಕಾರುಗಳಲ್ಲಿ ಈ ಹಿಂದಿನಂತೆಯೇ ತಾಂತ್ರಿಕ ಅಂಶಗಳನ್ನು ಮುಂದುವರಿಸಿರುವ ಹ್ಯುಂಡೈ ಸಂಸ್ಥೆಯು 1.4-ಲೀಟರ್ ಡೀಸೆಲ್ ವೆರಿಯೆಂಟ್ ಹೊರತುಪಡಿಸಿ ಎಲ್ಲಾ ಕಾರು ಮಾದರಿಗಳಲ್ಲೂ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್, 16-ಇಂಚಿನ ಅಲಾಯ್ ಚಕ್ರಗಳು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಲೆದರ್ ವ್ಯಾಪ್ಡ್ ಸೀಟುಗಳ ಸೌಲಭ್ಯ ಹೊಂದಿವೆ.

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

ಇದರಲ್ಲಿ ಟಾಪ್ ಮಾದರಿಗಳು ಹಿಂಬದಿ ಸವಾರರು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್‌ರೆಸ್ಟ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್, ಆರು ಏರ್‌ಬ್ಯಾಗ್‌ಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಕೆಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಮಾರುತಿ ಸಿಯಾಜ್, ಹೋಂಡಾ ಸಿಟಿ, ಫೋಕ್ಸ್‌ವ್ಯಾಗನ್ ವೆಂಟೋ, ಸ್ಕೋಡಾ ರ‍್ಯಾಪಿಡ್, ಟೊಯೊಟಾ ಯಾರಿಸ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Most Read Articles

ಬಿಡುಗಡೆಯ ಸನಿಹದಲ್ಲಿರುವ ಟಾಟಾ ಹ್ಯಾರಿಯರ್ ಕಾರಿನ ಫೋಟೋ ಗ್ಯಾಲರಿ..!

Kannada
English summary
Hyundai Verna 1.4-Litre Diesel Variant Launched In India; Prices Start At Rs 9.29 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X