ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯ ಮಧ್ಯಮ ಗಾತ್ರದ ವೆರ್ನಾ ಸೆಡಾನ್ ಕಾರಿನ ಮೂಲಕ ಉತ್ತಮ ಬೇಡಿಕೆಯನ್ನು ಹೊಂದಿದ್ದು, ಮುಂದಿನ ವರ್ಷ ವೆರ್ನಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಹೊರತರುವ ಯೋಜನೆಯಲ್ಲಿದೆ. ಹೀಗಿರುವಾಗಲೇ ಹ್ಯುಂಡೈ ಸಂಸ್ಥೆಯು ವೆರ್ನಾ ಆವೃತ್ತಿಯ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಎಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಒದಗಿಸಲು ಮುಂದಾಗಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿ ಕಾರುಗಳೊಂದಿಗೆ ಪೈಪೋಟಿ ನಡೆಸುತ್ತಿರುವ ವೆರ್ನಾ ಕಾರಿನಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿರುವ ಹ್ಯುಂಡೈ ಸಂಸ್ಥೆಯು, ಮುಂದಿನ ಕೆಲವೇ ದಿನಗಳಲ್ಲಿ ವೆರ್ನಾ ಕಾರಿನ ಎಸ್ಎಕ್ಸ್ ಪ್ಲಸ್ ಪೆಟ್ರೋಲ್ ಮತ್ತು ಎಸ್ಎಕ್ಸ್(ಒ) ಡಿಸೇಲ್ ವೆರಿಯೆಂಟ್‌ಗಳಲ್ಲಿಯೂ ಸಹ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಪ್ರಸ್ತುತ ಮಾರುಕಟ್ಟೆಯಲ್ಲಿ ವೆರ್ನಾ ಕಾರಿನ ಎಸ್ಎಕ್ಸ್(ಒ) ಪೆಟ್ರೋಲ್ ಮತ್ತು ಇಎಕ್ಸ್, ಎಸ್ಎಕ್ಸ್ ಪ್ಲಸ್ ಡಿಸೇಲ್ ವೆರಿಯೆಂಟ್‌ಗಳಲ್ಲಿ ಮಾತ್ರವೇ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಇತ್ತು. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಎಸ್ಎಕ್ಸ್ ಪ್ಲಸ್ ಪೆಟ್ರೋಲ್ ಮತ್ತು ಎಸ್ಎಕ್ಸ್(ಒ) ಡಿಸೇಲ್ ವೆರಿಯೆಂಟ್‌ಗಳಲ್ಲಿಯೂ ಸಹ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಇದರೊಂದಿಗೆ ಹೊಸ ಎಟಿ ಸೌಲಭ್ಯ ಪಡೆದುಕೊಳ್ಳುವ ಕಾರುಗಳಲ್ಲಿ ಹೆಚ್ಚುವರಿಯಾಗಿ ಸ್ಮಾರ್ಟ್ ಕೀ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಚಾರ್ಜಿಂಗ್, ಟೆಲಿಸ್ಕೋಪಿಕ್ ಸ್ಟೀರಿಂಗ್ ನೀಡುವ ಬಗ್ಗೆಯು ಹ್ಯುಂಡೈ ಮಾಹಿತಿಯನ್ನು ನೀಡಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಇದರ ಹೊರತಾಗಿ ತಾಂತ್ರಿಕ ಮತ್ತು ಎಂಜಿನ್ ವಿಭಾಗದಲ್ಲಿ ಈ ಹಿಂದಿನಂತೆಯೇ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ದೀಪಾವಳಿ ವಿಶೇಷತೆ ಹಿನ್ನಲೆಯಲ್ಲಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಹೊಸ ಆಯ್ಕೆಯನ್ನು ಪರಿಚಯಿಸಿದೆ ಎನ್ನಲಾಗಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಇನ್ನು ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ತಮ್ಮ ವೆರ್ನಾ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು 2019ರ ಕೊನೆಯಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು, ಅದಕ್ಕೂ ಮುಂಚೆ ಬಿಎಸ್-4 ಎಂಜಿನ್‌ಗಳನ್ನು ಉನ್ನತ ಮಟ್ಟದ ಬಿಎಸ್-6 ಎಂಜಿನ್ ವಿಭಾಗಕ್ಕೆ ಪರಿವರ್ತಿಸಲಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಹೀಗಾಗಿ ಹೊಸ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರು ಹೊಸ ವೈಶಿಷ್ಟ್ಯತೆಗಳು ಮತ್ತು ವಿನ್ಯಾಸವನ್ನು ಪಡೆದಿದ್ದು, ವಿನ್ಯಾಸದ ಪರವಾಗಿ ಹೊಸ ಅಪ್ಡೇಟೆಡ್ ಗ್ರಿಲ್, ಬಂಪರ್ ಮತ್ತು ಗುರುತರ ಬದಲಾವಣೆಗಳನ್ನು ಪಡೆದಿರಲಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಜೊತೆಗೆ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಸೆಡಾನ್ ಕಾರಿನಲ್ಲಿ ಹೊಸ ಬ್ಯಾನೆಟ್, ಬೂಟ್ ಲಿಡ್ ಮತ್ತು ಫೇಂಡರ್‍‍ಗಳನ್ನು ಪಡೆದಿರದುವುಲ್ಲದೆ ಕಾರಿನ ಒಳಭಾಗದಲ್ಲಿಯೂ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, ಕಾರಿನ ಒಳಭಾಗದಲ್ಲಿ ನೂತನ ಕನೆಕ್ಟಿವಿಟಿ, ಹೊಸ ತಲೆಮಾರಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೇಂಟ್ ಸಿಸ್ಟಂ ಅಳವಡಿಸಲಾಗಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ವೆರ್ನಾ ಫೇಸ್‍‍ಲಿಫ್ಟ್ ಕಾರು ತಾಂತ್ರಿಕತೆಯಲ್ಲಿ ಬಹುದೊಡ್ಡ ಅಪ್ಡೇಟ್ ಅನ್ನು ಪಡೆದುಕೊಂಡಿದ್ದು, ಹೊಸದಾಗಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯಲಿದೆ. ಹಾಗೆಯೇ 2020ರ ಏಪ್ರಿಲ್ 1 ರಂದು ನಡೆಯಲಿರುವ ಬಿಎಸ್-4 ಎಮಿಷನ್ ಪರೀಕ್ಷೆಯಲ್ಲೂ ಭಾಗವಹಿಸಲಿದೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ವೆರ್ನಾ ಫೇಸ್‍‍ಲಿಫ್ಟ್ ಕಾರಿನಲ್ಲಿ ಅಳವಡಿಸಲಾಗಿರುವ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಈಗಾಗಲೇ ಇರುವ 1.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಭರ್ತಿ ಮಾಡಲಿದ್ದು, ಕಡಿಮೆ ಔಟ್‍‍ಪುಟ್ ಹೊಂದಿದ್ದರು ಸಹ ಇಂಧನ ದಕ್ಷತೆ ಹೆಚ್ಚಿಸಿದೆ.

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಹಳೆಯ 1.6 ಲೀಟರ್ ಡೀಸೆಲ್ ಎಂಜಿನ್ 128-ಬಿಹೆಚ್‍ಪಿ ಮತ್ತು 260-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದಲ್ಲಿ, ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಕೇವಲ 115-ಬಿಹೆಚ್‍ಪಿ ಮತ್ತು 250-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

MOST READ: ಹೊಸ ಎರ್ಟಿಗಾ ಬಿಡುಗಡೆಗೆ ದಿನಗಣನೆ ಶುರು- ಕಾರು ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ವೆರ್ನಾ ಕಾರಿನ ಮತ್ತೆರಡು ಹೊಸ ವೆರಿಯೆಂಟ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ

ಇದಲ್ಲದೇ ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕೂಡಾ ಪರಿಚಯಿಸಲಿದ್ದು, ಇದು ಸಹ ಈಗಾಗಲೇ ಇರುವ 1.6 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದೆ. ಹೀಗಾಗಿ ಈ ಹೊಸ ಪೆಟ್ರೋಲ್ ಎಂಜಿನ್ ಕೂಡಾ ಕಡ್ಡಾಯ ಎಮಿಷನ್ ಟೆಸ್ಟ್ ಅನ್ನು ಪಡೆಯಲಿದೆ.

Most Read Articles

ಹ್ಯುಂಡೈ ಸಂಸ್ಥೆಯ ಹೊಸ ಸ್ಯಾಂಟ್ರೋ ಕಾರಿನ ಫೋಟೋ ಗ್ಯಾಲರಿ..!

Kannada
English summary
Hyundai Verna Automatic To Get New Variants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X