ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

2018ರ ಜೂನ್ ಮಾಸದಲ್ಲಿ ಸಿ-ಸೆಗ್ಮೆಂಟ್ ಕಾರುಗಳ ಪಟ್ಟಿಯಲ್ಲಿ ಹೋಂಡಾ ಸಿಟಿ, ಟೊಯೊಟಾ ಯಾರಿಸ್ ಮತ್ತು ಮಾರುತಿ ಸಿಯಾಜ್ ಕಾರುಗಳನ್ನು ಸೋಲಿಸಿ ಹ್ಯುಂಡೈ ವೆರ್ನಾ ಕಾರು ಮಾರಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

By Rahul Ts

2017ರಲ್ಲಿ ಬಿಡುಗೆಗೊಂಡ ಹ್ಯುಂಡೈ ವೆರ್ನಾ ಕಾರುಗಳು 2018ರ ಜೂನ್ ಮಾಸದಲ್ಲಿ 3,901 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ ಇನ್ನು ಹೋಂಡಾ ಸಿಟಿ 3,882 ಯೂನಿಟ್ ಮತ್ತು ಟೊಯೊಟಾ ಯಾರಿಸ್ 1,919 ಯೂನಿಟ್ ಕಾರುಗಳು ಮಾರಾಟಗೊಂಡಿದೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಮಾರುತಿ ಸಿಯಾಜ್ ಕಾರುಗಳು ಪ್ರತೀ ತಿಂಗಳು 3,000 ದಿಂದ 4,000 ಕಾರುಗಳು ಮಾರಾಟವಾಗುತ್ತಿದ್ದವು ಆದರೆ ಸಂಸ್ಥೆಯು ಶೀಘ್ರದಲ್ಲಿ ಸಿಯಾಜ್ ಕಾರಿನ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೇವಲ 1,579 ಯೂನಿಟ್ ಸಿಯಾಜ್ ಕಾರುಗಳನ್ನು ಅಧಿಕೃತ ಡೀಲರ್‍‍ಗಳಿಗೆ ರವಾನಿಸಿದೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಇಷ್ಟೆ ಅಲ್ಲದೆ ಹೋಂಡಾ ಸಿಟಿ ಕಾರಿನ ಕಳಪೆ ಮಾರಾಟಕ್ಕೆ ಕೂಡಾ ಇದೇ ಕಾರಣವಾಗಿದ್ದು, ಹೋಂಡಾ ಶೀಘ್ರದಲ್ಲೆ ತಮ್ಮ ಸಿಟಿ ಕಾರಿನ ಫೇಸ್‍‍ಲಿಫ್ಟ್ ಕಾರನ್ನು ಪರಿಚಯಿಸಲಿದ್ದು, ಗ್ರಾಹಕರು ಫೇಸ್‍‍ಲಿಫ್ಟ್ ಸಿಟಿ ಕಾರಿನ ಮಾದರಿಗಾಗಿ ಕಾಯುತ್ತಿದ್ದಾರೆ. ಇನ್ನು ಯಾರಿಸ್ ಕಾರು ಡೀಸೆಲ್ ಮಾದರಿಯಲ್ಲಿ ಲಭ್ಯವಿಲ್ಲದ ಕಾರಣದಿಂದಾಗಿ ಇದು ಕೂಡಾ ಕೊಂಚ ಕಡಿಮೆ ಮಾರಾಟವಾಗಿದೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಹ್ಯುಂಡೈ ಇಂಡಿಯಾ ಕಳೆದ ವರ್ಷ ಭಾರತ ದೇಶದಲ್ಲಿ ತನ್ನ ಐದನೇ ತಲೆಮಾರಿನ ವೆರ್ನಾ ಕಾರನ್ನು ಪರಿಚಯಿಸಿದ್ದು, ಬಾಹ್ಯ ವಿನ್ಯಾಸ ನವೀಕರಣದೊಂದಿಗೆ ಹೊಂದಿರುವ ಈ ಕಾರು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿತ್ತು.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಹೊಸ ವೆರ್ನಾ ಕಾರು ನವೀಕರಿಸಿದ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿದೆ. ಮುಂಭಾಗದಲ್ಲಿ, ಹೊಸ ಹೆಡ್ ಲ್ಯಾಂಪ್‌ ಮತ್ತು ಬಂಪರ್‌ಗಳೊಂದಿಗೆ ಹೊಸ ಕ್ಯಾಸ್ಕೇಡ್ ಗ್ರಿಲ್ ಪಡೆಯುತ್ತದೆ ಹಾಗು ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಹೆಡ್ ಲ್ಯಾಂಪ್‌ನಲ್ಲಿ ಸಂಯೋಜಿತವಾಗಿವೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಈ ಕಾರು 16 ಇಂಚಿನ ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳು ಮತ್ತು ನಯಗೊಳಿಸಿದ ಎಲ್ಇಡಿ ಟೈಲ್ ದೀಪಗಳನ್ನು ಅಳವಡಿಕೆಗೊಂಡಿದೆ. ಹ್ಯುಂಡೈ ವರ್ನಾ ಕಾರು ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ಮಾರುಕಟ್ಟೆಯಲ್ಲಿ ಟೊಯೊಟಾ ಯಾರಿಸ್, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಕಾರುಗಳೊಂದಿಗೆ ಸ್ಪರ್ದಿಸುತ್ತಿದೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ಐದನೇ ಪೀಳಿಗೆಯ ಈ ವರ್ನಾ ಕಾರು ಹೊಸ ಕೆ2 ಪ್ಲ್ಯಾಟ್‌ಫಾರಂ ಆಧರಿಸಿದೆ ಹಾಗು ಒಳಭಾಗದಲ್ಲಿ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹವಾಮಾನ ನಿಯಂತ್ರಣ, ವೇಗ ನಿಯಂತ್ರಣ, ಸ್ವಯಂಚಾಲಿತ ಹೆಡ್ ಲ್ಯಾಂಪ್‌ಗಳು, ಸನ್ರೂಫ್ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ ಹೊಸ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆಯುತ್ತದೆ.

ಟೊಯೊಟಾ ಯಾರಿಸ್ ಕಾರನ್ನು ಹಿಂದಿಕ್ಕಿದ ಹ್ಯುಂಡೈ ವೆರ್ನಾ..

ವಾಹನದ ಎಲ್ಲಾ ರೂಪಾಂತರಗಳೂ ಸಹ ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ಆಯ್ಕೆಯನ್ನು ಪಡೆಯುತ್ತವೆ. ಯಾಂತ್ರಿಕವಾಗಿ, ಈ ಕಾರು 1.6-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು ಹಾಗು ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.8 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

Source : Cartoq

Most Read Articles

Kannada
Read more on hyundai verna sales
English summary
Hyundai Verna beats Honda City, Toyota Yaris and Maruti Ciaz.
Story first published: Monday, July 9, 2018, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X