20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ದುಡ್ಡು ಇದ್ರೆ ದುನಿಯಾ ಅನ್ನೋ ಮಾತು ಕೆಲವು ಸಂದರ್ಭಗಳಲ್ಲಿ ಅತಿಯಾಗಿ ಕಾಣಿಸುತ್ತೆ. ಇದಕ್ಕೆ ಕಾರಣ ಇಲ್ಲೊಬ್ಬ ಉದ್ಯಮಿಯು ತನ್ನ 20 ಕೋಟಿ ಮೌಲ್ಯದ ಸೂಪರ್ ಕಾರಿಗೆ ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್ ಮಾಡಿಸುತ್ತಿರುವುದು ಸದ್ಯ ಭಾರ

By Praveen

ದುಡ್ಡು ಇದ್ರೆ ದುನಿಯಾ ಅನ್ನೋ ಮಾತು ಕೆಲವು ಸಂದರ್ಭಗಳಲ್ಲಿ ಅತಿಯಾಗಿ ಕಾಣಿಸುತ್ತೆ. ಇದಕ್ಕೆ ಕಾರಣ ಇಲ್ಲೊಬ್ಬ ಉದ್ಯಮಿಯು ತನ್ನ 20 ಕೋಟಿ ಮೌಲ್ಯದ ಸೂಪರ್ ಕಾರಿಗೆ ಬರೋಬ್ಬರಿ 25 ಕೋಟಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್ ಮಾಡಿಸುತ್ತಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಸಾಮಾನ್ಯವಾಗಿ ನಾವು ನೀವೆಲ್ಲಾ ಕೆಲ ಉದ್ಯಮಿಗಳು, ಚಿತ್ರ ನಟರು ದುಬಾರಿ ಬೆಲೆಯ ಸೂಪರ್ ಕಾರುಗಳು, ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದಿರುವುದನ್ನು ನೋಡಿದ್ದೇವೆ. ಆದ್ರೆ ಫ್ಲೋರಿಡಾದಲ್ಲಿರುವ ಭಾರತೀಯ ಮೂಲದ ಉದ್ಯಮಿಯೊಬ್ಬ ಹೊಸ ಸಾಹಸಕ್ಕೆ ಕೈ ಹಾಕಿರುವುದು ಸೂಪರ್ ಕಾರು ಪ್ರಿಯರಲ್ಲೇ ಕುತೂಹಲ ಹುಟ್ಟುಹಾಕಿದೆ.

Recommended Video

New Maruti Swift Launch: Price; Mileage; Specifications; Features; Changes
20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ವೆರೈಟಿ ವೆರೈಟಿ ಸೂಪರ್ ಕಾರುಗಳನ್ನು ಹೊಂದಿರುವ ಕ್ರಿಸ್ ಸಿಂಗ್ ಒಬ್ಬ ಕಾರು ಪ್ರಿಯನಾಗಿದ್ದು, 25 ಕೋಟಿ ರೂಪಾಯಿ ಬೆಲೆಬಾಳುವ ಲ್ಯಾಂಬೋರ್ಗಿನಿ ವೆನೆನೋ, 20 ಕೋಟಿ ಮೌಲ್ಯದ ಆಸ್ಟನ್ ಮಾರ್ಟಿನ್ ವ್ಯಾಲ್ಕಿರಿ ಸೇರಿದಂತೆ 19 ಕೋಟಿ ಮೌಲ್ಯದ ಕೋನಿಗ್ಸೆಗ್ ಅಗೇರಾ ಎಕ್ಸ್ಎಸ್ ಕಲೆಕ್ಷನ್ ಹೊಂದಿದ್ದಾನೆ.

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಇದರಲ್ಲಿ 20 ಕೋಟಿ ಮೌಲ್ಯದ ಆಸ್ಟನ್ ಮಾರ್ಟಿನ್ ವ್ಯಾಲ್ಕಿರಿ ಕಾರಿಗೆ ಚಂದ್ರನ ಧೂಳಿನಿಂದ ಪೇಂಟ್ ಮಾಡಿಸಲು ಮುಂದಾಗಿರುವ ಕ್ರಿಸ್ ಸಿಂಗ್, ಇದಕ್ಕಾಗಿ ಚಂದ್ರನ ಅಂಗಳದಿಂದಲೇ ತಂದಿರುವ ಕಲ್ಲೊಂದನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರಂತೆ.

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಚಂದ್ರನ ಅಂಗಳದಿಂದ ತರಿಸಲಾಗಿರುವ ಆ ಕಲ್ಲು ಹಲವು ವಿಶೇಷತೆಗಳಿಂದ ಕೂಡಿದ್ದು, ಅದನ್ನು ಚೆನ್ನಾಗಿ ಪುಡಿ ಮಾಡಿ ಅದರ ಪೌಡರ್ ಅನ್ನು ಕರೋಸರೀ ಲೂನರ್ ರೆಡ್ ಪೇಂಟ್ ಶೇಡ್‌ಗೆ ಬಳಸಲಾಗುತ್ತಿದೆಯಂತೆ.

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಇನ್ನು ಉದ್ಯಮಿ ಕ್ರಿಸ್ ಸಿಂಗ್‌ಗೆ ಚಂದ್ರನ ಮೇಲಿನ ಕಲ್ಲನ್ನು ಎಲ್ಲಿ ಖರೀದಿಸಿದ್ದು ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಾರಿಗೆ ವಿಶೇಷ ಪೇಟಿಂಗ್ ಕೊಡಿಸುತ್ತಿರುವುದಾಗಿ ಇನ್ಸ್ಟಾಗ್ರಾಮ್‌‌ನಲ್ಲಿ ಬರೆದುಕೊಂಡಿದ್ದಾನೆ.

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

ಒಟ್ಟಿನಲ್ಲಿ ತನ್ನ ಸೂಪರ್ ಕಾರಿಗೆ ಕಾರಿನ ಬೆಲೆಗಿಂತಲೂ ಹೆಚ್ಚಿನ ಹಣ ಪಾವತಿಸಿ ಸ್ಪೆಷಲ್ ಪೇಂಟ್ ಕೊಡಿಸುತ್ತಿರುವ ಕ್ರಿಸ್ ಸಿಂಗ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೇಟಿಂಗ್ ಪ್ರಕ್ರಿಯೆ ಮುಗಿದ ನಂತರ ವಿನೂತನ ಕಾರು ಹೇಗಿರಲಿದೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

Most Read Articles

Kannada
English summary
Indian American Spending Rs 20 Crore On Car And Another Rs 25 Crore To Paint It With Moon Dust!
Story first published: Thursday, February 15, 2018, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X