ಕೈಗೆಟುಕುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ತಮ್ಮತ್ತ ಸೆಳೆಯಲು ವಿವಿಧ ಬಗೆಯ ಕಾರುಗಳನ್ನು ಪರಿಚಯಿಸಿವೆ. ಆದ್ರೆ ಬೆಲೆ, ಕಂಫರ್ಟ್ ಮತ್ತು ಎಂಜಿನ್ ಪರ್ಫಾಮೆನ್ಸ್ ವಿಚಾರಕ್ಕೆ ಬಂದ್ರೆ ಯಾವುದನ್ನು ಖರೀದಿ ಮಾಡಿದ್ರೆ ಬೆಸ್ಟ್ ಎನ್ನುವ ಪ್ರಶ್ನೆ ಗ್ರಾಹಕರಲ್ಲಿದೆ. ಹೀಗಾಗಿ ಡ್ರೈವ್‌ಸ್ಪಾರ್ಕ್ ತಂಡವು ಕೈಗೆಟುವ ಬೆಲೆಗಳಲ್ಲಿ ಖರೀದಿ ಮಾಡಬಹುದಾದ ಉತ್ತಮ ಕಾರುಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಕಾರು ಖರೀದಿಸುವಾಗ ಎಲ್ಲಾ ಗ್ರಾಹಕರು ಒಂದೇ ರೀತಿಯ ಬೇಡಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಒಬ್ಬರು ಕಡಿಮೆ ಬೆಲೆಗಳಲ್ಲೇ ಮೈಲೇಜ್ ಹೆಚ್ಚಿರುವ ಕಾರನ್ನು ಆಯ್ಕೆ ಮಾಡಿದ್ರೆ, ಇನ್ನು ಕೆಲವರು ಮೈಲೇಜ್ ಹೆಚ್ಚು ಇಲ್ಲದೆ ಇದ್ರು ಪರವಾಗಿಲ್ಲ ಎಂಜಿನ್ ಪರ್ಫಾಮೆನ್ಸ್ ಚೆನ್ನಾಗಿದ್ರೆ ಸಾಕು ಎನ್ನುವ ಗ್ರಾಹಕರು ಕೂಡಾ ಇದ್ದಾರೆ. ಹೀಗಾಗಿ ಎಲ್ಲಾ ಥರ ಬೇಡಿಕೆ ಸರಿಹೊಂದಬಲ್ಲ ಕೆಲವು ಎಸ್‌ಯುವಿ ಕಾರುಗಳ ಎಂಜಿನ್ ಮಾಹಿತಿ ಮತ್ತು ಬೆಲೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ನಿಸ್ಸಾನ್ ಟೆರಾನೊ

ನಿಸ್ಸಾನ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿನೂತನ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಎಸ್‌‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 12.22 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ನಿಸ್ಸಾನ್ ಬಿಡುಗಡೆ ಮಾಡಿರುವ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಆವೃತ್ತಿಯು ಸ್ಪೋರ್ಟಿ ಲುಕ್‌ನೊಂದಿಗೆ ಸಿದ್ದವಾಗಿದ್ದು, ಎಕ್ಸ್‌ಟ್ರಿಮ್ ಎಸ್‌ಯುವಿ ಇಷ್ಟಪಡುವ ಗ್ರಾಹಕರನ್ನು ಸೆಳೆಯಲಿದೆ. ಜೊತೆಗೆ ಡೈನಾಮಿಕ್ ಬಾಡಿ ಕಿಟ್ ಪಡೆದಿರುವ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್‌ಗಳು, ಬ್ಲ್ಯಾಕ್ ರೂಫ್ ವ್ಯಾರ್ಪ್ ಪಡೆದುಕೊಂಡಿರುವುದು ಕಾರಿನ ಹೊರ ವಿನ್ಯಾಸಕ್ಕೆ ಮೆರಗು ತಂದಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಎಂಜಿನ್ ಸಾಮರ್ಥ್ಯ

1.6-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರುವ ಟೆರಾನೊ ಸ್ಪೋರ್ಟ್ ಸ್ಪೆಷನ್ ಎಡಿಷನ್ ಕಾರುಗಳು, ಪೆಟ್ರೋಲ್ ಆವೃತ್ತಿಯ ಮೂಲಕ 102-ಬಿಎಚ್‌ಪಿ, 145-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಟಾಟಾ ನೆಕ್ಸಾನ್

ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕರ್ಷಕ ವಿನ್ಯಾಸದೊಂದಿಗೆ ಸಿದ್ದವಾದ ಕಾರು ಇದಾಗಿದ್ದು, ಉತ್ತಮ ತಂತ್ರಜ್ಞಾನಗಳ ಸೌಲಭ್ಯದೊಂದಿಗೆ ಗ್ರಾಹಕರ ಅಭಿರುಚಿ ಮತ್ತು ನಿರೀಕ್ಷೆಗೆ ತಕ್ಕಂತೆ ತಯಾರಿಸಲಾದ ಎಸ್‌ಯುವಿ ಕಾರಿದು.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಇದರ ಬೆಲೆಯೂ ಎಸ್‌ಯುವಿ ಕಾರ್‌ಗಳ ವರ್ಗದಲ್ಲಿ ಸ್ಪರ್ಧಾತ್ಮಕವಾಗಿದೆ. ಪೆಟ್ರೋಲ್‌ ಮಾದರಿಯ ಬೆಂಗಳೂರಿನ ಎಕ್ಸ್‌ಶೋರೂಂ ಆರಂಭಿಕ ಬೆಲೆ ರೂ. 6,61,928 ಮತ್ತು ಡೀಸೆಲ್ ಮಾದರಿಯ ಬೆಲೆ ರೂ. 8.02,811 ಆಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

2017ರಲ್ಲಿ ಮೊದಲು ಬಿಡುಗಡೆಯಾದ ಟಾಟಾ ನೆಕ್ಸಾನ್ ಆವೃತ್ತಿಗಳನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಮಾತ್ರ ಒದಗಿಸಲಾಗಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿ ಮಾದರಿಯಲ್ಲೂ ಸಹ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಒದಗಿಸಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್

ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹ್ಯುಂಡೈ ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಎಂಜಿನ್ ಸಾಮರ್ಥ್ಯ ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್

ಮಹೀಂದ್ರಾ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ತನ್ನ ಸ್ಕಾರ್ಪಿಯೊ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಸುಧಾರಿತ ಎಸ್‌ಯುವಿ ಕಾರು ರೂ. 9.97 ಲಕ್ಷ ಎಕ್ಸ್ ಶೋರೂಂ ದೆಹಲಿ ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹೊಸ ಕಾರು ಆವೃತ್ತಿಯನ್ನು ಸಂಪೂರ್ಣ ಸ್ಪೋರ್ಟ್ ಲುಕ್‌ನೊಂದಿಗೆ ಬದಲಾವಣೆಗೊಳಿಸಲಾಗಿದ್ದು, ಎಬಿಎಸ್ ಸೌಲಭ್ಯ, ಆಯ್ದ ಮಾಡೆಲ್‌ಗಳಲ್ಲಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ, ಬಂಪರ್ ವಿನ್ಯಾಸ, ಟರ್ನ್ ಇಂಡಿಕೇಟರ್, ಓಆರ್‌ವಿಎಂ ವಿಭಾಗಳಲ್ಲಿ ಹೊಸತನ ನೀಡಲಾಗಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಎಂಜಿನ್ ಸಾಮರ್ಥ್ಯ

2.2-ಲೀಟರ್ ಎಂ ಹ್ವಾಕ್ ಡೀಸೆಲ್ ಎಂಜಿನ್ ಪಡೆದಿರುವ ಫೇಸ್‌ಲಿಫ್ಟ್ ಸ್ಕಾರ್ಪಿಯೋ ಮಾದರಿಯು 120 -ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ. ಜೊತೆಗೆ ಆಯ್ಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆವೃತ್ತಿಯು ಲಭ್ಯವಿರಲಿವೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ದೇಶಿಯವಾಗಿ ಉತ್ಪಾದನೆಯಾಗುತ್ತಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿ ಕಾರುಗಳಲ್ಲಿ ಎಕ್ಸ್‌ಯುವಿ500 ಕಾರುಗಳ ಸಹ ಒಂದಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಹೊಸ ಕಾರುಗಳು ಖರೀದಿಗೆ ಲಭ್ಯವಿವೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಉನ್ನತ ಮಾದರಿಯಾದ ಜಿ ಗ್ರೇಡ್‌ನಲ್ಲಿ ಖರೀದಿಗೆ ಲಭ್ಯವಿರುವ ಪೆಟ್ರೋಲ್ ವರ್ಷನ್ ಎಕ್ಸ್‌ಯುವಿ500 ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ. 15.50 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, 2.2-ಲೀಟರ್ ಎಂ ಹ್ವಾಕ್ ಫೌರ್ ಸಿಲಿಂಡರ್ ಎಂಜಿನ್ ಹೊಂದಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹಾಗೆಯೇ ಡೀಸೆಲ್ ಎಂಜಿನ್‌ನಲ್ಲೂ ಖರೀದಿಗೆ ಲಭ್ಯವಿರುವ ಎಕ್ಸ್‌ಯುವಿ500 ಕಾರುಗಳು 2.2 ಲೀಟರ್ ಎಂ ಹ್ವಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155ಬಿಹೆಚ್‍‍ಪಿ ಮತ್ತು 360ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೊಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆ ಮಾಡಬಹುದು.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಟಾಟಾ ಹೆಕ್ಸಾ

ಟಾಟಾ ಕಾರುಗಳಲ್ಲೇ ತುಸು ದುಬಾರಿ ಎನ್ನಿಸುವ ಟಾಟಾ ಹೆಕ್ಸಾ ಕಾರುಗಳು ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಆವೃತ್ತಿಯಾಗಿದೆ. ನಗರ ಪ್ರದೇಶದ ಗ್ರಾಹಕರನ್ನೇ ಹೆಚ್ಚು ಆಕರ್ಷಿಸುವ ಹೆಕ್ಸಾ ಕಾರುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಆಫ್ ರೋಡ್‌ನಲ್ಲೂ ಕೌಶಲ್ಯ ಪ್ರದರ್ಶನ ಮಾಡಬಲ್ಲದು.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಹೆಕ್ಸಾ 2.2-ಲೀಟರ್ ವ್ಯಾರಿಕೋರ್ 400 ಮತ್ತು ವ್ಯಾರಿಕೋರ್ 320 ಎಂಜಿನ್ ಹೊಂದಿದೆ. ವ್ಯಾರಿಕೋರ್ 400 ಎಂಜಿನ್ 153ಬಿಎಚ್‌ಪಿಯೊಂದಿಗೆ 400ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಂತೆಯೇ ವ್ಯಾರಿಕೋರ್ 320 ಎಂಜಿನ್ 147ಬಿಎಚ್‌ಪಿಯೊಂದಿಗೆ 320ಎನ್ಎಂ ಟಾರ್ಕ್ ಉತ್ವಾದಿಸುತ್ತೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಇನ್ನು ಹೆಕ್ಸಾ ಕಾರಿನಲ್ಲಿ ಸುರಕ್ಷಾ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಹೊಂದಿದ್ದು, ಎಬಿಎಸ್ ಜೊತೆ ಇಬಿಡಿ, 6 ಏರ್ ಬ್ಯಾಗ್ ವ್ಯವಸ್ಥೆಯಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಜೀಪ್ ಕಂಪಾಸ್

2017ರ ಜುಲೈ 31ರಂದು ಬಿಡುಗಡೆಯಾಗಿದ್ದ ಜೀಪ್ ಕಂಪಾಸ್ ಕಾರುಗಳು ಇದುವರೆಗೆ ಬರೋಬ್ಬರಿ 20 ಸಾವಿರ ಕಾರುಗಳು ಮಾರಾಟವಾಗಿದ್ದು, ಹೊಸ ಕಾರು ಖರೀದಿಯ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆಯು ರೂ.15.16 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.21.94 ಲಕ್ಷಕ್ಕೆ ಲಭ್ಯವಿದ್ದು, ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್ ಉನ್ನತ ಆವೃತ್ತಿಯಲ್ಲಿ 4x4 ಡ್ರೈವ್ ಟೆಕ್ನಾಲಜಿ ಹಾಗೂ ಉಳಿದ ಎಲ್ಲಾ ಆವೃತ್ತಿಗಳಲ್ಲೂ ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ ಎಂಬ ಚಾಲನಾ ಆಯ್ಕೆಗಳನ್ನು ನೀಡಿದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಇಸುಜು ವಿ-ಕ್ರಾಸ್

ಜಪಾನ್‌ ಇಸುಜು ಭಾರತದಲ್ಲಿ ವಿ-ಕ್ರಾಸ್ ಪಿಕ್‌ಅಪ್ ಅನ್ನು 2016ರಲ್ಲಿ ಪರಿಚಯಿಸಿದ್ದು, ನಿರೀಕ್ಷೆಗೂ ಮೀರಿ ವಿ-ಕ್ರಾಸ್ ಜನಪ್ರಿಯತೆಯನ್ನು ಗಳಿಸಿದೆ. ತೀರಾ ಚಿಕ್ಕದಾದ ಡೀಲರ್‌ ಮತ್ತು ಸರ್ವೀಸ್‌ ನೆಟ್‌ವರ್ಕ್‌ ಇದ್ದಾಗ್ಯೂ ಜನರು ವಿ-ಕ್ರಾಸ್ ಅನ್ನು ಕೊಳ್ಳುತ್ತಿದ್ದು, ಹತ್ತಿರದ ಪ್ರತಿಸ್ಪರ್ಧಿ ಕ್ಸೆನಾನ್‌ಗಿಂತಲೂ ಕಡಿಮೆ ಸಾಮರ್ಥ್ಯದ ಎಂಜಿನ್ ಇದ್ದರೂ ವಿ-ಕ್ರಾಸ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇದರ ಬೆಲೆ ಎಕ್ಸ್‌ಶೋರಂ 12.49ಲಕ್ಷ ಬೆಲೆ ಇದೆ.

ಕೈಗೆಟುವ ಬೆಲೆಗಳಲ್ಲಿ ಖರೀದಿಸಬಹುದಾದ ಬೆಸ್ಟ್ ಎಸ್‌ಯುವಿ ಕಾರುಗಳಿವು..

ಫೋರ್ಡ್ ಎಂಡೀವರ್

ಮೇಲೆ ನೀಡಲಾಗಿರುವ ಎಲ್ಲಾ ಕಾರುಗಳಿಂತಲೂ ಫೋರ್ಡ್ ಎಂಡೀವರ್ ಕಾರುಗಳು ತುಸು ದುಬಾರಿ ಎನ್ನಿಸಿದರೂ ಪರ್ಫಾಮೆನ್ಸ್ ಮತ್ತು ಸೆಫ್ಟಿಗೆ ಒತ್ತು ನೀಡುವುದಾದರೇ ಈ ಕಾರು ಖರೀದಿಗೆ ಉತ್ತಮವಾಗಿದೆ. 2.2-ಲೀಟರ್ ಫೌರ್ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿರುವ ಎಂಡೀವರ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 30.23 ಲಕ್ಷ ಹಾಗೂ ಟಾಪ್ ಎಂಡ್ ಮಾದರಿಯು ರೂ.37.78 ಲಕ್ಷ ಬೆಲೆ ಹೊಂದಿದೆ.

Most Read Articles

Kannada
Read more on auto news suv
English summary
India’s 8 BEST Value-for-Money SUVs: Tata Nexon to Mahindra XUV500.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X