ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಭಾರತದಲ್ಲಿ ಸದ್ಯ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದ್ದು, ಇದಕ್ಕೆ ಪೂರಕವಾಗಿ ಹಲವು ಕಾರು ಉತ್ಪಾದನಾ ಸಂಸ್ಥೆಗಳು ವಿನೂತ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಹೊರತರುತ್ತಿವೆ. ಇದೀಗ ಜಪಾನ್ ಬ್ರಾಂಡ್ ಇಸುಝು ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸುವ ಬಗ್ಗೆ ಇರಾದೆ ವ್ಯಕ್ತಪಡಿಸಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಕಳೆದ 2 ದಿನಗಳ ಹಿಂದಷ್ಟೇ ಫೇಸ್‌ಲಿಫ್ಟ್ ಆವೃತ್ತಿಯಾದ ಎಂಯು-ಎಕ್ಸ್ ಕಾರುಗಳನ್ನು ಬಿಡುಗಡೆ ಮಾಡಿರುವ ಇಸುಝು ಸಂಸ್ಥೆಯು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲೂ ಕಮಾಲ್ ಮಾಡಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500, ಬಿಡುಗಡೆಯ ಹಾದಿಯಲ್ಲಿರುವ ಟಾಟಾ ಹ್ಯಾರಿಯರ್ ಮತ್ತು ನಿಸ್ಸಾನ್ ಕಿಕ್ಸ್ ಕಾರುಗಳ ಮಾದರಿಯಲ್ಲೇ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಸಿದ್ದಗೊಳಿಸಲಿರುವ ಇಸುಝು ಬೆಲೆಗಳಲ್ಲೂ ಗಮನಸೆಳೆಯಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಮಾಹಿತಿ ಪ್ರಕಾರ, ರೂ. 12 ಲಕ್ಷದಿಂದ ರೂ.16 ಲಕ್ಷದೊಳಗೆ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಸಿದ್ದಗೊಳಿಸುವ ಯೋಜನೆಯಲ್ಲಿರುವ ಇಸುಝು ಸಂಸ್ಥೆಯು, ಮಧ್ಯಮ ವರ್ಗದ ಗ್ರಾಹಕರನ್ನು ಸಹ ಸೆಳೆಯುವ ನಿಟ್ಟಿನಲ್ಲಿ ಹೊಸ ಕಾರು ಉತ್ಪನ್ನವನ್ನು ಜನಪ್ರಿಯಗೊಳಿಸುವ ತವಕದಲ್ಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಇನ್ನು ಮೊನ್ನೆಯಷ್ಟೇ ಬಿಡುಗಡೊಗೊಂಡ ಹೊಸ ಇಸುಝು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು 4x2 ಮತ್ತು 4x4 ಎಂಬ ಎರಡು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, 4x2 ವೇರಿಯಂಟ್ ಕಾರು ರೂ. 26.26 ಲಕ್ಷ ಬೆಲೆ ಮತ್ತು 4x4 ವೇರಿಯಂಟ್ ರೂ. 28.22 ಲಕ್ಷ ಬೆಲೆ ಪಡೆದುಕೊಂಡಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಕಾರಿನ ಮುಂಭಾಗದಲ್ಲಿ ಹಲವಾರು ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಗ್ರಿಲ್, ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಅಗಲವಾದ ಫಾಗ್ ಲ್ಯಾಂಪ್ಸ್, ಮತ್ತು ರಿವ್ಯಾಂಪ್ಡ್ ಬಂಪರ್‍‍ಗಳನ್ನು ನೀಡಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್ ಗೇಟ್ ಕ್ಲಸ್ಟರ್ ಮತ್ತು ರಿವ್ಯಾಂಪ್ಡ್ ಬಂಪರ್ ಅನ್ನು ನೀಡಲಾಗಿದೆ. ಇದಲ್ಲದೇ ಲಾರ್ಜ್ ಸ್ಪಾಯ್ಲರ್ ಮತ್ತು ರೂಫ್ ರೈಲ್ ಅನ್ನು ಒದಗಿಸಲಾಗಿದೆ. ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು ಡೈಮಂಡ್ ಕಟ್ 18 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಇವನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಇಸುಝು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಆಲ್ ಬ್ಲಾಕ್ ಥೀಮ್ ಹಾಗು ಪಿಯಾನೊ ಬ್ಲಾಕ್‍ನಿಂದ ಡ್ಯಾಶ್‍ಬೋರ್ಡ್ ಅನ್ನು ಸಜ್ಜುಗೊಳಿಸಲಾಗಿದ್ದು, 7 ಇಂಚಿನ ಇಂಫೋಟೈನ್ಮೆಂಟ್ ಸಿಸ್ಟಮ್, ಹೊಸ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಇನ್‌‌ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್‍‍ನಿಂದ ಸಜ್ಜುಗೊಳಿಸಲಾದ ಸ್ಟೀರಿಂಗ್ ವ್ಹೀಲ್ ಮತ್ತು ಸೀಟ್‍‍ಗಳನ್ನು ಒದಗಿಸಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಇವುಗಳಲ್ಲದೇ ಇಸುಝು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ವಿದ್ಯುತ್‍ನಿಂದ ಫೋರ್ಡ್ ಮಾಡಬಹುದಾದ ಮತ್ತು ಅಡ್ಜೆಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಆರು ವಿಧಗಳಲ್ಲಿ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಅಳವಡಿಸಲಾಗಿದೆ.

MOST READ: ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಇಸುಝು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ 6 ಏರ್‍‍ಬ್ಯಾಗ್‍‍ಗಳು, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಹಿಲ್ ಡೆಸ್ಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೇಫ್ಟಿ ಮೌಂಟ್‍ಗಳನ್ನು ನೀಡಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಎಂಜಿನ್ ಸಾಮರ್ಥ್ಯ

ಇಸುಝು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು 3-ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 174-ಬಿಹೆಚ್‍ಪಿ ಮತ್ತು 380-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಇಸುಝು ಹೊಸ ಕಂಪ್ಯಾಕ್ಟ್ ಎಸ್‌ಯುವಿ..!

ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಯ ನೀರಿಕ್ಷೆಯಲ್ಲಿರುವ ಹೊಸ ಇಸುಝು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು 1.6-ಲೀಟರ್ ಡಿಸೇಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದುವ ಸಾಧ್ಯತೆಗಳಿದ್ದು, ಹೊಸ ಕಾರು 2019ರ 2ನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿವೆಯೆಂತೆ.

Most Read Articles

Kannada
Read more on isuzu suv new car
English summary
Isuzu Considering A Compact SUV For India.
Story first published: Friday, October 19, 2018, 15:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X