ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಕಳೆದ ವರ್ಷ ಮೇ ಅವಧಿಯಲ್ಲಿ ಎಂಯು-7 ಬದಲಾಗಿ ಎಂಯು-ಎಕ್ಸ್ ಫುಲ್ ಸೈಜ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದ ಇಸುಝು ಸಂಸ್ಥೆಯು ಇದೀಗ ಎಂಯು-ಎಕ್ಸ್ ಫೇಸ್‌ಲಿಫ್ಟ್ ಮಾದರಿಯನ್ನು ಪರಿಚಯಿಸುತ್ತಿದ್ದು, ಮಾಹಿತಿಗಳ ಪ್ರಕಾರ ಮುಂದಿನ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಇಸುಝು ಸಂಸ್ಥೆಯು ಸದ್ಯ ಏಷಿಯನ್ ಮಾರುಕಟ್ಟೆಗಳಲ್ಲಿ ಹೊಸ ಉತ್ಪನ್ನಗಳ ಬಿಡುಗಡೆಯಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಭಾರತೀಯ ಮಾರುಕಟ್ಟೆಗಾಗಿ ತನ್ನ ಹೊಸ ಎಂಯು-ಎಕ್ಸ್ ಫೇಸ್‌ಲಿಫ್ಟ್ ಮಾದರಿಯನ್ನ ಹಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸುತ್ತಿರುವುದು ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಸಾಮಾನ್ಯ ಎಂಯು-ಎಕ್ಸ್ ಕಾರುಗಳಿಂತಲೂ ಎಂಯು-ಎಕ್ಸ್ ಫೇಸ್‌ಲಿಫ್ಟ್ ಕಾರುಗಳು ತಾಂತ್ರಿಕವಾಗಿ ಹಾಗೂ ವಿನ್ಯಾಸಗಳಲ್ಲಿ ಹಲವು ಬದಲಾವಣೆ ಪಡೆದುಕೊಂಡಿದ್ದು, ಬ್ಯಾನೆಟ್, ಗ್ರೀಲ್, ಬಂಪರ್ ಮತ್ತು ಹಿಂಭಾಗದ ಬಂಪರ್ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ತರಲಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಜೊತೆಗೆ ವಿಸ್ತರಿತ ಅಲಾಯ್ ವೀಲ್ಹ್‌ಗಳು, ಪೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡೈ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಟೈಲ್ ಗೇಟ್ ಕ್ಲಸ್ಟರ್ ಮತ್ತು ಸ್ಪೋರ್ಟಿ ಪ್ರಿಮಿಯಂ ವಿನ್ಯಾಸಗಳಾದ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಡಿಸೈನ್ ಇದರಲ್ಲಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಹೊಸ ಕಾರುಗಳಲ್ಲಿ ಸುಧಾರಿತ ಎಂಜಿನ್‌ನೊಂದಿಗೆ ಕೆಲವು ಹೊಸ ಸೌಲಭ್ಯಗಳನ್ನು ಸಹ ಸೇರಿಸಲಾಗಿದ್ದು, ಕಾರಿನ ತೂಕದಲ್ಲಿ ತುಸು ಇಳಿಕೆ ಕಂಡುಬರಲಿದೆ. ಹೀಗಾಗಿ ಕಾರಿನ ಪರ್ಫಾಮೆನ್ಸ್ ಸಾಮರ್ಥ್ಯವು ಸದ್ಯ ಕಾರು ಮಾದರಿ ಗಿಂತಲೂ ಹೆಚ್ಚಳವಾಗಿರುವುದು ಆಪ್ ರೋಡ್ ಪ್ರಿಯರಿಗೆ ಇದು ಸಹಕಾರಿಯಾಗಲಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಎಂಜಿನ್ ಸಾಮರ್ಥ್ಯ

ಹೊಸ ಇಸುಝು ಎಂಯು-ಎಕ್ಸ್ ಫೇಸ್‍‍ಲಿಫ್ಟ್ ಕಾರು ಹೊಸ ಎಂಜಿನ್ ಅನ್ನು ಪಡೆದುಕೊಳ್ಳಲಿದೆ. ಈ ಬಾರಿ 1.9 ಲೀಟರ್, 4 ಸಿಲೆಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 148ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಇನ್ನು ಎಂಯು-ಎಕ್ಸ್ ಕಾರುಗಳಲ್ಲಿ ಎಂಯು-ಎಕ್ಸ್ 4x4 ಮತ್ತು ಎಂಯು-ಎಕ್ಸ್ 4x2 ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಿದ್ದು, ಆಪ್ ರೋಡ್ ಕೌಶಲ್ಯದ ಎಂಯು-ಎಕ್ಸ್ 4x4 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರಂ ಪ್ರಕಾರ ರೂ.25.99 ಲಕ್ಷ ಮತ್ತು 4x2 ಎಂಯು-ಎಕ್ಸ್ ಆವೃತ್ತಿಯು ರೂ.23.99 ಲಕ್ಷ ಬೆಲೆ ಹೊಂದಿವೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಕಾರುಗಳಲ್ಲಿ ಇದು ಕೂಡಾ ಒಂದು

ಒಟ್ಟಿನಲ್ಲಿ ಇಸುಝು ಸಂಸ್ಥೆಯು ತನ್ನ ಎಂಯು-ಎಕ್ಸ್ ಫೇಸ್‌ಲಿಫ್ಟ್ ಮೂಲಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಮಹೀಂದ್ರಾ ರೆಕ್ಸಟಾನ್ ಎಸ್‌ಯುವಿಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

Most Read Articles

Kannada
Read more on isuzu mpv
English summary
Isuzu MU-X Facelift Launch Details Revealed.
Story first published: Tuesday, September 25, 2018, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X