Just In
- 7 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 8 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 9 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 9 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ ಇಸುಝು ಎಂಯು-ಎಕ್ಸ್ ಫೇಸ್ಲಿಫ್ಟ್
ಕಳೆದ ವರ್ಷ ಮೇ ಅವಧಿಯಲ್ಲಿ ಎಂಯು-7 ಬದಲಾಗಿ ಎಂಯು-ಎಕ್ಸ್ ಫುಲ್ ಸೈಜ್ ಎಸ್ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದ ಇಸುಝು ಸಂಸ್ಥೆಯು ಇದೀಗ ಎಂಯು-ಎಕ್ಸ್ ಫೇಸ್ಲಿಫ್ಟ್ ಮಾದರಿಯನ್ನು ಪರಿಚಯಿಸುತ್ತಿದೆ.
ಕಳೆದ ವರ್ಷ ಮೇ ಅವಧಿಯಲ್ಲಿ ಎಂಯು-7 ಬದಲಾಗಿ ಎಂಯು-ಎಕ್ಸ್ ಫುಲ್ ಸೈಜ್ ಎಸ್ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದ ಇಸುಝು ಸಂಸ್ಥೆಯು ಇದೀಗ ಎಂಯು-ಎಕ್ಸ್ ಫೇಸ್ಲಿಫ್ಟ್ ಮಾದರಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಇಸುಝು ಸಂಸ್ಥೆಯು ಸದ್ಯ ಏಷಿಯನ್ ಮಾರುಕಟ್ಟೆಗಳಲ್ಲಿ ಹೊಸ ಉತ್ಪನ್ನಗಳ ಬಿಡುಗಡೆಯಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಭಾರತೀಯ ಮಾರುಕಟ್ಟೆಗಾಗಿ ತನ್ನ ಹೊಸ ಎಂಯು-ಎಕ್ಸ್ ಫೇಸ್ಲಿಫ್ಟ್ ಮಾದರಿಯನ್ನ ಹಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸುತ್ತಿರುವುದು ಎಸ್ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.
ಸಾಮಾನ್ಯ ಎಂಯು-ಎಕ್ಸ್ ಕಾರುಗಳಿಂತಲೂ ಎಂಯು-ಎಕ್ಸ್ ಫೇಸ್ಲಿಫ್ಟ್ ಕಾರುಗಳು ತಾಂತ್ರಿಕವಾಗಿ ಹಾಗೂ ವಿನ್ಯಾಸಗಳಲ್ಲಿ ಹಲವು ಬದಲಾವಣೆ ಪಡೆದುಕೊಂಡಿದ್ದು, ಬ್ಯಾನೆಟ್, ಗ್ರೀಲ್, ಬಂಪರ್ ಮತ್ತು ಹಿಂಭಾಗದ ಬಂಪರ್ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ತರಲಾಗಿದೆ.
ಜೊತೆಗೆ ವಿಸ್ತರಿತ ಅಲಾಯ್ ವೀಲ್ಹ್ಗಳು, ಪೊಜೆಕ್ಟರ್ ಹೆಡ್ಲ್ಯಾಂಪ್, ಎಲ್ಇಡಿ ಡೈ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಟೈಲ್ ಗೇಟ್ ಕ್ಲಸ್ಟರ್ ಮತ್ತು ಸ್ಪೋರ್ಟಿ ಪ್ರಿಮಿಯಂ ವಿನ್ಯಾಸಗಳಾದ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್ ಡಿಸೈನ್ ಇದರಲ್ಲಿದೆ.
ಹೊಸ ಕಾರುಗಳಲ್ಲಿ ಸುಧಾರಿತ ಎಂಜಿನ್ನೊಂದಿಗೆ ಕೆಲವು ಹೊಸ ಸೌಲಭ್ಯಗಳನ್ನು ಸಹ ಸೇರಿಸಲಾಗಿದ್ದು, ಕಾರಿನ ತೂಕದಲ್ಲಿ ತುಸು ಇಳಿಕೆ ಕಂಡುಬರಲಿದೆ. ಹೀಗಾಗಿ ಕಾರಿನ ಪರ್ಫಾಮೆನ್ಸ್ ಸಾಮರ್ಥ್ಯವು ಸದ್ಯ ಕಾರು ಮಾದರಿ ಗಿಂತಲೂ ಹೆಚ್ಚಳವಾಗಿರುವುದು ಆಪ್ ರೋಡ್ ಪ್ರಿಯರಿಗೆ ಇದು ಸಹಕಾರಿಯಾಗಲಿದೆ.
ಎಂಜಿನ್ ಸಾಮರ್ಥ್ಯ
3-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಇಸುಝು ಎಂಯುಎಕ್ಸ್ ಫೇಸ್ಲಿಫ್ಟ್ ಕಾರು ಮಾದರಿಗಳು 174-ಬಿಎಚ್ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಮಾಡಬಹುದು.
ಇನ್ನು ಎಂಯು-ಎಕ್ಸ್ ಕಾರುಗಳಲ್ಲಿ ಎಂಯು-ಎಕ್ಸ್ 4x4 ಮತ್ತು ಎಂಯು-ಎಕ್ಸ್ 4x2 ಎನ್ನುವ ಎರಡು ಪ್ರಮುಖ ವೆರಿಯೆಂಟ್ಗಳಿದ್ದು, ಆಪ್ ರೋಡ್ ಕೌಶಲ್ಯದ ಎಂಯು-ಎಕ್ಸ್ 4x4 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಶೋರಂ ಪ್ರಕಾರ ರೂ.25.99 ಲಕ್ಷ ಮತ್ತು 4x2 ಎಂಯು-ಎಕ್ಸ್ ಆವೃತ್ತಿಯು ರೂ.23.99 ಲಕ್ಷ ಬೆಲೆ ಹೊಂದಿವೆ.
ಇಲ್ಲಿ ಮತ್ತೊಂದು ಹೊಸ ವಿಚಾರ ಏನು ಅಂದ್ರೆ, ಇಸುಝು ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಹೊರತುಪಡಿಸಿ ಪ್ರಮುಖ ರಾಷ್ಟ್ರಗಳಲ್ಲಿ ಎಂಯು-ಎಕ್ಸ್ 1.9-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಸಣ್ಣ ಕಾರುಗಳನ್ನು ಸಹ ಮಾರಾಟ ಮಾಡುತ್ತಿದ್ದು, ಈ ಕಾರು ಮಾದರಿಯನ್ನು ಇಸುಝು ಸಂಸ್ಥೆಯು ಭಾರತದಲ್ಲಿ ಪರಿಚಯಿಸುವ ಸಾಧ್ಯತೆ ಕಡಿಮೆ ಎಂದು ಹೇಳಬಹುದು.
ಒಟ್ಟಿನಲ್ಲಿ ಇಸುಝು ಸಂಸ್ಥೆಯು ತನ್ನ ಎಂಯು-ಎಕ್ಸ್ ಫೇಸ್ಲಿಫ್ಟ್ ಮೂಲಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಮಹೀಂದ್ರಾ ರೆಕ್ಸಟಾನ್ ಎಸ್ಯುವಿಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.