ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್ ಸ್ವಾಮ್ಯದ ಜಾಗ್ವಾರ್ ತಮ್ಮ ಎಫ್-ಟೈಪ್ ಇಂಜೆನಿಯಮ್ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಕೌಪ್ ಮತ್ತು ಕನ್ವರ್ಟಿಬಲ್ ಎಂಬ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಹೊಸ ಜಾಗ್ವಾರ್ ಎಫ್-ಟೈಪ್ ಕೌಪ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 90.93 ಲಕ್ಷಕ್ಕೆ ಹಾಗು ಎಫ್-ಟೈಪ್ ಕನ್ವರ್ಟಿಬಲ್ ಕಾರಿನ ಬೆಲೆಯನ್ನು ರೂ. 1.01 ಕೋಟಿಗೆ ನಿಗಧಿಪಡಿಸಲಾಗಿದೆ. ಕೌಪ್ ಮತ್ತು ಕನ್ವರ್ಟಿಬಲ್ ಕಾರುಗಳು 4 ಸಿಲೆಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಎಫ್-ಟೈಪ್ ಕಾರುಗಳಲ್ಲಿನ ಇಂಜೆನಿಯಮ್ ಪೆಟ್ರೋಲ್ ಎಂಜಿನ್ ಸಹಾಯದಿಂದ 300ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಜಗ್ವಾರ್ ಸಂಸ್ಥೆಯ ಪ್ರಕಾರ, ಹೊಸ ಇಂಜಿನಿಮ್ ಎಂಜಿನ್ 52 ಕೆಜಿ ಹಗುರವಾಗಿರುತ್ತದೆ. ಇದು ಗಂಟೆಗೆ 250 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪದೆದಿದ್ದು, 5.7 ಸೆಕೆಂಡಿನಲ್ಲಿ 0-100ಕಿಲೋಮೀಟರ್ ಸ್ಪೀಡ್‍‍ನಲ್ಲಿ ಚಲಿಸಬಲ್ಲದು.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಈ ಕಾರಿನ ಮುಂಭಾಗದ ಆಕ್ಸಲ್‍‍ನ ಮೇಲೆ ತೂಕದ ಕಡಿತವನ್ನು ಬಹುತೇಕ ಮಾಡಲಾಗಿದೆ. ಜಗ್ವಾರ್ ಪ್ರಕಾರ ಹೆಚ್ಚಿನ ಸ್ಟೀರಿಂಗ್ ಪ್ರತಿಕ್ರಿಯೆ, ದೇಹ ನಿಯಂತ್ರಣ ಮತ್ತು ಸವಾರಿ ಸೌಕರ್ಯವನ್ನು ತಲುಪಿಸಲು ಸಹಾಯ ಮಾಡುತ್ತದೆ. ಎಫ್-ಟೈಪ್ ಸ್ವಿಚ್ ಮಾಡಬಹುದಾದ ಸಕ್ರಿಯ ನಿಷ್ಕಾಸ ವ್ಯವಸ್ಥೆಯನ್ನು ಕೂಡಾ ಹೊಂದಿದೆ, ಇದು ಚಾಲನಾ ಅನುಭವವನ್ನು ಹೆಚ್ಚಿಸುತ್ತದೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಎಫ್-ಟೈಪ್ 2.0 ಲೀಟರ್ ಪೆಟ್ರೋಲ್ ಎಂಜಿನ್ ಕಾರಿನ ಬಿಡುಗಡೆಯಿಂದಾಗಿ ನಾವು ಖುಷಿಯಾಗಿದ್ದೇವೆ. ಇದು ಜಾಗ್ವಾರ್ ಅಭಿಮಾನಿಗಳಿಗೆ ಮತ್ತು ದೇಶದಲ್ಲಿರುವ ಗ್ರಾಹಕರಿಗೆ ಈ ನಮ್ಮ ಸ್ಪೋರ್ಟ್ಸ್ ಕಾರು ಹೊಸ ಅನುಭವವನ್ನಿ ನೀಡುತ್ತದೆ. ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂದಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರೋಹಿತ್ ಸುರಿ ಹೇಳಿಕೊಂಡಿದ್ದಾರೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಇಂಜೆನಿಯಮ್ ಎಂಜಿನ್‍‍ಗಳನ್ನು ಕಡಿಮೆ ತೂಕ ಇರುವ ಅಲ್ಯೂಮೀನಿಯಮ್‍‍ನಿಂದ ನಿರ್ಮಿಸಲಾಗಿದ್ದು, ಹಗುರವಾಗಿರುವುದರಿಂದ ಕಾರಿನ ಒಟ್ಟಾರೆ ಸ್ಪ್ರಿಂಗ್ ದ್ರವ್ಯ ಕಡಿಮೆಯಾಗುತ್ತದೆ. ಅಲ್ಯೂಮಿನಿಯಮ್ ಕಡಿಮೆ ಘರ್ಷಣಾತ್ಮಕ ಗುಣಗಳನ್ನು ಹೊಂದಿದೆ, ಇದು ದಕ್ಷತೆ ಮತ್ತು ವಿದ್ಯುತ್ ವಿತರಣೆಯನ್ನು ಸುಧಾರಿಸುತ್ತದೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಪ್ರಸ್ಥುತ ದೇಶಿಯ ಮಾರುಕಟ್ಟೆಯಲ್ಲಿ ಜಾಗ್ವಾರ್ ಸಂಸ್ಥೆಯ ಎಕ್ಸ್ಇ (ರೂ.39.73 ಲಕ್ಷ), ಎಕ್ಸ್ಎಫ್ (ರೂ. 49.58 ಲಕ್ಷ), ಎಫ್-ಪೇಸ್ (ರೂ.62.99 ಲಕ್ಷ), ಎಕ್ಸ್ ಜೆ (ರೂ. 1.10 ಕೋಟಿ) ಮತ್ತು ಎಫ್-ಟೈಪ್ (ರೂ. 90.93 ಲಕ್ಷ) ಐದು ಕಾರುಗಳು ಮಾರಾಟಕ್ಕಿವೆ.

ಬಿಡುಗಡೆಗೊಂಡ ಜಾಗ್ವಾರ್ ಎಫ್-ಟೈಪ್ ಇಂಜೆನಿಯಮ್ ಪೆಟ್ರೋಲ್ ಕಾರು..

ಸಂಸ್ಥೆಯು ಕೆಲದಿನಗಳ ಹಿಂದಷ್ಟೆ ರೂ. 2.65 ಕೋಟಿಯ ಬೆಲೆಯಲ್ಲಿ ತಮ್ಮ 2018ರ ಎಫ್-ಟೈಪ್ ಎಸ್‍‍ವಿಆರ್ ಕಾರನ್ನು ಬಿಡುಗಡೆಗೊಳಿಸಿದ್ದು, ಹೊಸ ಜಾಗ್ವಾರ್ ಸ್ಪೋರ್ಟ್ ಕಾರು ಮಾರುಕಟ್ಟೆಯಲ್ಲಿ ಪೋರ್ಶೆ ಕಾಯ್‍‍ಮನ್ ಮತ್ತು ದಿ ಬಾಕ್ಸ್ಟೆರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Jaguar F-Type Ingenium Petrol Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X