ಕ್ರ್ಯಾಶ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಹೀಗಾಗಿ ಕಾರು ಮಾದರಿಯಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರಕ್ಕೆ ಸಂಬಂಧಿಸಿದಂತೆ ಜಾಗ್ವಾರ್ ಐ-ಫೇಸ್ ಎಲೆಕ್ಟ್ರಿಕ್ ಕಾರು ಉತ್ತಮ ರೇಟಿಂಗ್ ಪಡೆದಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆ ಒದಗಿಸಿರುವುದು ಕ್ರ್ಯಾಶ್ ಟೆಸ್ಟಿಂಗ್ ವೇಳೆ ಖಾತ್ರಿಯಾಗಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಭಾರತದಲ್ಲಿ ಹೊಸ ಕಾರು ಬಿಡುಗಡೆಯಾಗುವುದಕ್ಕೂ ಮುನ್ನ ದಕ್ಷಿಣ ಕೊರಿಯಾದಲ್ಲಿ ನಡೆದ ಕೆ-ಎನ್‌‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೊಸ ಜಾಗ್ವಾರ್ ಐ-ಫೇಸ್ ಎಲೆಕ್ಟ್ರಿಕ್ ಕಾರು ಸುರಕ್ಷತೆಯ ಬಗ್ಗೆ ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರ ಫಲಿತಾಂಶ ಪ್ರಕಟವಾಗಿದ್ದು, ಸುರಕ್ಷಾ ರೇಟಿಂಗ್‌ನಲ್ಲಿ ಐದಕ್ಕೆ ಐದು ಅಂಕಗಳನ್ನು ತನ್ನದಾಸಿಕೊಂಡಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಹೊಸ ಜಗ್ವಾರ್ ಐ-ಪೇಸ್ ವಯಸ್ಕ ನಿವಾಸಿ ರಕ್ಷಣೆಗಾಗಿ 91 ಪ್ರತಿಶತದಷ್ಟು ಸುರಕ್ಷತೆಯನ್ನು ಮತ್ತು 81 ಪ್ರತಿಶತದಷ್ಟು ಮಕ್ಕಳ ನಿವಾಸಿ ರಕ್ಷಣೆಗಾಗಿ ಮತ್ತು ಸೇಫ್ಟಿ ಅಸಿಸ್ಟ್ ಗಳಿಸಿದೆ. ಸೈಡ್ ತಡೆಗೋಡೆ ಪರಿಣಾಮಕ್ಕಾಗಿ ಗರಿಷ್ಟ ಅಂಕಗಳನ್ನು ಪಡೆದುಕೊಂಡಿದ್ದು, ಎಲ್ಲ ನಿರ್ಣಾಯಕ ದೇಹದ ಪ್ರದೇಶಗಳ ರಕ್ಷಣೆ ಉತ್ತಮವಾಗಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಜಗ್ವಾರ್ ಐ-ಪೇಸ್ ಈಗಾಗಲೇ ತನ್ನ ವಿನ್ಯಾಸ, ನಿರ್ವಹಣೆ ಮತ್ತು ನಿರ್ವಹಣೆಗಾಗಿ ಪ್ರಶಸ್ತಿಗಳನ್ನು ಪಡೆದಿದೆ. ಯುರೋ NCAP ಯ ಈ ಇತ್ತೀಚಿನ ಪ್ರಶಸ್ತಿಯು I-PACE ನ ಅಸಾಧಾರಣ ಸುರಕ್ಷತಾ ಮಾನದಂಡಗಳನ್ನು ದೃಢಪಡಿಸುತ್ತದೆ. ಎಂದು ಬಾಡಿ ಎಂಜಿನಿಯರಿಂಗ್ ಜಗ್ವಾರ್ ಲ್ಯಾಂಡ್ ರೋವರ್ ಹಿರಿಯ ಪ್ರಾಜೆಕ್ಟ್ ಲೀಡರ್ ಸೈಮನ್ ಬ್ಲ್ಯಾಕ್ ಹೇಳಿಕೊಂಡಿದ್ದಾರೆ.

ಜಾಗ್ವಾರ್ ಸಂಸ್ಥೆಯು ಹೊಸ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ವಿನ್ಯಾಸವನ್ನು ಭೌತಶಾಸ್ತ್ರದ ತತ್ವದಡಿ ಅಭಿವೃದ್ಧಿಪಡಿಸಿದ್ದು, ವಾಯುಬಲ ವೈಜ್ಞಾನಿಕ ದಕ್ಷತೆಯನ್ನು ಹೆಚ್ಚಿಸಲು ಬ್ಯಾನೆಟ್‍ಗಳನ್ನು ಚಿಕ್ಕದಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಕಾರಿನ ಮುಂಭಾಗದ ವಿನ್ಯಾಸವು ಸ್ಲೋಪಿಂಗ್ ಬ್ಯಾನೆಟ್, ಹನಿಕಾಂಬ್ ಗ್ರಿಲ್, ಸ್ಲೀಕ್ ಎಲ್ಇಡಿ ಹೆಡ್‍ಲೈಟ್ ಮತ್ತು ಅಗಲವಾದ ಏರ್ ಡ್ಯಾಮ್ ಅನ್ನು ಪಡೆದಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಇದರೊಂದಿಗೆ ಐ-ಪೇಸ್ ಎಲೆಕ್ಟ್ರಿಕ್ ಕಾರು ಎಲ್ಇಡಿ ಡಿಎಸ್‍ಎಲ್, ಹೊಸದಾಗಿ ವಿನ್ಯಾಸಗೊಂಡ ಅಲಾಯ್ ವೀಲ್ಸ್ ಮರು ಒಆರ್‍‍ವಿಎಂ ಒಳಗೊಂಡಿರುವ ಟರ್ನ್ ಸಿಗ್ನಲ್ ಲೈಟ್‍ಗಳನ್ನು ಪಡೆದಿವೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಜಾಗ್ವಾರ್ ಐ-ಪೇಸ್ ಕಠಿಣ ಭೂಪ್ರದೇಶಗಳಲ್ಲೂ ಮತ್ತು -40 ಡಿಗ್ರಿಗಳಿಂದ 40 ಡಿಗ್ರಿ ಉಷ್ಣಾಂಶದಲ್ಲೂ ಹೊಂದಿಕೊಳ್ಳಬಹುದಾದ ಗುಣ ಹೊಂದಿದ್ದು, ಆಫ್ ರೋಡಿಂಗ್ ಕೌಶಲ್ಯಕ್ಕೂ ಹೇಳಿ ಮಾಡಿಸಿದಂತಿದೆ.

MOST READ: ಬೈಕ್ ತಪಾಸಣೆ ವೇಳೆ ಕೂರ್ಗ್ ಪೊಲೀಸರು ಮಾಡಿದ್ದು ಏನು ಗೊತ್ತಾ.?

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಇನ್ನು ಕಾರಿನ ಒಳಭಾಗವು ವಿಶಾಲವಾದ ಸ್ಥಳವನ್ನು ಹೊಂದಿದ್ದು, ಇನ್‌ಕಂಟ್ರೋಲ್ ಟಚ್ ಪ್ರೋ ಡ್ಯು ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿದ್ದು, ರೇಂಜ್ ರೋವರ್ ವೋಗ್ ಮಾದರಿಯಲ್ಲೂ ಇದೇ ವ್ಯವಸ್ಥೆಯನ್ನೇ ಬಳಕೆ ಮಾಡಲಾಗಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಇದಲ್ಲದೆ ಅಲೆಕ್ಸ್ ಸ್ಕಿಲ್ ಒಳಗೊಂಡಂತಹ ಇನ್‍‍ಕಂಟ್ರೋಲ್ ರಿಮೋಟ್ ಆಪ್ ಹೊಂದಿದ್ದು, ಇದರಿಂದ ಕಾರು ಚಾಲಕನು ಕಾರಿನ ಚಾರ್ಜಿಂಗ್ ಲೆವೆಲ್ ಅನ್ನು ತಿಳಿಯಬಹುದಾಗಿದೆ. ಜೊತೆಗೆ 4ಜಿ ವೈ-ಫೈ ಹಾಟ್‍‍ಸ್ಪಾಟ್, ಮೂರು 12 ವಾಲ್ಟ್ಸ್ ಸಾಕೆಟ್ಸ್, ಆರು ಯುಎಸ್‍ಬಿ ಪೋರ್ಟ್ಸ್ ಮತ್ತು ಒಂದು ಹೆಚ್‍‍ಡಿಎಂಐ/ಹೆಚ್‍ಎಂಎಲ್ ಪೋರ್ಟ್‍ಗಳನ್ನು ಹೊಂದಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಎಂಜಿನ್ ಸಾಮರ್ಥ್ಯ

ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‍‍ಗಳನ್ನು ಬಳಸಲಾಗಿದ್ದು, ಇದು 395 ಬಿಹೆಚ್‍ಪಿ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇದರೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಇದ್ದು, ಇದು 4.5 ಸೆಕೆಂಡಿಗೆ 0-100 ಕಿಲೋಮೀಟರ್ ಚಲಿಸಬಲ್ಲದು.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

90 ಕಿಲೋವ್ಯಾಟ್ಸ್ ಲಿಥಿಯಂ-ಐಯಾನ್ ಬ್ಯಾಟರಿ ಬಳಸಲಾಗಿದ್ದು, ಒಂದು ಬಾರಿ ಚಾರ್ಜ್‌ಗೆ 480 ಕಿಲೋಮೀಟರ್ ಚಲಿಸಬಲ್ಲದು ಎನ್ನಲಾಗಿದ್ದು, 45 ನಿಮಿಷದಲ್ಲಿ ಶೇಕಡಾ 80 ರಷ್ಟು 100 ಕಿಲೋವ್ಯಾಟ್ಸ್ ವೇಗದಲ್ಲಿ ಚಾರ್ಜ್ ಕೂಡಾ ಆಗಲಿದೆ.

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಆಸ್ಟ್ರಿಯಾದ ಮ್ಯಾಗ್ನಾ ಸ್ಟೇಯರ್ ಉತ್ಪಾದನಾ ಕೇಂದ್ರದಲ್ಲಿ 2018 ರ ಜಗ್ವಾರ್ ಐ-ಪೇಸ್ ಕಾರಿನ ಉತ್ಪಾದನೆಯು ಆರಂಭವಾಗಲಿದ್ದು, ಸುಧಾರಿತ ಮಾದರಿಯ ಸೌಕರ್ಯ ಹೊಂದಿರುವ ಈ ಕೇಂದ್ರದಲ್ಲಿ ಒಂದು ಐ-ಪೇಸ್ ಕಾರು ತಯಾರಿಸಲು ಕೇವಲ ಎಂಟು ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆಯಂತೆ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು

ಕ್ರಾಷ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

ಜಾಗ್ವಾರ್ ಸಂಸ್ಥೆಯ ಹೊಸ ಐ-ಪೇಸ್ ಕಾರು ಬೇರೆಲ್ಲಾ ಜಾಗ್ವಾರ್ ಕಾರುಗಳ ಮಾದರಿಯ ವಿನ್ಯಾಸವನ್ನು ಪಡೆದಿದ್ದು, ತಾಂತ್ರಿಕವಾಗಿ ಮುಂದುವರೆದ ಎಲೆಕ್ಟ್ರಿಕ್ ಮೋಟಾರ್‍ ವೈಶಿಷ್ಟ್ಯಗಳನ್ನು ಪಡಿದಿದೆ. ಇನ್ನು ಈ ಕಾರು ಭಾರತಕ್ಕೆ ಬರಲಿವೆಯೆ? ಎಂಬುದನ್ನು ತಿಳಿಯಲು ಜಾಗ್ವಾರ್ ಸಂಸ್ಥೆಯ ಮುಂದಿನ ಆದೇಶವರೆಗೂ ಕಾಯ್ದುನೋಡಬೇಕಾಗಿದೆ.

Most Read Articles

Kannada
English summary
Jaguar I-Pace electric SUV scores 5 star safety rating in crash test. Read in Kannada
Story first published: Thursday, December 6, 2018, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X