ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಆ ಹೊಸ ಜೀಪ್ ಕಂಪಾಸ್ ಕಾರನ್ನು ಖರೀದಿ ಮಾಡಿ ಇನ್ನು ಮೂರು ಗಂಟೆಯು ಕಳೆದಿಲ್ಲ ಕಾರಿನ ಚಕ್ರಗಳು ತುಂಡಾಗಿದ್ದು, ಜನಪ್ರಿಯ ಜೀಪ್ ಕಂಪಾಸ್ ಕಾರುಗಳು ಖರೀದಿಗೆ ಯೊಗ್ಯವೇ ಎನ್ನುವ ಮಾತುಗಳು ಕೇಳಿಬರುತ್ತಿವೆ.

By Praveen

Recommended Video

Ducati 959 Panigale Crashes Into Buffalo - DriveSpark

ಆ ಹೊಸ ಜೀಪ್ ಕಂಪಾಸ್ ಕಾರನ್ನು ಖರೀದಿ ಮಾಡಿ ಇನ್ನು ಮೂರು ಗಂಟೆಯು ಕಳೆದಿಲ್ಲ ಕಾರಿನ ಚಕ್ರಗಳು ತುಂಡಾಗಿದ್ದು, ಜನಪ್ರಿಯ ಜೀಪ್ ಕಂಪಾಸ್ ಕಾರುಗಳು ಖರೀದಿಗೆ ಯೊಗ್ಯವೇ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ನಮಗೆ ಗೊತ್ತಿರುವ ಹಾಗೇ ಜೀಪ್ ಕಂಪಾಸ್ ಕಾರು ಖರೀದಿ ಮಾಡೋದು ಪ್ರತಿಷ್ಠೆಯ ಸಂಕೇತ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಅಮೆರಿಕ ಮೂಲಕ ಜೀಪ್ ಸಂಸ್ಥೆಯು ಹತ್ತಾರು ಬಗೆಯ ಕಾರು ಉತ್ಪನ್ನಗಳನ್ನು ಹೊರತಂದಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಆದ್ರೆ ನಿನ್ನೆಯಷ್ಟೇ ಹೊಸ ಮಾದರಿಯ ಜೀಪ್ ಕಂಪಾಸ್ ಖರೀದಿ ಮಾಡಿದ್ದ ಗುವಾಹಾಟಿ ಮೂಲದ ಜಯಂತ್ ಪುಕಾನ್ ಎಂಬುವರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಹೊಸ ಜೀಪ್ ಕಂಪಾಸ್‌ ಮೂಲಕ 172 ಕಿಮಿ ಪ್ರಯಾಣ ಮಾಡಿದ್ದೇ ತಡ ಹೊಸ ಕಾರಿನ ಯಾಕ್ಸಿಲ್‌ಗಳೇ ತುಂಡರಿಸಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಅದೃಷ್ಟವಶಾತ್ ಕಾರಿನಲ್ಲಿದ್ದ ಜಯಂತ್ ಪುಕಾನ್ ಮತ್ತು ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿ ಜೋರಾಗಿ ಬರುತ್ತಿದ್ದ ಶಬ್ದದಿಂದಾಗಿ ಕೂಡಲೇ ರಸ್ತೆ ಬದಿಗೆ ಕಾರು ಹಾಕಿದ್ದಾರೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಘಟನೆಯಿಂದ ಜೀಪ್ ಕಂಪಾಸ್ ಉತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಯಂತ್ ಪುಕಾನ್ ಅವರು, ಜೀಪ್ ಕಂಪಾಸ್ ಕಾರುಗಳ ಕಾರ್ಯಕ್ಷಮತೆ ಮತ್ತು ಜನಪ್ರಿಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಜಯಂತ್ ಅವರ ಫೇಸ್‌ಬುಕ್ ಪೊಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದು, ಮೇಕ್ ಇನ್ ಇಂಡಿಯಾ ಹೆಸರಿನೊಂದಿಗೆ ಭಾರತದಲ್ಲಿ ಕಂಪಾಸ್ ಕಾರುಗಳ ಉತ್ಪಾದನೆ ಕೈಗೊಂಡಿರುವ ಜೀಪ್ ವಿರುದ್ಧ ನೆಟ್ಟಿಗರು ಟೀಕೆ ಮಾಡಿದ್ದಾರೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಇನ್ನು ಕೆಲವರು ಕಾರು ಉತ್ಪಾದನೆಯಲ್ಲಾದ ನ್ಯೂನತೆಗಳೇ ಇಂತಹ ಅವಘಡಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಪ್ರಿಯ ಕಾರು ಉತ್ಪಾದಕರ ಕಾರು ಮಾದರಿಗಳೇ ಹೀಗಾದ್ರೆ ಇನ್ನು ಅಗ್ಗದ ಕಾರು ಕಥೆ ಏನು ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಜಯಂತ್ ಅವರು ನಿನ್ನೇಯಷ್ಟೇ ಗುವಾಹಟಿಯ ಮಹೇಶ್ ಮೋಟಾರ್ಸ್‌ನಲ್ಲಿ ಜೀಪ್ ಕಂಪಾಸ್ ಖರೀದಿಸಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 18.36 ಲಕ್ಷ ಬೆಲೆ ಪಡೆದುಕೊಂಡಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಸದ್ಯ ತಾಂತ್ರಿಕ ತೊಂದರೆಗಳಿಂದ ಅವಘಡಕ್ಕೆ ಈಡಾಗಿರುವ ಕಂಪಾಸ್ ಕಾರನ್ನು ಶೋರಂಗೆ ವಾಪಸ್ ಮಾಡಲಾಗಿದ್ದು, ನಡೆದ ಘಟನೆ ಬಗ್ಗೆ ಜೀಪ್ ಇಂಡಿಯಾ ಸಂಸ್ಥೆಯು ಸೂಕ್ತ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಮೇಕ್ ಇನ್ ಇಂಡಿಯಾ ಹೆಗ್ಗಳಿಕೆ

ಹೌದು, ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್ ಕಾರುಗಳು ಮಹಾರಾಷ್ಟ್ರದ ರಂಗೂನ್ ಕಾರು ಉತ್ಪಾದನಾ ಘಟಕದಲ್ಲಿ ಸಿದ್ದಗೊಂಡಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡ ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಹೀಗಾಗಿ ಹೊಸ ಮಾದರಿಯ ಜೀಪ್ ಕಂಪಾಸ್ ಕಾರುಗಳು ಬೆಲೆಗಳನ್ನು ತಗ್ಗಿಸಲಾಗಿದ್ದು, ಬೆಲೆ ಕಡಿಮೆ ಎನ್ನುವ ಹಿನ್ನೆಲೆ ಕಡಿಮೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸಲಾಗುತ್ತಿದೆಯೇ? ಎಂಬ ಅನುಮಾನ ಹುಟ್ಟುಹಾಕಿದೆ.

Most Read Articles

Kannada
Read more on accident off beat
English summary
Jeep Compass Breaks Down In 3 Hours Of Taking Delivery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X