ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಬಂದ್ ಮತ್ತು ಪ್ರತಿಭಟನೆ ಮಾಡಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಇಂಧನ ಬೆಲೆಗಳ ಮೇಲಿನ ಸೆಸ್ ಇಳಿಕೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರವು ವಾಹನ ಸವಾರರಿಗೆ ಕೊಂಚ ರೀಲಿಫ್ ನೀಡಲು ಮುಂದಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಸರ್ಕಾರದ ಸೆಸ್ ಪ್ರಮಾಣದಲ್ಲಿ ಕಡಿಮೆ ಮಾಡಿರುವ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ವಾಹನ ಸವಾರರ ಬೆಂಬಲಕ್ಕೆ ನಿಂತಿದ್ದು, ಬೆಲೆ ಇಳಿಕೆ ಮಾಡಿ ಅಂತಾ ಬಂದ್, ಪ್ರತಿಭಟನೆ ಮಾಡಿದ್ರು ಜಗ್ಗದ ಕೇಂದ್ರ ಸರ್ಕಾರಕ್ಕೆ ಪರೋಕ್ಷ ಟಾಂಗ್ ನೀಡಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ರೂ. 2 ಅಗ್ಗವಾದ ಪೆಟ್ರೋಲ್, ಡೀಸೆಲ್.!

ಹೌದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಸೆಸ್ ಪ್ರಮಾಣದ ಇಳಿಕೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಪೆಟ್ರೋಲ್ ಪ್ರತಿ ಲೀಟರ್ ಬೆಲೆಯಲ್ಲಿ ಗರಿಷ್ಠ ರೂ. 2 ಮತ್ತು ಡೀಸೆಲ್ ಪ್ರತಿ ಲೀಟರ್ ಬೆಲೆಯಲ್ಲಿ ಗರಿಷ್ಠ ರೂ.2 ಇಳಿಕೆ ಮಾಡಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಕಲಬುರಗಿಯಲ್ಲಿ ನಡೆದಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ಪೆಟ್ರೋಲ್ ಮತ್ತು ಡೀಸೆಲ್‌ ದರ ಇಳಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಸಮ್ಮಿಶ್ರ ಸರ್ಕಾರವು ಜನಸಾಮಾನ್ಯರ ಪರವಾಗಿದೆ ಎಂದಿದ್ದಾರೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಸದ್ಯ ದೇಶದಲ್ಲಿ ಪೆಟ್ರೋಲ್‌ ಬೆಲೆಯ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಸದ್ಯ ಪೆಟ್ರೋಲ್‌ ಬೆಲೆ ಇಂದು ಪ್ರತಿ ಲೀಟರ್‌ಗೆ ರೂ. 84.59 ಪೈಸೆ ಇದ್ದು, ಹಾಗಿಯೇ ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 76.10 ಪೈಸೆ ಬೆಲೆ ಇದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಇದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿರುವುದಲ್ಲದೇ ಬೆಲೆ ಹೆಚ್ಚಳದಿಂದಾಗಿ ಇಂಧನ ಮಾರಾಟ ಮಾಡುವ ಡೀಲರ್ಸ್‌ಗಳು ಸಹ ನಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಮಹತ್ವದ ನಿರ್ಧಾರವು ಬೆಲೆ ಏರಿಕೆಗೆ ಕಡಿವಾಣ ಹಾಕಿದಂತಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಹೊಸ ದರ ಜಾರಿ ಯಾವಾಗ?

ಸದ್ಯ ಸೆಸ್ ಇಳಿಕೆಯ ಬಗ್ಗೆ ಘೋಷಣೆ ಮಾಡಿರುವ ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ಹೊಸ ಆದೇಶವು ಅಧಿಕೃವಾಗಿ ಜಾರಿ ಬರಲಿದ್ದು, ಮುಂದಿನ 2 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಬರಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಆಂಧ್ರ ಮತ್ತು ರಾಜಸ್ಥಾನದಲ್ಲೂ ಇಳಿಕೆ.!

ಜನಸಾಮಾನ್ಯ ಹೆಚ್ಚು ಪರಿಣಾಮ ಬೀರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ತಡೆಯಲು ಆಂಧ್ರಪ್ರದೇಶ ಮತ್ತು ರಾಜಸ್ತಾನ ಸರ್ಕಾರಗಳು ಸಹ ಸೆಸ್ ಇಳಿಕೆ ಮಾಡಿದ್ದು, ತಲಾ ರೂ. 2 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಿ ಆರ್ಥಿಕ ಹೊರೆಯನ್ನು ತಗ್ಗಿಸಿವೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಬಯೋ ಡೀಸೆಲ್‌ಗೆ ಹೆಚ್ಚಿನ ಬೇಡಿಕೆ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಾಕವಾಗಿ ಪರಿಣಮಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಬಯೋ ಇಂಧನಗಳ ಮೇಲೆ ಹೆಚ್ಚಿನ ಒಲವು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಹಲವು ಇಂಧನ ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗಿಂತಲೂ ಉತ್ತಮ ಮಾದರಿಯ ಬಯೋ ಡೀಸೆಲ್ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದು ಸಾಂಪ್ರದಾಯಿಕ ಇಂಧನ ಬೆಲೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಉನ್ನತ ಸ್ಥಾನದಲ್ಲಿರುವ ಭಾರತದಲ್ಲಿ ಹೆಚ್ಚುತ್ತಿರುವ ವಾಹನಗಳ ಪ್ರಮಾಣದಿಂದ ಮಾಲಿನ್ಯ ಪ್ರಮಾಣವು ಕೂಡಾ ಅತಿದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಈ ಹಿನ್ನೆಲೆ ಪರಿಸರಕ್ಕೆ ಪೂರಕವಾದ ಇಂಧನ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾಮಾನ್ಯ ಡಿಸೇಲ್‌ಗಿಂತಲೂ ಅಧಿಕ ಮೈಲೇಜ್ ನೀಡಬಲ್ಲ ಇನ್ಡಿಜೆಲ್ ಹೊಸ ಭರವಸೆ ಹುಟ್ಟುಹಾಕಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಪರಿಸರ ಪೂರಕ ಇಂಧನಗಳ ಬಳಕೆಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈ ಮೂಲದ ಮೈ ಇಕೋ ಎರ್ನಜಿ(ಎಂಇಇ) ಸಂಸ್ಥೆಯು ಉತ್ತಮ ಕಾರ್ಯಕ್ಷಮತೆಯುಳ್ಳ ಇನ್ಡಿಜೆಲ್ ಎಂಬ ಪರ್ಯಾಯ ಇಂಧನ ಮೂಲವನ್ನು ಪರಿಚಯಿಸಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಮಾಲಿನ್ಯ ತಡೆ ಉದ್ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ಬಳಕೆ ತಗ್ಗಿಸಲು ಈಗಾಗಲೇ ಹಲವಾರು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗುತ್ತಿದ್ದು, ಈ ನಡುವೆ 'ಮೈ ಇಕೋ ಎರ್ನಜಿ' ಸಂಸ್ಥೆಯು ಪರಿಚಯಿಸಿರುವ ಇನ್ಡಿಜೆಲ್ ಎಂಬ ಹಸಿರು ಇಂಧನವು ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಇನ್ಡೆಜೆಲ್ ಇಂಧನವು ಪ್ರಸ್ತುತ ಡೀಸೆಲ್ ಬೆಲೆಗಿಂತಲೂ ಕಡಿಮೆ ದರಕ್ಕೆ ಲಭ್ಯವಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆಯ ಜೊತೆಗೆ ಶೇ.80ರಷ್ಟು ಮಾಲಿನ್ಯ ಉತ್ಪತ್ತಿಯನ್ನು ತಗ್ಗಿಸಬಹುದಾದ ವೈಶಿಷ್ಟ್ಯತೆಯನ್ನು ಹೊಂದಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಈ ಕುರಿತಂತೆ ಡ್ರೈವ್‌ಸ್ಪಾರ್ಕ್ ತಂಡವು ಹೊಸ ಇಂಧನ ಮಾದರಿಯ ಕಾರ್ಯಕ್ಷಮತೆ ಬಗೆಗೆ ರೆನಾಲ್ಟ್ ಡಸ್ಟರ್ ಡಿಸೇಲ್ ಆವೃತ್ತಿ ಮೂಲಕ ದೀರ್ಘಾವಧಿಯ ರೋಡ್ ಟ್ರಿಪ್ ಕೈಗೊಂಡಿತ್ತು. ಈ ವೇಳೆ ಇನ್ಡಿಜೆಲ್ ಮಾದರಿಯು ಸಾಮಾನ್ಯ ಡಿಸೇಲ್‌ಗಿಂತ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಸ್ಮೂಥ್ ಕಾರು ಚಾಲನೆಗೆ ಸಹಕಾರಿಯಾಗಿರುವುದು ಕಂಡುಬಂದಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಬೆಂಗಳೂರಿನಿಂದ ಮುಂಬೈ(ಮಂಗಳೂರು, ಗೋವಾ ಮಾರ್ಗದ ಮೂಲಕ) ತನಕ ರೆನಾಲ್ಟ್ ಡಸ್ಟರ್ ಕಾರಿನಲ್ಲಿ ಇನ್ಡಿಜೆಲ್ ಇಂಧನದ ಮೂಲಕವೇ ಪ್ರಯಾಣದ ಆರಂಭಿಸಿದ್ದ ನಮ್ಮ ತಂಡಕ್ಕೆ ಹೊಸ ಅನುಭವ ಆಗಿದ್ದಲ್ಲದೇ, ಸಾಮಾನ್ಯ ಡಿಸೇಲ್‌ಗಿಂತಲೂ ಅತಿ ಕಡಿಮೆ ಪ್ರಮಾಣದಲ್ಲಿ ನಿಗದಿತ ದೂರ ಕ್ರಮಿಸಿದ್ದು ಕಂಡುಬಂತು.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ರೆನಾಲ್ಟ್ ಡಸ್ಟರ್ ಡಿಸೇಲ್ ಮಾದರಿಯು ಸಾಮಾನ್ಯವಾಗಿ ಪ್ರತಿ ಲೀಟರ್‌ಗೆ 15ರಿಂದ 17 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಇದೇ ಕಾರು ಮಾದರಿಯು ಇನ್ಡಿಜೆಲ್ ಬಳಕೆ ಮಾಡಿ ಚಾಲನೆ ಮಾಡಿದಾಗ ಸರಾಸರಿಯಾಗಿ ಪ್ರತಿ ಲೀಟರ್‌ಗೆ 19ರಿಂದ 21 ಕಿ.ಮೀ ಮೈಲೇಜ್ ನೀಡಿದ್ದು ಅಚ್ಚರಿ ತಂದಿತು.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಜೊತೆಗೆ ಎಂಜಿನ್ ಸದ್ದು ಕೂಡಾ ಸಾಮಾನ್ಯ ಡಿಸೇಲ್ ಬಳಕೆ ಮಾಡುತ್ತಿದ್ದಾಗ ಆಗುತ್ತಿದ್ದ ಕರ್ಕಶ ಸಹ ಇನ್ಡಿಜೆಲ್ ಬಳಕೆ ನಂತರ ಉತ್ತಮ ಮಾದರಿಯಲ್ಲಿ ಪರ್ಫಾಮೆನ್ಸ್ ತೊರಿದ್ದಲ್ಲದೇ ಮಾಲಿನ್ಯ ತಡೆಯುವಲ್ಲಿ ಉತ್ತಮ ಕಾರ್ಯನಿರ್ವಹಣೆಯ ಭರವಸೆ ನೀಡಿದವು.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಸದ್ಯ ಇನ್ಡೆಜೆಲ್ ದೇಶದ ಪ್ರಮುಖ ನಗರಗಳಾದ ಹೈದ್ರಾಬಾದ್, ಅಹಮದಾಬಾದ್, ಜೈಪುರ್, ಪುಣೆ, ಮುಂಬೈನಲ್ಲಿ ಈಗಾಗಲೇ ಖರೀದಿಗೆ ಲಭ್ಯವಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಮಾತ್ರ ಹೊಸ ಇಂಧನ ಮಾದರಿಯನ್ನು ಪರಿಚಯಿಸಲಾಗಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಇನ್ಡಿಜೆಲ್ ಬೆಲೆ ಎಷ್ಟು?

ಡೀಸೆಲ್ ಬೆಲೆಗಿಂತಲೂ ಇನ್ಡೆಜೆಲ್ ಬೆಲೆ ರೂ.10 ಕಡಿಮೆಗೆ ಖರೀದಿಸಬಹುದಾಗಿದ್ದು, ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇದೇ ಹಸಿರು ಇಂಧನವನ್ನು ಇದೀಗ ಸುಧಾರಿತ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತಿದೆ.

ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪ್ರಸ್ತುತವಾಗಿ ಇನ್ಡೆಜೆಲ್ ಇಂಧನವನ್ನು ಸಿಂಗಪುರ್‌‌ನಲ್ಲಿರುವ ಘಟಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಇನ್ಡೆಜೆಲ್ ಇಂಧನ ಉತ್ಪಾದನಾ ಘಟಕಗಳನ್ನು ಹೊಂದುವ ಗುರಿಯನ್ನು ಹೊಂದಲಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಹೊಸ ಮಾದರಿಯ ಇಂಧನ ಕುರಿತು ಮಾತನಾಡಿರುವ ಮೈ ಇಕೋ ಎರ್ನಜಿ ಸಹ ಸಂಸ್ಥಾಪಕ ಸಂತೋಷ್ ವರ್ಮಾ, ಡೀಸೆಲ್ ಮಾದರಿಗಿಂತಲೂ ಇನ್ಡೆಜೆಲ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಸುಗಮ ಸಂಚಾರಕ್ಕೆ ಇದೊಂದು ಉತ್ತಮ ಮಾರ್ಗ" ಎಂದಿದ್ದಾರೆ.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಒಟ್ಟಿನಲ್ಲಿ ಡಿಸೇಲ್ ವಾಹನಗಳಿಂದ ಉತ್ಪತ್ತಿಯಾಗುತ್ತಿರುವ ಮಾಲಿನ್ಯದಿಂದ ಕಂಗೆಟ್ಟಿರುವ ನಗರ ಪ್ರದೇಶಗಳಲ್ಲಿ ಇನ್ಡಿಜೆಲ್ ಜನಪ್ರಿಯತೆ ಗಳಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಪರಿಸರ ಸ್ನೇಹಿ ವೈಶಿಷ್ಟ್ಯತೆಗಳೇ ಈ ಇಂಧನ ಖರೀದಿಯ ಪ್ಲಸ್ ಪಾಯಿಂಟ್ ಎನ್ನಬಹುದು.

ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ ಈ ಹಿಂದೆಯೇ ಇನ್ಡೆಜೆಲ್ ಮಾದರಿಯನ್ನು ಪರಿಚಯಿಸಲಾಗಿದ್ದರು, ಪೆಟ್ರೋಲಿಯಂ ಕಂಪನಿಗಳ ಹಿತಾಸಕ್ತಿಯಿಂದಾಗಿ ಇದನ್ನು ನಿರ್ಲಕ್ಷ ಮಾಡಲಾಗಿತ್ತು. ಆದ್ರೆ ಬದಲಾದ ಪರಿಸ್ಥಿತಿಗಳಿಂದಾಗಿ ಪರಿಸರ ಪೂಕರ ಇಂಧನಗಳಿಗೆ ಬೇಡಿಕೆ ಬಂದಿರುವುದು ಇನ್ಡೆಜೆಲ್ ಖರೀದಿಗೆ ಉತ್ತಮವಾಗಿದೆ.

ಪರ್ಯಾಯ ಇಂಧನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.

Most Read Articles

Kannada
Read more on auto news petrol diesel
English summary
Karnataka Chief Minister HD Kumaraswamy today announced that his government is reducing the prices of petrol and diesel by Rs. 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X