ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ವಹಿವಾಟು ಆರಂಭಿಸುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅನುಗುಣ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

By Praveen Sannamani

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ವಹಿವಾಟು ಆರಂಭಿಸುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅನುಗುಣ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

2018ರ ದೆಹಲಿ ಆಟೋ ಮೇಳದಲ್ಲಿ ತನ್ನ ಬಹುನೀರಿಕ್ಷಿತ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶಿಸಿ ಇದೀಗ ಬಿಡುಗಡೆ ಸಜ್ಜಾಗುತ್ತಿದ್ದು, ಈ ನಡುವೆ ಮತ್ತೆರಡು ಹೊಸ ಕಾರುಗಳನ್ನು ಸಹ ಬಿಡುಗಡೆ ಮಾಡುತ್ತಿರುವಾಗಿ ಸುಳಿವು ನೀಡಿದೆ. ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾದ ಸ್ಟೊನಿಕ್ ಮತ್ತು ಇನೋವಾ ಕ್ರಿಸ್ಟಾ ಮಾದರಿಯ ಗ್ರ್ಯಾಂಡ್ ಕಾರ್ನಿವಾಲ್ ಎಂಪಿವಿ ಕಾರನ್ನು ಪರಿಚಯಿಸುತ್ತಿರುವುದು ಖಚಿತವಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡುತ್ತಿರುವ ಕಿಯಾ ಸಂಸ್ಥೆಯು ತದನಂತರ ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ವಿವಿಧ ಕಾರು ಉತ್ಪನ್ನಗಳಿಂದ ಜನಪ್ರಿಯವಾಗಿರುವ ಕಿಯಾ ಮೋಟಾರ್ಸ್ ಹ್ಯುಂಡೈ ಜೊತೆಗೂಡಿ ತನ್ನ ಹೊಸ ಉತ್ಪನ್ನಗಳನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಇದೀಗ ಎಂಟ್ರಿ ನೀಡುತ್ತಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ವರದಿಗಳ ಪ್ರಕಾರ, ಕಿಯಾ ನಿರ್ಮಾಣದ ಸ್ಟೊನಿಕ್ ಕ್ರಾಸ್‍ಓವರ್ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಎಂಪಿವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿದ್ದಗೊಳಿಸಲು ಯೋಜನೆ ರೂಪಿಸಿದ್ದು, ಸ್ಟೊನಿಕ್ ಕಾರುಗಳು ಹ್ಯುಂಡೈ ನಿರ್ಮಾಣದ ಕೋನಾ ಎಸ್‌ಯುವಿ ಹೋಲಿಕೆಯನ್ನು ಪಡೆದಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಅದೇ ರೀತಿಯಾಗಿ ಟೊಯೊಟಾ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಉದ್ದೇಶದಿಂದ ಗ್ರ್ಯಾಂಡ್ ಕಾರ್ನಿವಾಲ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು ಬರೋಬ್ಬರಿ 11 ಸೀಟರ್ ವೈಶಿಷ್ಟ್ಯತೆಯನ್ನು ಹೊಂದಿಯಂತೆ. ಹೀಗಾಗಿ ಈ ಕಾರು ಟೂರಿಸ್ಟ್ ಬಳಕೆಯ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಾಧ್ಯತೆಯಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಸದ್ಯ ಇದೇ ಮಾದರಿಯು ಉತ್ತರ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಸೆಡೊನಾ ಹೆಸರಿನಲ್ಲಿ ಜನಪ್ರಿಯತೆ ಪಡೆದಿದೆ. ಐದು ಬಾಗಿಲು ವಿನ್ಯಾಸವನ್ನು ಹೊಂದಿರುವ ಈ ಕಾರು ಪವರ್ ಸ್ಲಿಡಿಂಗ್ ಡೋರ್ ಸಿಸ್ಟಂ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಕೇವಲ ಬಟನ್ ಪುಶ್ ಮಾಡಿ ಡೋರ್ ಎಳೆದುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇದರ ಜೊತೆಗೆ ಡ್ಯುಯಲ್ ಸನ್‌ರೂಫ್, ತ್ರಿ ಜೋನ್ ಏರ್ ಕಂಡಿಷನ್ ಸಿಸ್ಟಂ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯವನ್ನು ಪಡೆದಿರುವುದು ಎಂಪಿವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು 2.2 -ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವಿನ್ಯಾಸ ಹೊಂದಿವೆ. ಹಾಗೆಯೇ ಕ್ರಾಸ್ಓವರ್ ಸ್ಟೊನಿಕ್ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಡಿಸೇಲ್ ಎಂಜಿನ್ ಪಡೆದುಕೊಂಡಿವೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಿಯಾ ನಿರ್ಮಾಣದ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 8-ಸೀಟರ್ ಮತ್ತು 11 ಸೀಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಯಾವ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಒಟ್ಟಿನಲ್ಲಿ ಕಿಯಾ ಬಿಡುಗಡೆ ಮಾಡಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಇನೋವಾ ಕ್ರಿಸ್ಟಾ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಸ್ಟೊನಿಕ್ ಕಾರಿನ ಬೆಲೆಯು 14 ಲಕ್ಷದಿಂದ 18 ಲಕ್ಷ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳ ಬೆಲೆಯು 17 ಲಕ್ಷದಿಂದ 21 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಹೀಗಾಗಿ ಕಿಯಾ ಗ್ರ್ಯಾಂಡ್ ಕಾರ್ನಿವಾಲ್ ಭಾರತದಲ್ಲಿ ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಲಿದ್ದು, 2019ರ ಮಧ್ಯಂತರ ವೇಳೆಗೆ ಭಾರತದಲ್ಲಿ ಕಿಯಾ ಪರ್ವ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಇದಕ್ಕಾಗಿಯೇ ತೆಲಂಗಾಣದಲ್ಲಿ 10 ಸಾವಿರ ಕೋಟಿ ಬಂಡವಾಳದೊಂದಿಗೆ ಹೊಸ ಕಾರು ಉತ್ಪಾದನಾ ಘಟಕವನ್ನು ಆರಂಭಗೊಳಿಸಿರುವ ಕಿಯಾ ಸಂಸ್ಥೆಯು ಮಾರುತಿ ಸುಜುಕಿ ಜೊತೆ ಪೈಪೋಟಿ ನಡೆಸುವ ತವಕದಲ್ಲಿದೆ ಎಂದ್ರೆ ನೀವು ನಂಬಲೇಬೇಕು.

Most Read Articles

Kannada
Read more on kia motors ಕಿಯಾ
English summary
Kia Considering The Stonic And Grand Carnival For India.
Story first published: Friday, May 18, 2018, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X