ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಹೊಸ ವಾಹನ ಖರೀದಿಸಿದ ನಂತರ ಆ ವಾಹನದ ಲುಕ್ ಅನ್ನು ಹೆಚ್ಚಿಸಲು ಅಥವಾ ಶೋಕಿಗಾಗಿ ಮಾಡಿಫೈ ಮಾಡಿಸಿಕೊಂಡು ಮೆರೆದಾಟ್ಟುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಲ್ಲಿ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಅಳವಡಿಸುವುದು ಮತ್ತು ಕಾರಿಗೆ ಹೆಚ್ಚಿನ ಗಾತ್ರದ ಟೈರ್‍‍ಗಳನ್ನು ಅಳವಡಿಸಿಕೊಳ್ಳುವುದು.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಕೆಲವು ಮಾಡಿಫೈ ಮಾಡಿದ ವಾಹನಗಳಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಆಗುತ್ತಿರುವ ವಿಷಯ ಬಹುತೇಕರಿಗೆ ತಿಳಿದಿರುವ ವಿಷಯ. ಆದ್ರೆ ಅಂತ ವಿಚಾರಕ್ಕೆ ಬಂದರೆ ಹಲವರು ತಮ್ಮ ವಾಹನಗಳಿಗೆ ಮಾಡಿಫೈಡ್ ಹೆಡ್‍‍ಲೈಟ್‍‍ಗಳನ್ನು ಸಹ ಅಳವಡಿಸಿಕೊಂಡು ತಿರುಗಾಡುತ್ತಿದ್ದಾರೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಮಾಡಿಫೈಡ್ ಹೆಡ್‍‍ಲೈಟ್ ಅಳವಡಿಸಿಕೊಂಡಿರುವ ವಾಹನಗಳನ್ನು ಸಂಚಾರಿ ಪೊಲೀಸರು ಹಿಡಿದು ಅವುಗಳು ಎಷ್ಟು ಪ್ರಮಾಣದ ಬೆಳಕನ್ನು ಹರಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸರಿಯಾದ ಉಪಕರಣವಿಲ್ಲದೆ ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದರು.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಆದರೆ ಇದೀಗ ಕೇರಳ ಮೋಟಾರ್ ವೆಹಿಕಲ್ ಡಿಪಾರ್ಟ್‍‍ಮೆಂಟ್ ಇಂತಹ ಮಾಡಿಫೈಡ್ ಹೆಡ್‍‍ಲೈಟ್‍‍ಗಳನ್ನು ಅಳವಡಿಸಿ ವಾಹನ ಚಾಲನೆ ಮಾಡುವವರಿಗೆ ಪಾಠ ಕಲಿಸಲು ಹೊಸ ಉಪಕರಣವನ್ನು ಉಪಯೋಗಿಸಲು ಮುಂದಾಗಿದ್ದು, ಲಕ್ಸ್ ಮೀಟರ್ ಎಂಬ ಉಪಕರಣದಿಂದ ಮಾಡಿಫೈಡ್ ಹೆಡ್‍‍ಲೈಟ್‍‍ಗಳ ಹಾವಳಿ ತಡೆಗಟ್ಟಲು ಮುಂದಾಗಿದ್ದಾರೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಲಕ್ಸ್ ಮೀಟರ್ ಮಾಡಿಫೈ ಮಾಡಲಾದ ಹೆಡ್‍‍ಲೈಟ್‍‍ಗಳಿಂದ ಬರುವ ಪ್ರಕಾಶಮಾನತೆಯನ್ನು ಕಂಡು ಹಿಡಿಯಲು ಪೊಲೀಸರಿಗೆ ಸಹಾಯಕವಾಗಿದೆ. ಎಂವಿಡಿ ಈಗಾಗಲೆ ಈ ಲಕ್ಸ್ ಮೀಟರ್‍‍ಗಳನ್ನು 14 ಜಿಲ್ಲೆಯಲ್ಲಿನ ಪೊಲೀಸರಿಗೆ ನೀಡಲಾಗಿದ್ದು, ಮಾಡಿಫೈ ಹೆಡ್‍‍ಲೈಟ್‍ ಅಳವಡಿಸಿರುವ ವಾಹನ ಮಾಲೀಕರಿಗೆ ತಕ್ಕ ದಂಡವನ್ನು ವಿಧಿಸಲು ಸಹಾಯಕವಾಗಿದೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

14 ಜಿಲ್ಲೆಗಳಲ್ಲಿನ ಪೊಲೀಸರಿಗೆ ಎಷ್ಟು ಲಕ್ಸ್ ಮೀಟರ್‍‍ಗಳನ್ನು ನೀಡಲಾಗಿದೆ ಎಂಬ ಮಾಹಿತಿಯು ಇನ್ನು ಲಭ್ಯವಿಲ್ಲವಾಗಿದ್ದು, ಒಂದೊಂದು ಲಕ್ಸ್ ಮೀಟರ್ ಸುಮಾರು ರೂ.15,000 ವೆಚ್ಚದಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಮೊದಲಿಗೆ ಲಕ್ಸ್ ಮೀಟರ್‍‍ನ ಬಳಕೆಯನ್ನು ಕೇರಳದ ದಕ್ಷಿಣ ಭಾಗದ ಜಿಲ್ಲೆಗಳಿಗೆ ನೀಡಲಾಗಿತ್ತದೆ. ತಿರುವನಂತಪುರಂ, ಕೊಲ್ಲಮ್, ಪಾಥನಂತಿಟ್ಟ ಮತ್ತು ಅಲಪುಳ್ಳ ಎಂಬ ಜಿಲ್ಲೆಗಳಲ್ಲಿ ಮೊದಲಿಗೆ ಇವುಗಳನ್ನು ಅನುಷ್ಠಾನ ಮಾಡಿ ನಂತರ ಇನ್ನಿತರೆ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಈ ನಿಟ್ಟಿನಲ್ಲಿ ಪೊಲೀಸರು ತಮಗೆ ಅನುಮಾನ ಬಂದ ವಾಹನವನ್ನು ನಿಲ್ಲಿಸಿ ಹೆಡ್‍‍ಲೈಟ್‍‍ನ ಪ್ರಕಾಶಮಾನವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ನಿಗದಿಸಲಾದ ಪ್ರಕಾಶಮಾನಕ್ಕಿಂತ ಹೆಚ್ಚಿನದನ್ನು ಹೊರಸೂಸಿದರೆ ಅಂತವರಿಗೆ ಬರೊಬ್ಬರಿ ರೂ.1000 ದಂಡವನ್ನು ವಿಧಿಸಲಾಗುತ್ತದೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಅಷ್ಟೆ ಅಲ್ಲದೇ ಅವರಿಗೆ ಮಾಡಿಫೈಡ್ ಬಲ್ಬ್ಸ್ ಮತ್ತು ಲೈಟ್‍‍ಗಳನ್ನು ತೆಗೆದುಹಾಕಿಸಲು ಆದೇಶವನ್ನು ಸಹ ನೀಡಲಾಗುತ್ತದೆ. ಈಗಾಗಲೆ ಜಿಲ್ಲೆಗಳಲ್ಲಿನ ಪೊಲೀಸರಿಗೆ ಲಕ್ಸ್ ಮೀಟರ್ ಅನ್ನು ಬಳಸಿಕೊಂಡು ಮಾಡಿಫೈಡ್ ಹೆಡ್‍‍ಲೈಟ್‍‍ಗಳಿಂದ ಬರುವ ಪ್ರಕಾಶಮಾನವನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಾಗುತ್ತಿದ್ದು, ಪದೇ ಪದೇ ಇಂತಹ ಪ್ರಕರಣಗಳಲ್ಲಿ ಸಿಕ್ಕಿಕೊಂಡವರ ಮೇಲೆ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಪ್ರಕಾಶಮಾನ ದೀಪಗಳು ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಹೇಗೆ ಲಕ್ಸ್ ಮೀಟರ್ ಕೆಲಸ ಮಾಡುತ್ತದೆ. ಪ್ರಕಾಶಮಾನವಾದ ಹೆಡ್‍‍ಲ್ಯಾಂಪ್‍‍ಗಳ ಬಳಕೆಯಿಂದ ರಾಜ್ಯದಲ್ಲಿ ಅನೇಕ ಅಪಘಾತಗಳು ನಡೆದ ನಂತರ ಈ ಹಂತವನ್ನು ತೆಗೆದುಕೊಳ್ಳಲಾಗಿದೆ.

ಮಾಡಿಫೈಡ್ ಹೆಡ್‍‍ಲ್ಯಾಂಪ್ ಮತ್ತು ಬಲ್ಸ್ ಗಳನು ವಾಹನಗಳಲ್ಲಿ ಅಳವಡಿಸಿಕೊಳ್ಳುವುದನ್ನು ಕಾನೂನು ಬಹಿಷ್ಕರಿಸಿದೆ. ಆದರೂ ಸಹ ಹಲವಾರು ಎಸ್‍‍ಯುವಿ ಕಾರುಗಳಿಗೆ ಈ ಮಾಡಿಫಿಕೇಶನ್‍‍ಗಳು ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯು ಎಸ್‍‍ಯುವಿ ಕಾರುಗಳ ರೂಫ್‍‍ಟಾಪ್‍ನ ಮೇಲೆ ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಕೇರಳ ಸರ್ಕಾರವು ತೆಗೆದುಕೊಂಡ ಈ ನಿರ್ಧಾರದಾಂತೆ ದೇಶದಲ್ಲಿನ ಇನ್ನಿತರೆ ರಾಜ್ಯ ಸರ್ಕಾರಗಳು ತೆಗೆದುಕೊಂಡರೆ, ರಾತ್ರಿಯ ಹೊತ್ತಿನಲ್ಲಿ ಆಗುವ ಅಪಘಾತಗಳನ್ನು ಅದರಲ್ಲಿಯೂ ಘಾಟಿ ರಸ್ತೆಯಂತಹ ಮಾರ್ಗಗಳಲ್ಲಿ ಆಗುವ ಅಪಘಾತಗಳನ್ನು ಕಡಿಮೆ ಮಾಡಬಹುದು.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಮಾಡಿಫೈಡ್ ಹೆಡ್‍‍ಲೈಟ್‍‍ಗಳಿಂದ ತೊಂದರೆ

ಮಾಡಿಫೈಡ್ ಸೈಲೆನ್ಸರ್ ಹಾಕಿಸಿಕೊಂಡರೆ ಶಬ್ದ ಮಾಲಿನ್ಯ, ನಿಗದಿತ ಗಾತ್ರಕ್ಕಿಂತ ಹೆಚ್ಚಿನ ಗಾತ್ರದ ಟೈರ್‍‍ಗಳನ್ನು ಅಳವಡಿಸಿಕೊಂಡರೆ ಅವುಗಳು ಕಾರಿನ ಮೈಲೇಜ್ ಮತ್ತು ಎಂಜಿನ್‍‍ನ ಮೇಲೆ ಪ್ರಭಾವ ಬೀರುತ್ತದೆ. ಆದ್ರೆ ಮಾಡಿಫೈಡ್ ಹೆಡ್‍‍ಲೈಟ್‍‍ಗಳಿಂದ ಕಣ್ಣುಗಳಿಗೆ ಹಾನಿ.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಹೌದು, ಕೆಲವರು ವಾಹನ ಅಂದವಾಗಿ ಕಾಣಲು ಮತ್ತು ಶೋಕಿಗಾಗಿ ಮಾಡಿಫೈಡ್ ಹೆಡ್‍‍ಲ್ಯಾಂಪ್ಸ್ ಮತು ಬಲ್ಬ್ ಗಳನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳುತ್ತಾರೆ. ಆದರೆ ಅವುಗಳಿಂದ ಎದುರು ಬರುತ್ತಿರುವ ವಾಹನ ಚಾಲಕನ ಕಣ್ಣುಗಳಿಗೆ ಹಾನಿಯನ್ನುಂಟು ಮಾಡಿ ಕ್ಷಣ ಮಾತ್ರದಲ್ಲಿ ವಾಹನ ಚಾಲನೆಯ ನಿಯಂತ್ರಣವನ್ನು ತಪ್ಪಿಸಿ ಅಪಘಾತಕ್ಕೆ ಕಾರಣವಾಗಬಹುದು.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಆಷ್ಟೆ ಅಲ್ಲ ದೇಶದಲ್ಲಿ ಹೊಟ್ಟೆಪಾಡಿಗಾಗಿ ಹಲವಾರು ಚಾಲಕರು ದಿನ ರಾತ್ರಿ ಎಂದು ಲೆಕ್ಕಿಸದೆ ಡ್ರೈವಿಂಗ್ ಮಾಡುತ್ತಿರುತ್ತಾರೆ. ಇದರಿಂದ ಅವರ ಕಣ್ಣುಗಳು ವಿಶ್ರಾಂತಿ ಕಳೆದುಕೊಂಡರೂ ಸಹ ವಾಹನ ಚಾಲನೆ ಮಾಡುತ್ತಿರುತ್ತಾರೆ. ಆ ಕಣ್ಣುಗಳಿಗೆ ಮಾಡಿಫೈಡ್ ವಾಹನಗಳು ತುಂಬಾನೆ ಡೇಂಜರ್.

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಇವರಿಗೆ ಮಾತ್ರವಲ್ಲ ಕನ್ನಡಕ ಹಾಕಿಕೊಂಡು ವಾಹನ ಚಾಲನೆ ಮಾಡುವವರಿಗೆ ಸಹ ಹೈ ಭೀಮ್ ಲೈಟ್‍‍ಗಳು, ಮಾಡಿಫೈಡ್ ಬಲ್ಬ್ ಹೆಡ್‍‍ಲ್ಯಾಂಪ್‍‍ಗಳು ಅವರ ಕಣ್ಣುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಇತರರಿಗೆ ಮತ್ತು ಪರಿಸರಕ್ಕೆ ಹಾನಿಯಾಗದ ಉಕರಣಗಳನ್ನು ನಿಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಿ.

Source: onmanorama

Most Read Articles

Kannada
English summary
Now, MVD to check headlamp brightness with lux meters.
Story first published: Wednesday, November 7, 2018, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X