ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತಗಳ ಸಂಖ್ಯೆಯು ಕೂಡಾ ಏರಿಕೆಯಾಗುತ್ತಿದೆ. ಇದರಿಂದ ಪ್ರತಿವರ್ಷ ಸಾವಿರಾರು ಜನ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಸದ್ಯದಲ್ಲೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳು ಜಾರಿಯಾಗುತ್ತಿವೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಕೇವಲ ವಾಹನಗಳನ್ನು ಖರೀದಿ ಮಾಡುವುದು ಅಷ್ಟೇನು ದೊಡ್ಡ ವಿಚಾರವಲ್ಲ. ಅದಕ್ಕೆ ತಕ್ಕಂತೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಹೀಗಿದ್ದರೂ ಕೂಡಾ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ವಾಹನ ಸವಾರರು ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕೆಲವೊಮ್ಮೆ ಭೀಕರ ದುರಂತಗಳಿಗೆ ಕಾರಣವಾಗುತ್ತವೆ. ಇದರಿಂದಾಗಿಯೇ ಪ್ರತಿ ವರ್ಷ ಸಾವಿರಾರು ಜನ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಇದನ್ನು ತಡೆಯಲು ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಹೌದು, ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಜನದಟ್ಟಣೆ ಪ್ರದೇಶಗಳಲ್ಲಿ ವೇಗದ ಚಾಲನೆ ಚಾಲನೆ ಮಾಡುವವರು, ಚಾಲನೆ ಮಾಡುತ್ತಾ ಮೊಬೈಲ್ ಬಳಕೆ ಮಾಡುವವರು, ಸಿಗ್ನಲ್ ಜಂಪ್ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರ ಸರ್ಕಾರವು 3 ತಿಂಗಳ ಅವಧಿಗೆ ಚಾಲನಾ ಪರವಾನಿಗೆ ರದ್ದುಪಡಿಸಲು ಮುಂದಾಗಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಜೊತೆಗೆ ವಾಣಿಜ್ಯ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಸೇರಿದಂತೆ ಒಟ್ಟು 6 ಪ್ರಮುಖ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ರದ್ದುಪಡಿಸುವ ಕುರಿತು ಅಂತಿಮ ಹಂತದ ನಿರ್ಧಾರದ ನಿರ್ಧಾರ ಪ್ರಕಟಿಸುತ್ತಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ದಂಡಕ್ಕೂ ಜಗ್ಗದ ವಾಹನ ಸವಾರರು..!

ಹೊಸ ನಿಯಮ ಜಾರಿಗೆ ತರುತ್ತಿರುವ ಕುರಿತಂತೆ ಮಾತನಾಡಿರುವ ಮಾಹಾರಾಷ್ಟ್ರ ಹೆದ್ದಾರಿ ವರಿಷ್ಠಾಧಿಕಾರಿ ವಿಜಯ್ ಪಾಟೀಲ್ ಅವರು ಸಂಚಾರಿ ನಿಯಮ ಉಲ್ಲಂಘನೆ ವೇಳೆ ಚಾಲಕರಿಗೆ ದಂಡ ವಿಧಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಹೀಗಾಗಿ ಮಾಹಾರಾಷ್ಟ್ರದಲ್ಲಿ ಈ ಹೊಸ ನಿಯಮ ಜಾರಿಗೆ ಬರುವುದು ಬಹುತೇಕ ಖಚಿತವಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಇಂತಹ ಕಾಯ್ದೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಲಾದ್ರು ವಾಹನ ಸವಾರರು ತಮ್ಮ ಕೆಲವು ತಪ್ಪು ಚಾಲನಾ ಪ್ರವೃತ್ತಿಗಳನ್ನು ಕೈಬಿಡುವುದು ಒಳಿತು.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಸುಖಕರ ಪ್ರಯಾಣಕ್ಕೆ ಇರಲಿ ಈ ಸೌಲಭ್ಯಗಳು..!

ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲೀಕನ ಕರ್ತವ್ಯವಾಗಿದೆ. ಹೀಗಾಗಿ ನಿಮ್ಮ ಕಾರಿನಲ್ಲಿ ಇಂತಹ ಸೌಲಭ್ಯಗಳನ್ನು ಆದಷ್ಟು ಬೇಗನೇ ಆಳವಡಿಸಿಕೊಳ್ಳುವುದು ಉತ್ತಮ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ನೀವು ರಿವರ್ಸ್ ಗೇರ್ ಆಳವಡಿಸಿದಾಗ ಇದು ಸ್ವಯಂಚಾಲಿತವಾಗಿ ಕೆಲಸ ಆರಂಭಿಸಲಿದೆ. ಕಾರಿನ ಹಿಂಬದಿಯಲ್ಲಿರುವ ಚಿಕ್ಕ ಸೆನ್ಸಾರ್ ಗಳು ಅಲ್ಟ್ರಾಸೋನಿಕ್ ರೇಡಿಯೊ ವೇವ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಯಾವುದೇ ರೀತಿಯ ತಡೆ ಎದುರಾದ್ದಲ್ಲಿ ಎಚ್ಚರಿಸಲಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಆಳವಡಿಸಲಾದ ಎಲ್ ಸಿಡಿ ಪರದೆ ಮೇಲೆ ಸ್ಪಷ್ಟವಾದ ಗೋಚರತೆಯನ್ನು ನೀಡಲಿದೆ. ಬಹುತೇಕ ಎಲ್ಲ ಆಧುನಿಕ ಕಾರುಗಳಲ್ಲಿ ಇಂತಹ ಸೇವೆಗಳು ಲಭ್ಯವಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಇದು ಕಾರಿನ ಹಿಂಬದಿಯಲ್ಲಿ ಆಳವಡಿಸಲಾದ ಲೆನ್ಸ್ ಗಳ (ಟೈಲ್ ಗೇಟ್ ಅಥವಾ ಬಂಪರ್ ನಲ್ಲಿ) ಮೂಲಕ ಪ್ರತ್ಯಕ್ಷ ದರ್ಶನವನ್ನು ಸೀಟಿನಲ್ಲೇ ಕುಳಿತುಕೊಂಡು ನೋಡಬಹುದಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಗೇರ್ ಲಾಕ್

ಇತ್ತೀಚೆಗೆ ಕಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಡೋರ್ ಲಾಕ್ ಹೊರತಾಗಿಯು ಕೆಲವು ಪ್ರಕರಣಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಡೋರ್ ಅನ್ ಲಾಕ್ ಮಾಡಿ ಕಾರು ಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಗೇರ್ ಲಾಕ್ ಹೊಂದಿದ್ದರೆ ಇಂತಹ ಪ್ರಕರಣಗಳನ್ನು ತಡೆಯಬಹುದು.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಪ್ರತಿಫಲಿತ ಟೇಪ್

ಕಾರಿನಲ್ಲಿ ಕೆಂಪು ಬಣ್ಣದ ತ್ರಿಕೋಣಾಕೃತಿಯ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ. ಇದು ದೂರದಿಂದಲೇ ವಾಹನ ಪ್ರತಿಬಿಂಬಿಸುವಂತೆ ಮಾಡಲಿದ್ದು, ಹಿಂಬದಿಯ ಬರುವ ವಾಹನಗಳು ಎಚ್ಚೆತ್ತುಕೊಳ್ಳಲಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಲೈಫ್ ಹ್ಯಾಮರ್

ಲೈಫ್ ಹ್ಯಾಮರ್ ಗಳು ಎಮರ್ಜನ್ಸಿ ಹ್ಯಾಮೆರ್ ಗಳೆಂದು ಕರೆಯಲ್ಪಡುತ್ತಿದ್ದು, ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರಿನಿಂದ ಹೊರಬರಲು ನೆರವಾಗಲಿದೆ. ಲೈಫ್ ಹ್ಯಾಮರ್ ನೆರವಿನಿಂದ ಕಾರಿನ ಗಾಜು ಒಡೆಯಲು ಅಥವಾ ಸೀಟು ಬೆಲ್ಟ್ ಮುರಿಯಲು ನೆರವಾಗಲಿದೆ.

MOST READ: ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..!

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಕನ್ವೆಕ್ಸ್ ಮಿರರ್

ಹೊರಗಿನ ಕನ್ವೆಕ್ಸ್ ಮಿರರ್ ಗಳು ನಿಮಗೆ ಕನ್ನಡಿಯೊಳಗೆ ನಿಮಗೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಇದರಿಂದ ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಸಣ್ಣದಾಗಿ ಗೋಚರಿಸಲಿದೆ. ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಮತ್ತಷ್ಟು ದೂರದ ಪ್ರದೇಶದ ಗೋಚರತೆಯು ಲಭ್ಯವಾಗಲಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಮೊಬೈಲ್ ಹೊಲ್ಡರ್

ಕಾರು ಪ್ರಯಾಣದ ವೇಳೆ ಬಹುತೇಕ ಚಾಲಕರು ಮೊಬೈಲ್ ಬಳಕೆ ಮಾಡುವುದು ನಾವು ನೋಡಿದ್ದೇವೆ. ಆದ್ರೆ ಇಂತಹ ಅಭ್ಯಾಸಗಳು ನಿಮ್ಮ ಪ್ರಾಣಕ್ಕೆ ಕುತ್ತುತರಬಹುದು. ಹೀಗಾಗಿ ಚಾಲನೆ ವೇಳೆ ಗೂಗಲ್ ಮ್ಯಾಪ್ ಬಳಕೆ ಮಾಡಲು ಮೊಬೈಲ್ ಹೊಲ್ಡರ್ ನಿಮ್ಮ ಅನುಕೂಲಕ್ಕೆ ಬರಲಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಎಲ್ಇಡಿ ಆಕ್ಸಿಲರಿ ಲ್ಯಾಂಪ್

ಮಾರುಕಟ್ಟೆಯಲ್ಲಿ ಹಲವು ಶ್ರೇಣಿಯ ಎಲ್ಇಡಿ ಆಕ್ಸಿಲರಿ ಲ್ಯಾಂಪ್ ಲಭ್ಯವಿದ್ದು, ಕಾರಿನ ನೋಟವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಪ್ರದಾನ ಮಾಡಲಿದೆ. ಇದು ಬೇಗನೇ ಪ್ರತಿಫಲಿಸುವುದರಿಂದ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ನೆರವಾಗಲಿದೆ.

ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ಮೊಬೈಲ್ ಏರ್ ಕಂಪ್ರೆಸರ್

ದೂರದ ಪ್ರಯಾಣದಲ್ಲಿ ಆಗುವ ತೊಂದರೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ನಿಮ್ಮ ಕಾರಿನ ಪ್ರಮುಖ ಆಕ್ಸೆಸರಿಗಳಲ್ಲಿ ಮೊಬೈಲ್ ಏರ್ ಕಂಪ್ರೆಸರ್ ಕೂಡಾ ಒಂದು.

Most Read Articles

Kannada
English summary
Maharashtra Traffic Police Ready To Cancel This Offenders Driving Licence For Three Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X