ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಕಾರುಗಳು ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಸಂಸ್ಥೆಯು ತನ್ನ ಪ್ರಮುಖ ಕಾರುಗಳ ಬೆಲೆ ಭಾರೀ ಏರಿಕೆ ಮಾಡಿದ್ದು, ಪ್ರತಿ ಕಾರಿನ ಬೆಲೆಯು ರೂ. 25 ಸಾವಿರದಿಂದ ರೂ.35 ಸಾವಿರ ತನಕ ಬೆಲೆ ಹೆಚ್ಚಳ ಮಾಡಿದೆ.

By Praveen Sannamani

ಕಾರುಗಳು ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಸಂಸ್ಥೆಯು ತನ್ನ ಪ್ರಮುಖ ಕಾರುಗಳ ಬೆಲೆ ಭಾರೀ ಏರಿಕೆ ಮಾಡಿದ್ದು, ಪ್ರತಿ ಕಾರಿನ ಬೆಲೆಯು ರೂ. 25 ಸಾವಿರದಿಂದ ರೂ.35 ಸಾವಿರ ತನಕ ಬೆಲೆ ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಆಗಸ್ಟ್ 1, ಅಂದ್ರೆ ಇಂದಿನಿಂದಲೇ ಮಹೀಂದ್ರಾ ಕಾರುಗಳ ಬೆಲೆ ಪಟ್ಟಿಯು ಪರಿಷ್ಕಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳು ರೂ.25 ಸಾವಿರದಿಂದ ಹಾಗೂ ಉನ್ನತ ಮಟ್ಟದ ಕಾರುಗಳು ರೂ.35 ಸಾವಿರ ತನಕ ಹೆಚ್ಚುವರಿ ಬೆಲೆಯನ್ನು ಪಡೆದುಕೊಂಡಿವೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಲಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಮಹಿಂದ್ರಾ ಸಂಸ್ಥೆಯು ಪ್ರತಿಶತ 2 ರಷ್ಟು ಪ್ರತಿ ಕಾರಿನ ಬೆಲೆಯಲ್ಲೂ ಹೆಚ್ಚಳ ಮಾಡಿದ್ದು, ಕಳೆದ ಏಪ್ರಿಲ್ ತಿಂಗಳಿನಲ್ಲೂ ಸಹ ಕಾರಿನ ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡಿರುವುದು ಹೊಸ ಕಾರು ಖರೀದಿಯ ಹುಮ್ಮಸಿನಲ್ಲಿರುವ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಮಹೀಂದ್ರಾ ನಿರ್ಮಾಣದ ಇ2ಒ, ವೆರಿಟೊ, ಕೆಯುವಿ100, ಟಿಯುವಿ300, ಜೈಲೊ, ಎಕ್ಸ್‌ಯುವಿ500, ಸ್ಕಾರ್ಪಿಯೋ, ಬಲೆರೊ, ಥಾರ್ ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಆಟೋಮೆಟಿವ್ ವಿಭಾಗ ಅಧ್ಯಕ್ಷ ರಾಜನ್ ವಾಧೆರ್ ಅವರು "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯ' ಎಂದಿದ್ದಾರೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಆದ್ರೆ ಮಹೀಂದ್ರಾ ಉತ್ಪಾದಿತ ಹೊಸ ಉತ್ಪನ್ನಗಳಾದ ಟಿಯುವಿ300 ಪ್ಲಸ್ ಮತ್ತು ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳ ಬೆಲೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಳಾದ ಹ್ಯುಂಡೈ ಕ್ರೇಟಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಬೆಲೆಗಳಿಂತಲೂ ಆಕರ್ಷಕ ಬೆಲೆಗಳನ್ನ ನಿಗದಿ ಮಾಡಲಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಟಾಟಾ ಮೋಟಾರ್ಸ್, ಹೋಂಡಾ, ಆಡಿ, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಗಳು ಸಹ ಆಗಸ್ಟ್ 1ರಿಂದವೇ ಕಾರುಗಳ ಬೆಲೆಯಲ್ಲಿ ಬದಲಾವಣೆ ಮಾಡಿವೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಕೇಂದ್ರ ಸರ್ಕಾರ ಜಾರಿ ಮಾಡಿರುವ ಆಮದು ಶುಂಕ ಹೆಚ್ಚಳವೇ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಇದರ ಜೊತೆಗೆ ಆಯಾ ರಾಜ್ಯಗಳ ತೆರಿಗೆ ಪಟ್ಟಿಗಳು ಗಗನಮುಖಿಯಾಗಿರುವುದು ವಾಹನ ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಕಾರುಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ- ಯಾವ ಕಾರಿನ ಮೇಲೆ ಎಷ್ಟು ಹೆಚ್ಚಳ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

Most Read Articles

Kannada
English summary
Mahindra to increase car prices by up to Rs 35,000.
Story first published: Wednesday, August 1, 2018, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X