ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಮುಂದಿನ 2020ರ ವೇಳೆಗೆ ಬಿಎಸ್ 4 ವಾಹನ ಉತ್ಪಾದನೆ ಮತ್ತು ಮಾರಾಟ ಕೂಡಾ ನಿಷೇಧಗೊಳ್ಳಲಿದ್ದು, ಇದಕ್ಕಾಗಿ ಹೊಸ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಒಂದು ವರ್ಷಗಳ ಕಾಲ ಹೊಸ ಕಾರುಗಳ ಮಾರಾಟದಿಂದ ಹಿಂದೆ ಸರಿಯಲು ನಿರ್ಧರಿಸಲಿದೆ.

By Praveen Sannamani

ನಿಮಗೆಲ್ಲಾ ಗೊತ್ತಿರುವ ಹಾಗೆ ಕಳೆದ 2017ರ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್ 3 ವಾಹನಗಳ ಅಭಿವೃದ್ಧಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಬಿಎಸ್ 4 ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನ ಮಾದರಿಗಳನ್ನು ಮಾತ್ರವೇ ಮಾರಾಟಕ್ಕೆ ಅವಕಾಶ ನೀಡುತ್ತಿದೆ. ಹೀಗಿರುವಾಗ ಮುಂದಿನ 2020ರ ವೇಳೆಗೆ ಬಿಎಸ್ 4 ವಾಹನ ಉತ್ಪಾದನೆ ಮತ್ತು ಮಾರಾಟ ಕೂಡಾ ನಿಷೇಧಗೊಳ್ಳಲಿದ್ದು, ಇದಕ್ಕಾಗಿ ಹೊಸ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಒಂದು ವರ್ಷಗಳ ಕಾಲ ಹೊಸ ಕಾರುಗಳ ಮಾರಾಟದಿಂದ ಹಿಂದೆ ಸರಿಯಲು ನಿರ್ಧರಿಸಲಿದೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಹೌದು, ಮಹೀಂದ್ರಾ ಸಂಸ್ಥೆಯು ಬಿಎಸ್ 6 ವೈಶಿಷ್ಟ್ಯತೆಯ ವಾಹನಗಳ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರವನ್ನ ಕೈಗೊಳ್ಳಲು ಮುಂದಾಗಿದ್ದು, ಹೊಸ ವಾಹನಗಳಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕಾಗಿಯೇ ಮುಂದಿನ 2019ರ ಏಪ್ರಿಲ್ 1ರಿಂದ 2020ರ ಏಪ್ರಿಲ್ 30ರ ತನಕ ಯಾವುದೇ ಹೊಸ ವಾಹನಗಳನ್ನು ಬಿಡುಗಡೆಗೊಳಿಸದಿರಲು ನಿರ್ಧಾರ ಕೈಗೊಂಡಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್ 4 ವಾಹನಗಳು ಕೆಲವು ಕಡ್ಡಾಯ ಪ್ರಯಾಣಿಕ ಸೌಲಭ್ಯಗಳೊಂದಿಗೆ ಮಾಲಿನ್ಯ ತಗ್ಗಿಸಲು ಸಹಕಾರಿಯಾಗುತ್ತಿದ್ದು, ಮುಂದಿನ 2020ರ ಏಪ್ರಿಲ್ ನಂತರ ಹೊಸ ವಾಹನಗಳ ವಿನ್ಯಾಸಗಳು ಮತ್ತಷ್ಟು ಬದಲಾವಣೆಯಾಗಲಿವೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಇದಕ್ಕೆ ಕಾರಣ, ವಿಶ್ವಮಟ್ಟದಲ್ಲಿ ಮಾಲಿನ್ಯ ತಡೆ ಕುರಿತು ಹಲವು ಬದಲಾವಣೆ ತರಲಾಗುತ್ತಿದ್ದು, ಇದರಲ್ಲಿ ಬಿಎಸ್ 6 ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಕೂಡಾ ಮಹತ್ವದ್ದಾಗಿದೆ. ಹೀಗಾಗಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಎಂಜಿನ್‌ನಲ್ಲಿ ಕೆಲವು ಕಡ್ಡಾಯ ಮಾರ್ಪಾಡುಗಳನ್ನು ಪರಿಚಯಿಸಲಿದೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಇದರಿಂದ ಮಾಲಿನ್ಯ ಉತ್ಪಾದನೆ ತಡೆಗೆ ಸಹಕಾರಿಯಾಗಲಿದ್ದು, ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಕೆಲವು ಕಡ್ಡಾಯ ಸುರಕ್ಷಾ ಸಾಧಾನಗಳನ್ನ ಸಹ ಅಳವಡಿಸಬೇಕಿರುವುದು ಆಟೋ ಉತ್ಪಾದನಾ ಸಂಸ್ಥೆಗಳು ಮುಂದಿನ ಬಹುದೊಡ್ಡ ಸವಾಲಾಗಲಿದೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಅದರಲ್ಲೂ ಡೀಸೆಲ್ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಹೀಂದ್ರಾ ಸಂಸ್ಥೆಯು ಪ್ರತಿಯೊಂದು ವಾಹನಗಳನ್ನು ಸಹ ಬಿಎಸ್ 6 ದರ್ಜೆಗೆ ಮಾರ್ಪಾಡು ಮಾಡಬೇಕಾದ ಅನಿವಾರ್ಯತೆಗಳಿದ್ದು, ಇದೇ ಕಾರಣಕ್ಕೆ ಹೊಸ ವಾಹನಗಳ ಬಿಡುಗಡೆಗೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಬಂದಿಯೆಂತೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

2020ರ ಏಪ್ರಿಲ್ ತದನಂತರವಷ್ಟೇ ಕೇಂದ್ರ ಸಾರಿಗೆ ಇಲಾಖೆಯು ಸೂಚಿಸುವ ಮಾರ್ಗಸೂಚಿಯಂತೆಯೇ ಹೊಸ ವಾಹನಗಳನ್ನ ಉತ್ಪಾದನೆ ಮಾಡಿ ಮಾರಾಟ ಮಾಡಲಿರುವ ಮಹೀಂದ್ರಾ ಸಂಸ್ಥೆಯು, ಮಾಲಿನ್ಯ ತಡೆ ಮತ್ತು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷೆ ನೀಡುವ ಭರವಸೆಯಲ್ಲಿದೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಇನ್ನು ಭಾರತ ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಬಿಎಸ್ 4 ವಾಹನಗಳನ್ನು ಈಗಾಲಲೇ ನಿಷೇಧಗೊಳಿಸಿ ಬಿಎಸ್ 6 ವಾಹನಗಳನ್ನ ಕಡ್ಡಾಯ ಮಾಡಿರುವ ಅಲ್ಲಿನ ಸರ್ಕಾರಗಳು ಹೆಚ್ಚುತ್ತಿರುವ ಮಾಲಿನ್ಯ ತಡೆ ಉದ್ದೇಶದಿಂದ ಆಟೋ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿವೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಇದೇ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಸಹ 2020ರ ಏಪ್ರಿಲ್‌ನಿಂದ ಬಿಎಸ್ 6 ವಾಹನಗಳನ್ನು ಕಡ್ಡಾಯವಾಗಿಸಲಿದ್ದು, ಹೊಸ ಮಾರ್ಗಸೂಚಿಯಂತೆ ವಾಹನ ನಿರ್ಮಾಣ ಮಾಡುವುದು ಒಂದು ಸವಾಲಿನ ಯೋಜನೆಯಾಗಿದೆ.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಬೆಲೆ ಏರಿಕೆಯ ಬಿಸಿ..!

ಮೇಲೆ ಹೇಳಲಾದ ಬಿಎಸ್ 6 ಯೋಜನೆಯಿಂದ ವಾಹನಗಳ ಎಂಜಿನ್ ಮತ್ತು ಸುರಕ್ಷೆತೆಯಲ್ಲಿ ಹೆಚ್ಚಿನ ಗುಣಮಟ್ಟ ಪರಿಚಯಿಸಬೇಕಾದ ಅನಿವಾರ್ಯತೆಗಳಿದ್ದು, ಸದ್ಯ ಲಭ್ಯವಿರುವ ಬಿಎಸ್ 4 ವಾಹನಗಳ ಬೆಲೆಯು ಬಿಎಸ್ 6 ವೈಶಿಷ್ಟ್ಯತೆ ಹೊಂದಿದ ನಂತರ ಬೆಲೆಗಳಲ್ಲಿ ಭಾರೀ ಏರಿಕೆ ಕಾಣಲಿವೆ ಎನ್ನಲಾಗಿದೆ. ಹೀಗಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಬಿಎಸ್ 6 ಮಾರ್ಗಸೂಚಿಗಳನ್ನ ಅನುಸರಿಸರಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ ಎನ್ನಬಹುದು.

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಡ್ರೈವ್ ಸ್ವಾರ್ಕ್ ಅಭಿಪ್ರಾಯ

ಬಿಎಸ್ 6 ಅಭಿವೃದ್ಧಿಗಾಗಿ ಮಹೀಂದ್ರಾ ಸಂಸ್ಥೆಯು ತಗೆದುಕೊಳ್ಳುತ್ತಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಪ್ರಸ್ತುತ ದಿನಗಳಲ್ಲಿ ಮಾಲಿನ್ಯ ತಡೆಯುವ ಸಂಬಂಧ ಹೊಸ ವಾಹನಗಳ ಎಂಜಿನ್ ಬದಲಾವಣೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ ಒಂದು ವರ್ಷಗಳ ಕಾಲ ಹೊಸ ವಾಹನಗಳ ಬಿಡುಗಡೆಯಿಂದ ಹಿಂದೆ ಸರಿಸಲು ನಿರ್ಧರಿಸಿದ್ದು, ಅದಕ್ಕೂ ಮುನ್ನ 2019ರ ಏಪ್ರಿಲ್ ಒಳಗಾಗಿ ತನ್ನ ಬಹುನೀರಿಕ್ಷಿತ ಮರಾಜೊ ಎಂಪಿವಿ, ಎಕ್ಸ್‌ಯುವಿ 700 ಲಗ್ಷುರಿ ಎಸ್‌ಯುವಿ ಮತ್ತು ಸ್ಯಾಂಗ್‌ಯಾಂಗ್ ಕಂಪ್ಯಾಕ್ಟ್ ಎಸ್‌ಯುವಿಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

Most Read Articles

Kannada
English summary
Mahindra To Stop New Product Launches Starting April 2019 For A Year.
Story first published: Thursday, August 16, 2018, 13:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X