ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಪ್ರತಿಯೊಬ್ಬರಿಗೂ ಸ್ವಂತದೊಂದು ಕಾರು ಹೊಂದಬೇಕೇಂಬ ಆಸೆ ಇದ್ದೆ ಇರುತ್ತೆ. ಆದ್ರೆ ಹಣಕಾಸಿನ ವಿಚಾರಕ್ಕೆ ಬಂದಾಗ ಅದು ಕಷ್ಟ ಸಾಧ್ಯ. ಈ ಹಿನ್ನೆಲೆ ಹೊಸ ಪರಿಕಲ್ಪನೆಯೊಂದನ್ನು ಜಾರಿಗೆ ತಂದಿರುವ ಮಹೀಂದ್ರಾ ಸಂಸ್ಥೆಯು ನಿರ್ದಿಷ್ಟ ಪ್ರಮಾಣದ ಹಣ ಪಡೆದು ನಿಮಗೆ ಇಷ್ಟದ ಕಾರುಗಳನ್ನು ಒದಗಿಸುವ ಲೀಸ್‌ ಯೋಜನೆಗೆ ಚಾಲನೆ ನೀಡಿದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಇತ್ತೀಚೆಗೆ ಸ್ವಂತ ಕಾರು ಖರೀದಿಗಿಂತ ಬಾಡಿಗೆಗಾಗಿ ಕಾರುಗಳನ್ನು ಹೊಂದುವ ಪರಿಪಾಠ ಹೆಚ್ಚುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಸಿದ್ಧಗೊಳಿಸಿರುವ ಮಹೀಂದ್ರಾ ಮೋಟಾರ್ಸ್ ಸಂಸ್ಥೆಯು ಮಹೀಂದ್ರಾ ಫೈನಾನ್ಸ್ ಜೊತೆಗೂಡಿ ಲೀಸ್ ಆಧಾರದ ಮೇಲೆ ನಿಮ್ಮ ಇಷ್ಟದ ಕಾರುಗಳನ್ನು ಒದಗಿಸಲು ಮುಂದಾಗಿದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಹೊಸ ಯೋಜನೆಯ ಮೂಲಕ ಎಂಟ್ರಿ ಲೆವಲ್ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಮತ್ತು ಹೈ ಎಂಡ್ ಮಾದರಿಯಾದ ಎಕ್ಸ್‌ಯುವಿ 500 ಕಾರುಗಳನ್ನು ಗ್ರಾಹಕರಿಗೆ ಲೀಸ್‌ ನೀಡಲಿದ್ದು, ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು ಹಣ ಸಂದಾಯ ಮಾಡಬೇಕಾಗುತ್ತೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಕೆಯುವಿ 100 ನೆಕ್ಸ್ಟ್ ಕಾರುಗಳಿಗೆ ಪ್ರತಿ ತಿಂಗಳಿಗೆ ರೂ.13,499 ಮತ್ತು ಎಕ್ಸ್‌ಯುವಿ 500 ಕಾರುಗಳಿಗೆ ರೂ.32,999 ದರ ನಿಗದಿ ಮಾಡಿರುವ ಮಹೀಂದ್ರಾ ಸಂಸ್ಥೆಯು, ಇಂಧನ ಖರ್ಚು ಹೊರತು ಪಡಿಸಿ ಉಳಿದೆಲ್ಲಾ ಖರ್ಚುಗಳನ್ನು ತಾನೆ ನಿರ್ವಹಿಸಲಿದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಅಂದ್ರೆ ಕಾರಿನ ವಿಮೆ, ನಿರ್ವಹಣಾ ವೆಚ್ಚ, ರಸ್ತೆ ತೆರಿಗೆ, ಅಪಘಾತ ನಿರ್ವಹಣೆ ಸೇರಿದಂತೆ ಆನ್ ರೋಡ್ ಅಸಿಸ್ಟೆನ್ಸ್ ಸೌಲಭ್ಯವನ್ನು ನೀಡಲಿದ್ದು, ದೇಶದ ಯಾವುದೇ ಮೂಲೆಯಲ್ಲಿದ್ದರು ನಿಮ್ಮ ಅವಶ್ಯಕತೆಗೆ ಅನುಗಣವಾಗಿ ನೆರವಿಗೆ ಬರಲಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಹೊಸ ಸೌಲಭ್ಯ ಎಲ್ಲೆಲ್ಲಿ ಲಭ್ಯ?

ಸದ್ಯ ದೇಶದ ಪ್ರಮುಖ ಆರು ನಗರಗಳಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ಹಂತವಾಗಿ ಬೆಂಗಳೂರು, ದೆಹಲಿ, ಪುಣೆ, ಹೈದ್ರಾಬಾದ್, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ಈ ಯೋಜನೆ ಲಭ್ಯವಿವೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಮೊದಲ ಹಂತದಲ್ಲಿ ಗ್ರಾಹಕರ ಪ್ರತಿಕ್ರಿಯೆ ಮೇಲೆ ಎರಡನೇ ಹಂತದಲ್ಲಿ 19 ಪ್ರಮುಖ ನಗರಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿರುವ ಮಹೀಂದ್ರಾ, ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಹೊಸ ಅವಕಾಶ ನೀಡುತ್ತಿದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಸದ್ಯದ ಪರಿಸ್ಥಿತಿಯಲ್ಲಿ ಹೊಸದೊಂದು ಎಕ್ಸ್‌ಯುವಿ 500 ಖರೀದಿ ಮಾಡಿದರೂ ಪ್ರತಿ ತಿಂಗಳ ನಿರ್ವಹಣಾ ವೆಚ್ಚವು ಏನಿಲ್ಲಾ ಅಂದ್ರು ರೂ. 15 ರಿಂದ ರೂ. 20 ಸಾವಿರ ಖರ್ಚು ಬರುವುದಲ್ಲದೇ ಕಾರಿನ ಕಂತುಗಳು ಸೇರಿ 40 ಸಾವಿರ ಗಡಿ ದಾಟುತ್ತೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಹೀಗಿರುವಾಗ ಲೀಸ್‌ಗೆ ಕಾರುಗಳನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಲಿದ್ದು, ಕಾರಿನ ವಿಮೆ, ಅಪಘಾತವಾದ್ರು ಇಲ್ಲದ ಖರ್ಚುಗಳಿಂದಾಗಿ ಸ್ವಂತಕ್ಕೆ ಖರೀದಿ ಮಾಡುವುದಕ್ಕಿಂತಲೂ ಲೀಸ್‌ಗೆ ಕಾರು ಪಡೆದುಕೊಳ್ಳುವುದೇ ಉತ್ತಮ ಎನ್ನಿಸುತ್ತದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಇನ್ನು ಮಹೀಂದ್ರಾ ಹೊಸ ಯೋಜನೆಯನ್ನು ಜಾರಿ ತರಲು ಎಎಲ್‌ಡಿ ಆಟೋಮೋಟಿವ್ ಮತ್ತು ಓರಿಕ್ಸ್ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಆಸಕ್ತ ಗ್ರಾಹಕರು ಎಎಲ್‌ಡಿ ಆಟೋಮೋಟಿವ್ ಮತ್ತು ಓರಿಕ್ಸ್ ಸಂಸ್ಥೆಗಳ ಮೂಲಕ ಲೀಸ್‌ಗೆ ಪಡೆಯಬೇಕಾಗುತ್ತೆ.

MOST READ: ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಬುಕ್ಕಿಂಗ್ ಆರಂಭ- ಬೆಲೆ ಎಷ್ಟಿರಲಿದೆ ಗೊತ್ತಾ?

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಮಹೀಂದ್ರಾ ಹೊಸ ಯೋಜನೆಯು ಈ ಹಿಂದಿನ ಸ್ಮಾರ್ಟ್ ಲೀಸ್ ಯೋಜನೆಯೆಂತೆಯೇ ಇದು ಸಹ ಕಾರ್ಯನಿರ್ವಹಣೆ ಮಾಡಲಿದ್ದು, ಈ ಹಿಂದಿನ ಸ್ಮಾರ್ಟ್ ಲೀಸ್‌ನಲ್ಲಿ ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರವೇ ಒದಗಿಸಲಾಗುತ್ತಿತ್ತು. ಆದ್ರೆ ಹೊಸ ಯೋಜನೆಯಲ್ಲಿ ಕೆಯುವಿ 100 ನೆಕ್ಸ್ಟ್ ಮತ್ತು ಎಕ್ಸ್‌ಯುವಿ 500 ಕೂಡಾ ದೊರೆಯಲಿದ್ದು, ಮುಂಬರುವ ದಿನಗಳಲ್ಲಿ ಟಿಯುವಿ 300, ಮರಾಜೊ, ಬಲೆರೊ, ಸ್ಕಾರ್ಪಿಯೋ ಕೂಡಾ ಲೀಸ್‌ಗೆ ದೊರೆಯಲಿವೆ ಎನ್ನಲಾಗಿದೆ.

ಕಾರು ಖರೀದಿಯ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಮಹೀಂದ್ರಾ ಕಾರುಗಳು..!!

ಒಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಜಾರಿಗೆ ತಂದಿರುವ ಈ ವಿನೂತನ ಯೋಜನೆಯು ಕಾರು ಖರೀದಿಗೆ ಕಷ್ಟಪಡುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದ್ದು, ಮಹೀಂದ್ರಾ ಫೈನಾನ್ಸಿಲ್ ಮೂಲಕ ಗ್ರಾಹಕರಿಗೆ ಹಣಕಾಸಿನ ನೆರವು ಕೂಡಾ ಸಿಗಲಿದೆ. ಹೀಗಾಗಿ ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

ಮಹೀಂದ್ರಾ ಹೊಚ್ಚ ಹೊಸ ಮರಾಜೊ ಕಾರಿನ ಫೋಟೋ ಗ್ಯಾಲರಿ..!

Kannada
English summary
Mahindra Introduces Leasing Scheme For Retail Buyers — A Unique Ownership Experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X