ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಸಂಸ್ಥೆಯು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರುಗಳಿಗೆ ಪೈಪೋಟಿ ನೀಡಲು ತಮ್ಮ ಮರಾಜೊ ಕಾರನ್ನು ಹೊಚ್ಚಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ನೀಡಿ, ಮೂರು ತಿಂಗಳುಗಳ ಹಿಂದೆಯೆ ಬಿಡುಗಡೆ ಮಾಡಿದ್ದು, ಇದೀಗ ಅಧಿಕೃತವಾದ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಉತ್ತಮವಾದ ಅಂಕವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಹೌದು, ಮಹೀಂದ್ರಾ ಮರಾಜೋ ಕಾರು ಬಿಡುಗಡೆಗೊಂಡಾಗಿನಿಂದಲೂ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಗ್ರಾಹಕರು ಈ ಕಾರನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ದೇಶದಲ್ಲಿನ ಪ್ರಮುಖ ಮೆಟ್ರೋ ನಗರಗಳಲ್ಲಿ ದಿನಂಪ್ರತಿ 200ಕ್ಕು ಹೆಚ್ಚು ಬುಕ್ಕಿಂಗ್‍‍ಗಳನ್ನು ಪಡೆಯುತ್ತಿರುವ ಮರಾಜೊ ಕಾರು, ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5ಕ್ಕೆ ನಾಲ್ಕು ಅಂಕಗಳನ್ನು ಪಡೆದು, ಮಾರುಕಟ್ಟೆಯಲ್ಲಿರುವ ಎಂಪಿವಿ ಕಾರುಗಳಲ್ಲಿ ಸುರಕ್ಷಿತವಾದದ್ದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಮರಾಜೊ ಕಾರಿನಲ್ಲಿ ಅಳವಡಿಸಲಾಗಿರುವ ಎರಡು ಏರ್‍‍ಬ್ಯಾಗ್‍ಗಳು, ಎಬಿಎಸ್, ಮತ್ತು ಐಎಸ್ಒಫಿಕ್ಸ್ ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಗ್ಲೋಬಲ್ ಎನ್‍ಸಿಎಪಿಯಲ್ಲಿ ನಡೆಸಿದ ಕ್ರ್ಯಾಶ್ ಟಸ್ಟಿಂಗ್‍ನಲ್ಲಿ, ವಯಸ್ಕರ ರಕ್ಷಣೆಯಲ್ಲಿ ನಾಲ್ಕು ಅಂಕ ಮತ್ತು ಅಪ್ರಾಪ್ತರ ರಕ್ಷಣೇಯಲ್ಲಿ 2 ಅಂಕಗಳನ್ನು ಪಡೆದುಕೊಂಡಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಈ ಕುರಿತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‍ನ ಆಟೋಮೋಟಿವ್ ಸೆಕ್ಟರ್‍‍ನ ಅಧ್ಯಕ್ಷರಾದ ರಾಜನ್ ವಧೇರಾ ರವರು ' ಮಹೀಂದ್ರಾ ಸಂಸ್ಥೆಗೆ ಇದೊಂದು ಸಂತೋಶದ ಸುದ್ಧಿಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮರಾಜೊ ಎಂಪಿವಿ ಕಾರು ಉತ್ತಮ ಅಂಕ ಪಡೆದುಕೊಂಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ನಾವು ಬೇಕಾದ ಎಲ್ಲಾ ಆಧೂನಿಕ ಉಪಕರಣಗಳನ್ನು ನಾವು ಈ ಕಾರಿನಲ್ಲಿ ಅಳವಡಿಸಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಏಷಿಯಾ ಎನ್‌ಸಿಎಪಿ ಹಾಗೂ ಲ್ಯಾಟಿನ್ ಎನ್‌ಸಿಎಪಿ ಸಂಸ್ಥೆಗಳು ಹೊಸ ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತವೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಇನ್ನು ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನು ಸಿದ್ದಗೊಳಿಸಲಾಗಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಎಂ2, ಎಂ4, ಎಂ6 ಮತ್ತು ಎಂ8 ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮರಾಜೊ ಕಾರುಗಳು ಆರಂಭಿಕವಾಗಿ ರೂ. 9.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.13.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಸದ್ಯ ಹೊಸ ಮರಾಜೊ ಕಾರುಗಳಿಗಾಗಿ ದಾಖಲಾಗುತ್ತಿರುವ ಬುಕ್ಕಿಂಗ್‌ಗಳಲ್ಲಿ ಶೇ.80ಕ್ಕೂ ಹೆಚ್ಚು ಗ್ರಾಹಕರು ಟಾಪ್ ಎಂಡ್ ಮಾದರಿಯಾದ ಎಂ8 ವೆರಿಯೆಂಟ್‌ಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರು ಮರಾಜೊ ಖರೀದಿಗೆ ಒಲವು ತೋರುತ್ತಿದ್ದಾರೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಜೊತೆಗೆ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್ಸ್, ಆಕರ್ಷಕ ಬಂಪರ್, 17-ಇಂಚಿನ ಅಲಾಯ್ ಚಕ್ರಗಳು, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಕಾರಿನ ಹಿಂಭಾಗದ ಪ್ರೋಫೈಲ್‌ನಲ್ಲಿ ಶಾರ್ಕ್ ಎಲ್‌ಇಡಿ ಟೈಲ್ ಲೈಟ್ಸ್ , ಹೈ ಸ್ಟಾಪ್ ಲ್ಯಾಂಪ್ ಸೇರಿದಂತೆ ಸ್ಪೋರ್ಟಿ ರಿಯರ್ ಬಂಪರ್ ಪಡೆದಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಕಾರಿನ ಒಳಾಂಗಣ ವಿನ್ಯಾಸ

ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್‌ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್‌ ಕಮಾಂಡ್‌ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ. ಇದೀಗ ಹೆಚ್ಚುವರಿಯಾಗಿ ಆ್ಯಪಲ್ ಕಾರ್ ಪ್ಲೇ ಸೇರಿದಂತೆ ಪ್ರಮುಖ ಬದಲಾವಣೆ ಮುಂದಾಗಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತುಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಸದ್ಯದಲ್ಲೇ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವರ್ಷನ್‌ಗಳು ಬಿಡುಗಡೆಯಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಕಾರಿನ ಮೇಲೆ ಗರಿಷ್ಠ ವಾರಂಟಿ

ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮರಾಜೊ ಕಾರುಗಳು ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಭಾರೀ ಬೇಡಿಕೆ ಹುಟ್ಟುಹಾಕಿವೆ ಎನ್ನಬಹುದು.

Most Read Articles

Kannada
English summary
Mahindra Marazzo First Indian MPV to score 4 star safety In Crash Test Read In Kannada
Story first published: Saturday, December 8, 2018, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X