ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

By Praveen Sannamani

ದೇವರನಾಡು ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಹಿಂದೆಂದೂ ಕಂಡರಿಯದ ಅನಾಹುತವನ್ನು ನೆನಪಿಸಿಕೊಂಡರೆ ಈಗಲೂ ಮೈ ಜುಂ ಎನಿಸುತ್ತೆ. ಯಾಕೆಂದ್ರೆ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ಹೋರಾಡಿದ ಅಲ್ಲಿನ ಮೀನುಗಾರರ ಹರಸಾಹಸವನ್ನು ಜನ ಮರೆಯಲು ಸಾಧ್ಯವೇ ಇಲ್ಲ. ಈ ವೇಳೆ ತನ್ನ ಪ್ರಾಣದ ಹಂಗು ತೊರೆದು ಅಸಹಾಯಕರ ನೆರವಿಗೆ ನಿಂತಿದ್ದ ಮೀನುಗಾರ ಯುವಕನೊಬ್ಬ ಇದೀಗ ಕೇರಳ ಜನತೆಯ ಪಾಲಿನ ಹೀರೋ ಆಗಿದ್ದಾನೆ ಅಂದ್ರೆ ನೀವು ನಂಬಲೇಬೇಕು.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಹೌದು, ಭೀಕರ ಪ್ರವಾಹದಲ್ಲಿ ಸಿಕ್ಕು ನೆಲೆಕಂಡುಕೊಳ್ಳಲು ಹೆಣಗಾಡುತ್ತಿದ್ದ ಅಸಹಾಯಕರ ನೆರವಿಗೆ ನಿಂತಿದ್ದ ಜೈಸಾಲ್ ಕೆ.ಪಿ ಎನ್ನುವ ಯುವಕನೊಬ್ಬ ಸಾವಿರಾರು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ. ಸೇನೆಯ ಜೊತೆಗೆ ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿ ಎನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಈ ಯುವಕ ಇದುವರೆಗೂ ಸಂತ್ರಸ್ತರಿಗೆ ಸೂರು ಹೊಂದಿಸಲು ಪರಿಶ್ರಮಪಡುತ್ತಿದ್ದಾನೆ. ಹೀಗಿರುವಾಗ ಈ ಯುವಕನಿಗೆ ಮಹೀಂದ್ರಾ ಸಂಸ್ಥೆಯು ಜನಸೇವೆಗಾಗಿ ವಿಶೇಷ ಉಡುಗೊರೆ ಒಂದನ್ನು ನೀಡುವ ಮೂಲಕ ಯವಕನ ನಿಸ್ವಾರ್ಥ ಸೇವೆಗೆ ಬೆನ್ನುತಟ್ಟಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವಾಗ ಬೋಟ್ ಹತ್ತಲು ಅಸಹಾಯಕರಿಗೆ ತನ್ನ ಬೆನ್ನನ್ನು ಮೆಟ್ಟಿಲಾಗಿ ಮಾಡಿದ್ದ ಜೈಸಾಲ್ ಕೆ.ಪಿ ದೇಶ ವಿದೇಶಿಗಳಲ್ಲೂ ಭಾರೀ ಚರ್ಚೆಗೆ ಕಾರಣನಾಗಿದ್ದ. ಇದನ್ನು ಕಂಡಿದ್ದ ಮಹೀಂದ್ರಾ ಸಂಸ್ಥೆಯು ಸಹ ಆ ಯುವಕನಿಗೆ ತನ್ನ ಕಡೆಯಿಂದ ಸಪ್ರೈಸ್‌ ಗಿಫ್ಟ್ ನೀಡಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಹೀಂದ್ರಾ ಸಂಸ್ಥೆಯು ಕಳೆದ ವಾರ ಭಾರತದಲ್ಲಿ ಹೊಸದಾಗಿ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಸುಮಾರು 11 ಲಕ್ಷ ಮೌಲ್ಯದ ಹೊಸ ಕಾರನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನಿಂತಿದ್ದ ಜೈಸಾಲ್ ಕೆ.ಪಿ ಯವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಯುವಕ ಹರಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಕೇರಳದ ಕಾಲಿಕಟ್‌ನಲ್ಲಿರುವ ಎರ್ಮಾ ಮಹೀಂದ್ರಾ ಡೀಲರ್ಸ್‌ನಲ್ಲಿ ಮರಾಜೊ ಹೊಸ ಕಾರನ್ನು ಜೈಸಾಲ್ ಕೆ.ಪಿ ಯವರಿಗೆ ಹಸ್ತಾಂತರ ಮಾಡಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ತುಲುಪಿಸಲು ಮಾಡಿದ ಪ್ರಯತ್ನಕ್ಕೆ ಧನ್ಯವಾದ ಹೇಳಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಇನ್ನು ಮರಾಜೊ ವಿನೂತನ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕೂಡಾ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಈ ಹೊಸ ಕಾರಿನ ಅಭಿವೃದ್ಧಿ ಹಿಂದಿನ ವಿಶೇಷತೆಗಳನ್ನು ನೀವು ತಿಳಿಯಲೇಬೇಕು. ಶಾರ್ಕ್ ಡಿಸೈನ್ ಆಧಾರಿತ ಮರಾಜೊ ಕಾರುಗಳು ಹೆಸರಿನ ಹಿಂದೆ ಒಂದು ವಿಶೇಷತೆಯಿದೆ.

MOST READ: ಪ್ರವಾಹ ಪೀಡಿತ ಕೇರಳಕ್ಕೆ ಹೋಂಡಾ ಸಂಸ್ಥೆಯು ನೀಡಿದ ದೇಣಿಗೆ ಎಷ್ಟು ಗೊತ್ತಾ?

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

'ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನೂಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನ ಸಿದ್ದಗೊಳಿಸಲಾಗಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಹೀಂದ್ರಾ ಸಂಸ್ಥೆಯು ಎಸ್‌ಯುವಿ ಕಾರು ಮಾರಾಟದಲ್ಲಿ ಈಗಾಗಲೇ ಹಲವು ಪ್ರಯೋಗಗಳ ಮೂಲಕ ಯಶಸ್ವಿ ಕಂಡುಕೊಂಡಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬಂದಿರುವ ಮರಾಜೊ ಎಂಪಿವಿ ಮಾದರಿಯು ಇದೀಗ ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯಲಿರುವ ಮರಾಜೊ ಕಾರುಗಳ ಬೆಲೆ ಪಟ್ಟಿಯು ಸಹ ಗ್ರಾಹಕರ ಪರವಾಗಿದೆ ಎನ್ನಬಹುದು.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಾರಾಜೊ ಕಾರುಗಳು ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು - ಬೆಲೆಗಳು

ಮರಾಜೊ ಎಂ2 -ರೂ. 9,99,000

ಮರಾಜೊ ಎಂ4 -ರೂ. 10,95,000

ಮರಾಜೊ ಎಂ6 -ರೂ. 12,40,000

ಮರಾಜೊ ಎಂ8 -ರೂ. 13,90,000

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಜೊತೆಗೆ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್ಸ್, ಆಕರ್ಷಕ ಬಂಪರ್, 17-ಇಂಚಿನ ಅಲಾಯ್ ಚಕ್ರಗಳು, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಕಾರಿನ ಹಿಂಭಾಗದ ಪ್ರೋಫೈಲ್‌ನಲ್ಲಿ ಶಾರ್ಕ್ ಎಲ್‌ಇಡಿ ಟೈಲ್ ಲೈಟ್ಸ್ , ಹೈ ಸ್ಟಾಪ್ ಲ್ಯಾಂಪ್ ಸೇರಿದಂತೆ ಸ್ಪೋರ್ಟಿ ರಿಯರ್ ಬಂಪರ್ ಪಡೆದಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ, ಟಾಟಾ ಹೆಕ್ಸಾ, ರೆನಾಲ್ಟ್ ಲೋಡ್ಜಿ ಸೇರಿದಂತೆ ವಿವಿಧ ಎಂಪಿವಿ ಕಾರುಗಳಿಗೆ ನೇರ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಈ ಹೊಸ ಕಾರು ಭಾರೀ ಬೇಡಿಕೆ ದಾಖಲಿಸುವ ನೀರಿಕ್ಷೆಗಳಿವೆ. ಈ ವೇಳೆ ಪ್ರವಾಹ ಪೀಡಿತ ಕೇರಳದಲ್ಲಿ ಅಸಹಾಯಕರ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿದ ಯುವಕನಿಗೆ ಮರಾಜೊ ಕಾರನ್ನು ಉಡುಗೊರೆಯಾಗಿ ನೀಡಿದ್ದು ಮತ್ತೊಂದು ವಿಶೇಷ ಎನ್ನಬಹುದು.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

Most Read Articles

Kannada
Read more on auto news off beat mahindra
English summary
Mahindra Marazzo Gifted To Fisherman, Jaisal KP — A Hero During The Kerala Floods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X