ಶೀಘ್ರವೇ ಕಣ್ಮರೆಯಾಗಲಿದೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಕೆಲ ದಿನಗಳ ದಿಂದಷ್ಟೆ ಮಾರುತಿ ಸುಜುಕಿ ತಮ್ಮ ಆಲೋ 800 ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಆದರೆ ಇದೀಗ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಇನ್ನು ಕೆಲವೇ ದಿಗಳಲ್ಲಿ ತಮ್ಮ ಎರಡು ಕಾರುಗಳಿಗೆ ವಿಧಾಯ ಹೇಳಲಿದೆಯಂತೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಹೌದು, ಮನಿಕಂಟ್ರೋಲ್ ವರದಿಗಳ ಪ್ರಕಾರ ಮಹೀಂದ್ರಾ ಸಂಸ್ಥೆಯು ಕಳೆಪೆ ಮಾರಾಟ ಮತ್ತು ಸರಿಯಾದ ಸುರಕ್ಷಾ ಸಾಧನ ಉಪಕರಣಗಳು ಇಲ್ಲವಾದ ಕಾರಣ ತಮ್ಮ ನುವೋಸ್ಪೋರ್ಟ್ ಮತ್ತು ವೆರಿಟೋ ವೈಬ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಈಗಾಗಲೆ ಈ ಎರಡು ಕಾರುಗಳ ಉತ್ಪಾದನೆಯನ್ನು ಕೂಡಾ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

2019ರ ಅಕ್ಟೋಬರ್ 1 ರಿಂದ ಎಲ್ಲಾ ಕಾರುಗಳು ಕ್ರ್ಯಾಶ್ ಸೇಫ್ಟಿ ನಿಯಮಗಳನ್ನು ಪೂರೈಸಬೇಕಾಗಿದ್ದು, ಅಂದರೆ ಏರ್‍‍ಬ್ಯಾಗ್‍ಗಳನ್ನು ಅಳವಡಿಸಲು ಅದು ಕಡ್ಡಾಯವಾಗುತ್ತದೆ. ಅಲ್ಲದೆ, ಏಪ್ರಿಲ್ 1, 2020 ರಿಂದ ಭಾರತದಲ್ಲಿ ಭಾರತ್ ಸ್ಟೇಜ್-VI (ಬಿಎಸ್-VI) ಹೊರಸೂಸುವಿಕೆ ನಿಯಮಗಳನ್ನು ಅಳವಡಿಸಿಕೊಳ್ಳುತ್ತದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ನಡೆದ ಪತ್ರಿಕಾಘೋಷ್ಟಿಯಲ್ಲಿ 2020ರ ವೇಳೆಗೆ ಎರಡು ವಾಹನಗಳನ್ನ ಸ್ಥಗಿತಗೊಳಿಸಲಿದೆ ಎಂಬ ಮಾಹಿತಿಯನ್ನು ನೀಡಿದ್ದು, ಯಾವ ವಾಹನಗಳನ್ನು ಸ್ಥಗಿತಗೊಳಿಸಲಿದೆ ಎಂಬ ಮಾಹಿತಿಯು ಲಭ್ಯವಾಗಿಲ್ಲ. ಆದ್ರೆ ಮುಂಬೈ ಮೂಲದ ಕಂಪೆನಿ ಎಸ್‍ಐಎಒ ಸಂಸ್ಥೆಯು ನುವೊಸ್ಪೋರ್ಟ್ ಮತ್ತು ವೆರಿಟೋ ವೈಬ್ ಎಂಬ ಕಾರುಗಳನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

'ಈಗ ಅನುಸರಿಸಬೇಕಾದ ಎಲ್ಲಾ ಉತ್ಪನ್ನಗಳು ಕಂಪ್ಲೈಂಟ್ ಆಗಿದ್ದು, ಮುಂದಿನ ವರ್ಷ ಕಂಪ್ಲೀಟ್ ಆಗಬೇಕಾದ ಎಲ್ಲಾ ಉತ್ಪನ್ನಗಳು ಮುಂದಿನ ವರ್ಷ ಆಗುತ್ತದೆ.ಸುರಕ್ಷಿತ ರೂಢಿಗಳ ಕಾರಣದಿಂದಾಗಿ ಸ್ಥಗಿತಗೊಳ್ಳುವ ಒಂದು ಕಡಿಮೆ ಪ್ರಮಾಣದ ಪರಿಮಾಣ ಉತ್ಪನ್ನಗಳಿವೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಬಿಎಸ್-6 ನಿಯಮಾವಳಿಗಳ ಕಾರಣದಿಂದಾಗಿ ಒಂದು ಅಥವಾ ಎರಡು ಮಾದರಿಯ ಕಾರುಗಳನ್ನು ಸ್ಥಗಿತಗೊಳಿಸಲಾಗುವುದು' ಎಂದು ಮಹೀಂದ್ರಾ ಆಂಡ್ ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಹೇಳಿದ್ದಾರೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ವೆರಿಟೊ ವೈಬ್ ಲೊಗಾನ್ ಉತ್ಪನ್ನಗಳಲ್ಲಿ ಒಂದಾಗಿದ್ದು, ಇದು ಫ್ರೆಂಚ್ ಕಾರು ತಯಾರಕ ರೆನಾಲ್ಟ್ ನೊಂದಿಗೆ ವಿಫಲವಾದ ಪಾಲುದಾರಿಕೆಯ ಸಮಯದಲ್ಲಿ ಮಹೀಂದ್ರಾ ಸಂಸ್ಥೆಯು 2013 ರಲ್ಲಿ ಅಭಿವೃದ್ಧಿಪಡಿಸಿತ್ತು. ವೆರಿಟೊ ವೈಬ್ ಲೋಗನ್ ನಿಂದ ಅಭಿವೃದ್ಧಿಗೊಂಡ ಹ್ಯಾಚ್‍ಬ್ಯಾಕ್ ಆಗಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಸ್ಥಗಿತಗೊಳ್ಳಲಿರುವ ಮತ್ತೊಂದು ವಾಹನವು ನುವೊಸ್ಪೋರ್ಟ್ ಆಗಿದ್ದು ಇದು ಮೂಲತಃ ಕ್ವಾಂಟೊ ಸಬ್-4 ಮೀಟರ್ ಎಸ್‍ಯುವಿಯ ಒಂದು ಸುಸಜ್ಜಿತ ಆವೃತ್ತಿಯಾಗಿದೆ. ಕ್ಸೈಲೋ ಕಾರಿಗೆ ಅನುಗುಣವಾದ ಅದೇ ವೇದಿಕೆಯ ಆಧಾರದ ಮೇಲೆ, ಕಡಿಮೆ ಮಾರಾಟದ ಸಂಖ್ಯೆಗಳ ಕಾರಣದಿಂದಾಗಿ ನೂುವೊಸ್ಪೋರ್ಟ್‍ನ ಉತ್ಪಾದನೆಯು ಕೆಲವು ತಿಂಗಳ ಹಿಂದೆ ಮಹೀಂದ್ರಾದಿಂದ ನಿಲ್ಲಿಸಲ್ಪಟ್ಟಿತು.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಕಳಪೆ ಮಾರಾಟ ಮತ್ತು ಸರಿಯಾದ ಸುರಕ್ಷಾ ಸಾಧನಗಳು ಇಲ್ಲದಿರುವ ಕಾರಣ ಮಹೀಂದ್ರಾ ಕ್ಸೈಲೊ, ವೆರಿಟೋ ಮತ್ತು ಥಾರ್ ಕಾರುಗಳು ಮುಂದಿನ 15 ತಿಂಗಳುಗಳಲ್ಲಿ ಕಣ್ಮರೆಯಾಗುವ ಎಲ್ಲಾ ಗುಣಲಕ್ಷಣಗಳಿವೆ ಎನ್ನಲಾಗಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಟೊಯೋಟಾ ಇನ್ನೊವಾ ಕಾರಿಗೆ ಸವಾಲು ನೀಡಲು ಪ್ರಾರಂಭಿಸಿದ ಮಲ್ಟಿ ಸೀಟರ್ ಕ್ಸೈಲೊ ಕಾರು ತಿಂಗಳಿಗೆ ಸುಮಾರು 500 ಘಟಕಗಳನ್ನು ಮಾರಾಟ ಮಾಡುತ್ತಿದ್ದು, ವೆರಿಟೊ (ರಿನಾಲ್ಡ್ಡ್ ರೆನಾಲ್ಟ್ ಲೋಗನ್) ನಾಲ್ಕು-ಬಾಗಿಲಿನ ಸೆಡನ್ ಆದರೆ ವಾಣಿಜ್ಯ ಖರೀದಿದಾರರಿಗೆ ಹೆಚ್ಚಾಗಿ ಸೇವೆ ಸಲ್ಲಿಸುತ್ತಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಬಿಎಸ್-VI ಮತ್ತು ಕ್ರ್ಯಾಶ್ ಸೇಫ್ಟಿ ನಿಯಮಗಳ ಅನುಸಾರವಾಗಿ ವಾಹನ ಉತ್ಪಾದಕರಿಗೆ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳ ಉಂಟಾಗುತ್ತದೆ ಹಾಗು ಕೆಲವೊಂದು ಉತ್ಪನ್ನಗಳನ್ನು ಸಮರ್ಥಿಸಲು ಕಷ್ಟವಾಗಬಹುದಾದ ಕಾರಣದಿಂದ ಅವುಗಳನ್ನು ಸ್ಥಗಿತಗೊಳಿಸಬೇಕಾಗಬಹುದು ಎನ್ನಲಾಗಿದೆ.

ಶೀಘ್ರವೇ ಕಣ್ಮರೆಯಾಗಲಿಗೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

ಮೊದಲಿಗೆ ಹೇಳಿದ ಹಾಗೆ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಆಲ್ಟೋ 800 ಕಾರುಗಳನ್ನು ಸ್ಥಗಿತಗೊಳಿಸಲಿದ್ದು, ಜೊತೆಗೆ ಟಾಟಾ ಮೋಟಾರ್ಸ್ ಕೂಡಾ ತಮ್ಮ ನಾನೊ ಮತ್ತು ಬೋಲ್ಟ್ ಕಾರುಗಳನ್ನು ಸ್ಥಗಿತಗೊಳಿಸಲಿದೆ.

Most Read Articles

Kannada
English summary
Two Mahindra models to be axed before 2020: MD Pawan Goenka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X