ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮೊದಲಿನಿಂದಲೂ ಹೆಚ್ಚು ಜನಪ್ರಿಯತೆಯನ್ನು ಪಡೆದು ಬಂದ ಸ್ಕಾರ್ಪಿಯೊ ಇದೀಗ ಹೊಸ ವೇರಿಯಂಟ್‍ನೊಂದಿಗೆ, ನವೀಕರಣ ಮತ್ತು ನಿನೂತನ ಫೀಚರ್‍‍ಗಳನ್ನು ಪಡೆದು ಬಿಡುಗಡೆಗೊಂಡಿದೆ. ಬಿಡುಗಡೆಗೊಂಡ ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಟಾಪ್ ಸ್ಪೆಕ್ ಮಾಡಲ್‍ ಅನ್ನು ಆಧರಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಕಾರು, ಟಾಪ್ ಸ್ಪೆಕ್ ಎಸ್11 ವೇರಿಯಂಟ್‍ನ ಕೆಳಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 13.99 ಲಕ್ಷಕ್ಕೆ ಮಾರಾಟದ ಬೆಲೆಯನ್ನು ನಿಗದಿ ಮಾಡಲಾಗಿದ್ದು, ದೇಶದಲ್ಲಿನ ಎಲ್ಲಾ ಅಧಿಕೃತ ಮಹೀಂದ್ರಾ ಡೀಲರ್‍‍ಗಳ ಬಳಿ ಖರೀದಿಗೆ ಲಭ್ಯವಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಹೊಸ ವೇರಿಯಂಟ್‍ನ ವಿನ್ಯಾಸ

ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಕಾರಿನಲ್ಲಿ ಹೊಸದಾಗಿ ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಎಲ್ಇಡಿ ಗೈಡ್ ಲೈಟ್ಸ್, ಹೈಡ್ರಾಲಿಕ್ ಅಸ್ಸಿಸ್ಟೆಡ್ ಬಾನೆಟ್, ಇಂಟೆಲ್ಲಿಪಾರ್ಕ್ ಮತ್ತು ಒಆರ್‍‍ವಿಎಂನೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳನ್ನು ನೀಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಇನ್ನು ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಕಾರಿನ ಒಳಭಾಗದಲ್ಲಿ 10 ವಿವಿಧ ಭಾಷೆಗಳಲ್ಲಿ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಂ ಹೊಂದಿರುವ 5.9 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವಾಯ್ಸ್ ಅಸ್ಸಿಸ್ಟ್ ಸಿಸ್ಟಂ, ಪೂರ್ಣ ಆಟೋಮ್ಯಾಟಿಕ್ ಟೆಂಪ್ರೇಚುರ್ ಕಂಟ್ರೋಲ್, ಮತ್ತು ಸ್ಟೀರಿಂಗ್ ವ್ಹೀಲ್‍ನಲ್ಲಿ ಆಡಿಯೊ ಹಾಗು ಕ್ರೂಸ್ ಕಂಟ್ರೋಲ್ ಅನ್ನು ಅಳವಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಕಾರು 2.2 ಲೀಟರ್ ಡೀಸೆಲ್ ಎಂಹಾವ್ಕ್ ಎಂಜಿನ್ ಸಹಾಯದಿಂಡ 140ಬಿಹೆಚ್‍ಪಿ ಮತ್ತು 320ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್-ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್, ಯಾಂಟಿ-ಥೆಫ್ಟ್ ವಾರ್ನಿಂಗ್, ಪ್ಯಾನಿಕ್-ಬ್ರೇಕ್ ಇಂಡಿಕೇಷನ್ ಮತ್ತು ಎಂಜಿನ್ ಇಮ್ಮೊಬಿಲೈಸರ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಹಾಗು ಜೊತೆಗೆ ಕ್ಯೂಶನ್ ಸಸ್ಪೆಂಷನ್ ಮತ್ತು ಆಂಟಿ-ರೋಲ್ ಟೆಕ್ನಾಲಜಿಯನ್ನು ಸಹ ಪಡೆದುಕೊಂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಸ್ಕಾರ್ಪಿಯೊ ದೇಶಿಯ ಮಾರುಕಟ್ಟೆಯಲ್ಲಿನ ಎಸ್‍ಯುವಿ ಮಾರಾಟದಲ್ಲಿ ಹೊಸ ಅಧ್ಯಾಯವನ್ನು ಹುಟ್ಟುಹಾಕಿತ್ತು. ಸ್ಕಾರ್ಪಿಯೊ ಕಾರಿನ ಹೊಸ ಎಸ್9 ವೇರಿಯಂಟ್ ಆಕರ್ಷಕ ಬೆಲೆಯಲ್ಲಿ ಬುಡುಗಡೆ ಮಾಡಲಾಗಿದ್ದು, ಗ್ರಾಹಕರಿಗೆ ಅನುಗುಣವಾಗಿ ಹೆಚ್ಚು ಸೌಕರ್ಯವನ್ನು ನೀಡಲಾಗಿದೆ. ಎಂದು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‍ನ ಚೀಪ್ ಸೇಲ್ಸ್ ಮತ್ತು ಮಾರ್ಕೆಟಿಂಗ್‍ನ ವೀಜಯ್ ರಾಮ್ ನಕ್ರಾ ಅವರು ಹೇಳಿಕೊಂಡಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಸ್ಕಾರ್ಪಿಯೊ ಎಸ್9 ವೇರಿಯಂಟ್ ಕಾರು ಗ್ರಾಹಕರಿಗೆ ಹೊಸ ಅನುಭವನ್ನು ನೀಡಲಾಗಿದ್ದು, ಟಾಪ್ ಸ್ಪೆಕ್ ವೇರಿಯಂಟ್‍ನಿಂದ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಮಹೀಂದ್ರಾ ಸ್ಕಾರ್ಪಿಯೊ ಕಾರು ಮಾರುಕಟ್ಟೆಯಲ್ಲಿ ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದು, ಸಂಸ್ಥೆಯು ಇದೇ ತಿಂಗಳ 24ರಂದು ಹೊಸ ಆಲ್ಟುರಾಸ್ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Mahindra Scorpio S9 Variant Launched In India; Priced At Rs 13.99 Lakh.
Story first published: Tuesday, November 13, 2018, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X