ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ದೇಶಾದ್ಯಂತ ಹೆಚ್ಚುತ್ತಿರುವ ತೈಲ ಬೆಲೆಗಳಿಂದಾಗಿ ವಾಹನ ಸವಾರರು ಮಾತ್ರವಲ್ಲದೇ ವಾಹನ ಮಾಲೀಕರು ಕೂಡಾ ಬಸವಳಿದು ಹೋಗಿದ್ದಾರೆ. ಕಾರಣ, ಹೆಚ್ಚುತ್ತಿರುವ ವಾಹನಗಳ ನಿರ್ವಹಣಾ ವೆಚ್ಚದಿಂದಾಗಿ ಲಾಭಾಂಶಗಳು ನೆಲಕಚ್ಚಿದ್ದು, ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳು ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ದೇಶದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ವಾಹನಗಳನ್ನು ಕಡಿಮೆಗೊಳಿಸಿ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ಸಂಬಂಧ ವಾಹನ ಉತ್ಪಾದನಾ ಸಂಸ್ಥೆಗಳು ಮಹತ್ವದ ಹೆಜ್ಜೆಯಿಸಿದ್ದು, ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಸಹ ನಗರದಲ್ಲಿ ಹೆಚ್ಚುತ್ತಿರುವ ಇಂಧನ ಬಳಕೆಗೆ ಕಡಿವಾಣ ಹಾಕಲು ವಿನೂತನ ಮಾದರಿಯ ಟ್ರಿಯೊ ಎನ್ನುವ ಮೂರು ಚಕ್ರದ ವಾಹನಗಳನ್ನು ಹೊರ ತರಲು ಸಜ್ಜುಗೊಳ್ಳುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಮಹೀಂದ್ರಾ ಸಂಸ್ಥೆಯು ಹೊಸ ಟ್ರಿಯೊ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕೂ ಮುನ್ನ ನಮ್ಮ ಬೆಂಗಳೂರು ನಗರದ ಬೊಮ್ಮನಹಳ್ಳಿ ಮತ್ತು ಹೊಸೂರು ರಸ್ತೆಗಳಲ್ಲಿ ಎಂಜಿನ್ ಕಾರ್ಯಕ್ಷಮೆತಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ಅನ್ನು ನಡೆಸುತ್ತಿರುವ ವೇಳೆ ಕಾಣಿಸಿಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಮಹೀಂದ್ರಾ ಸಂಸ್ಥೆಯು ಈಗಾಗಲೆ ಮಾರುಕಟ್ಟೆಯಲ್ಲಿ ಇ-ಆಲ್ಫಾ ಎಲೆಕ್ಟ್ರಿಕ್ ಆಟೋರಿಕ್ಷಾವನ್ನು ಮಾರಾಟ ಮಾಡುತ್ತಿದ್ದು, ಇದರ ಮುಂದುವರಿದ ಭಾಗವಾದ ಮಹೀಂಡ್ರಾ ಟ್ರಿಯೊ ವಾಹನಗಳು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಪದೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಬೆಂಗಳೂರು ನಗರದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ ವಾಹನದಲ್ಲಿ ಬ್ಯಾಟರಿಯನ್ನು ರಿಯರ್ ಆಕ್ಸೆಲ್ (ಬಂಡಿಯ ಅಚ್ಚು)ನಲ್ಲಿ ಅಳವಡಿಸಲಾಗಿದ್ದು, ಇ-ಆಲ್ಫಾ ವಾಹನದಲ್ಲಿ ಇದನ್ನು ಡ್ರೈವರ್‍ ಸೀಟ್‍‍ನ ಹಿಂಭಾಗದಲ್ಲಿ ಅಳವಡಿಸಿರುವುದನ್ನು ಕಾಣಬಹುದು.

ಮಹೀಂದ್ರಾ ಇ-ಆಲ್ಫಾ ಮಿನಿ ಆಟೋರಿಕ್ಷಾಗಳಾಲ್ಲಿ 120 ಎಹೆಚ್ ಲೀಥಿಯಂ ಇಯಾನ್ ಬ್ಯಾಟರಿಗಳನ್ನು ಬಳಸಲಾಗಿದ್ದು, ಟ್ರಿಯೋ ಎಲೆಕ್ಟ್ರಿಕ್ ವಾಹನಗಳಲ್ಲಿ ಇನ್ನು ಅಧಿಕ ಸಾಮರ್ಥ್ಯ ಇರುವ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಬ್ಯಾಟರಿಯನ್ನು ಸ್ವತಃ ನಮ್ಮ ಬೆಂಗಳೂರಿನಲ್ಲಿರುವ ಎಲೆಕ್ಟ್ರಿಕ್ ವಿಭಾಗದಲ್ಲಿ ತಯಾರು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಸಾಮಾನ್ಯ ಆಟೋ ರಿಕ್ಷಾಗಳಂತೆಯೇ ವಿನ್ಯಾಸ ಹೊಂದಿರುವ ಮಹೀಂದ್ರಾ ಹೊಸ ಮೂರು ಚಕ್ರದ ಎಲೆಕ್ಟಿಕ್ ವಾಹನವು ವಿಶ್ವದರ್ಜೆ ಲಿಥೀಯಂ ಅಯಾನ್ ಬ್ಯಾಟರಿ ಪ್ರೇರಣೆ ಹೊಂದಿದ್ದು, ಟ್ರಿಯೊ ಮತ್ತು ಟ್ರಿಯೊ ಯಾರಿ ಎನ್ನುವ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಟ್ರಿಯೊ ಮತ್ತು ಟ್ರಿಯೊ ಯಾರಿ ವೆರಿಯೆಂಟ್‌ಗಳು ಕ್ರಮವಾಗಿ 3 ಆಸನ, 4 ಆಸನದ ಸೌಲಭ್ಯ ಪಡೆದುಕೊಂಡಿದ್ದು, ಸಾಮಾನ್ಯ ಆಟೋ ರಿಕ್ಷಾಗಳ ನಿರ್ವಹಣೆಗಾಗಿ ಮಾಡಲಾಗುವ ಖರ್ಚುಗಳು ಟ್ರಿಯೊ ವಾಹನಗಳಲ್ಲಿ ಶೇ.50ರಷ್ಟು ಕಡಿತಗೊಳ್ಳಲಿವೆ ಎನ್ನಬಹುದು. ಈ ಮೂಲಕ ಇಂಧನಗಳ ಖರ್ಚು ತಗ್ಗುವುದಲ್ಲದೇ ಲಾಭಾಂಶ ಕೂಡಾ ಹೆಚ್ಚಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಇದಲ್ಲದೇ ತಂತ್ರಜ್ಞಾನ ಬಳಕೆಯೊಂದಿಗೆ ಸಮಯದ ಅಭಾವವನ್ನು ಕಡಿತಗೊಳಿಸಲು ಶ್ರಮಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಟೆಲಿಮ್ಯಾಟ್ರಿಕ್ಸ್ ಸೌಲಭ್ಯವನ್ನು ಬಳಕೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಟ್ರಿಯೊ ವಾಹನಗಳನ್ನು ಸಾಫ್ಟ್ ಟಾಪ್ ಮತ್ತು ಹಾರ್ಡ್ ಟಾಪ್ ವರ್ಷನ್‌ಗಳಲ್ಲಿ ಬಿಡುಗಡೆ ಮಾಡಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಮಾಹಿತಿಗಳ ಪ್ರಕಾರ ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋರಿಕ್ಷಾಗಳು ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದ್ದು, ಹೊಸ ವಾಹನದ ಖರೀದಿಯ ಬೆಲೆಯ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಲಿಲ್ಲ. ಈ ಆಟೋರಿಕ್ಷಾಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಬಜಾಜ್ ಸಂಸ್ಥೆಯ ಆರ್‍ಇ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಪೈಪೋಟಿ ನೀಡಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

ಇದರೊಂದಿಗೆ ಸುರಕ್ಷತೆಗೆ ಮತ್ತು ಮೈಲೇಜ್‌ಗೆ ಹೆಚ್ಚಿನ ಒತ್ತು ನೀಡಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದ್ದು, ಮಾಲಿನ್ಯ ತಡೆ, ತೈಲ ಬಳಕೆಗೆ ಕಡಿವಾಣ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಹೊಸ ಪರಿಹಾರ ಮಾರ್ಗವಾಗಲಿದೆ.

Source: RushLane

Most Read Articles

Kannada
English summary
Mahindra Treo electric rickshaw spied ahead of launch.
Story first published: Wednesday, November 7, 2018, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X