ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍‍ಶಿಪ್ ಎಕ್ಸ್‌ಯುವಿ700 ಎಸ್‍‍ಯುವಿ ಕಾರನ್ನು ಪರಿಚಯಿಸಲಿದ್ದು, ಇದೀಗ ಸಂಸ್ಥೆಯು ತಮ್ಮ ಆನ್ಯುವಲ್ ಜೆನೆರಲ್ ಮೀಟಿಂಗ್‍‍ನಲ್ಲಿ ವೈ400 ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ.

By Rahul Ts

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍‍ಶಿಪ್ ಎಕ್ಸ್‌ಯುವಿ700 ಎಸ್‍‍ಯುವಿ ಕಾರನ್ನು ಪರಿಚಯಿಸಲಿದ್ದು, ಇದೀಗ ಸಂಸ್ಥೆಯು ತಮ್ಮ ಆನ್ಯುವಲ್ ಜೆನೆರಲ್ ಮೀಟಿಂಗ್‍‍ನಲ್ಲಿ ವೈ400 ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ. ಎಕ್ಸ್‌ಯುವಿ700 ಕಾರು ಈ ವರ್ಷದ ದೀಪಾವಳಿ ಹಬ್ಬದ ನಂತರ ಬಿಡುಗಡೆಗೊಳ್ಳಲಿದ್ದು, ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍‍ಯುವಿ ಕಾರು ಎಕ್ಸ್‌ಯುವಿ 500 ಕಾರಿನ ಮೇಲೆ ಸ್ಥಾನವನ್ನು ಪಡೆದುಕೊಂಡಿರಲಿದ್ದು, ಮತ್ತು ಇದು ಪೂರ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಸಂಸ್ಥೆಯ ಅತ್ಯಂತ ಖರೀದಾದ ಪ್ರೀಮಿಯಮ್ ಮತ್ತು ಹೈ ಎಂಡ್ ಮಾಡಲ್ ಆಗಿ ಸ್ಥಾನವನ್ನು ಪಡೆಯಲಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಸಂಸ್ಥೆಯು ಎಕ್ಸ್‌ಯುವಿ700 ಎಸ್‍‍ಯುವಿ ಕಾರಿನ ಜೊತೆಗೆ ಇನ್ನೆರಡು ಹೊಸ ಮಾಡಲ್ ಕಾರುಗಳನ್ನು ಕೂಡಾ ಪರಿಚಯಿಸುವ ತವಕದಲ್ಲಿದೆ. ಎಸ್201 ಹೆಸರಿನಲ್ಲಿ ರೂಪಿಸಲಾದ ಕಂಪ್ಯಾಕ್ಟ್ ಎಸ್‍ಯುವಿ ನೂತನವಾಗಿ ಆವಿಷ್ಕರಿಸಲಾದ ಮರಾಜೊ ಎಮ್‍ಪಿವಿ. ಈ ಮೂರು ಮಾಡಲ್‍‍ಗಳನ್ನು ಕೂಡಾ 2018ರೊಳಗೆಯೆ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಹೊಸ ಎಕ್ಸ್‌ಯುವಿ700 ಎಸ್‍‍ಯುವಿ ಕಾರು ತಾಂತ್ರಿಕವಾಗಿ 2.2 ಲೀಟರ್ ಕೆಪಾಸಿಟಿಯ ಟರ್ಬೋಚಾರ್ಜ್ಡ್ ಬಳಸಲಾಗಿದೆ. 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ಜೋಡಣೆಯಲ್ಲಿ 180ಬಿಹೆಚ್‍‍ಪಿ ಮತ್ತು 420ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ. ಅಲ್ಲದೇ ಇದರಲ್ಲಿ 4 ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಕೂಡಾ ಪರಿಚಯಿಸುವ ಅವಕಾಶಗಳಿವೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಎಕ್ಸ್‌ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಫ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಪ್ರಯಾಣಿಕರ ಸುರಕ್ಷತೆಗಾಗಿ ಮಹೀಂದ್ರಾ ಎಕ್ಸ್‌ಯುವಿ700 ಕಾರಿನಲ್ಲಿ 9 ಏರ್‍‍ಬ್ಯಾಗ್ಸ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

7 ಸೀಟರ್ ಎಸ್‍‍ಯುವಿ ಆಕಾರಾದ ಎಕ್ಸ್‌ಯುವಿ700 ಮೂರು ಸಾಲಿನ ಸೀಟಿಂಗ್ ಲೇಔಟ್ ಅನ್ನು ಪಡೆದುಕೊಂಡಿರಲಿದ್ದು, ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಇಸುಜು ಎಮ್‍‍ಯು-ಎಕ್ಸ್ ಎಂಬ ಕಾರುಗಳಿಗೆ ಪೈಪೋಟಿ ನೀಡಲಿದೆ.

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಕ್ಸ್‌ಯುವಿ700 ಕಾರನ್ನು ಪ್ರದರ್ಶಿಸಿದ ಮಹೀಂದ್ರಾ..

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on mahindra new car suv
English summary
Mahindra XUV700 showcased at AGM today as Y400.
Story first published: Wednesday, August 8, 2018, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X