ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಡಿಜಿಟಲ್ ಯುಗದಲ್ಲಿ ಅನುಕೂಲತೆಗಳಿಗೆ ಹೊಸ ಹೊಸ ಆವಿಷ್ಕಾರಗಳು ನಡೆಯುತಿದ್ದು, ನ್ಯಾವಿಗೇಶನ್, ಟ್ರಾಕಿಂಗ್ ಮತ್ತು ಅನಾಲಿಟಿಕ್ಸ್ ವೈಶಿಷ್ಟ್ಯಗಳನ್ನು ಪಡೆದಂತಹ ಹೊಸ ಮ್ಯಾಪ್‍ಮೈಇಂಡಿಯಾ ಆಪ್ ಒಂದು ಬಿಡುಗಡೆಯಾಗಿದೆ.

By Rahul Ts

ಡಿಜಿಟಲ್ ಯುಗದಲ್ಲಿ ಅನುಕೂಲತೆಗಳಿಗೆ ಹೊಸ ಹೊಸ ಆವಿಷ್ಕಾರಗಳು ನಡೆಯುತಿದ್ದು, ನ್ಯಾವಿಗೇಶನ್, ಟ್ರಾಕಿಂಗ್ ಮತ್ತು ಅನಾಲಿಟಿಕ್ಸ್ ವೈಶಿಷ್ಟ್ಯಗಳನ್ನು ಪಡೆದಂತಹ ಹೊಸ ಮ್ಯಾಪ್‍ಮೈಇಂಡಿಯಾ ಆಪ್ ಒಂದು ಬಿಡುಗಡೆಯಾಗಿದ್ದು, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‍‍ಗಳಿಗೆ ಸಪೋರ್ಟ್ ಆಗಲಿದ್ದು, ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‍‍ನಲ್ಲಿ ಲಭ್ಯವಿದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಈ ಹೊಸ ಆಪ್ ಇಸ್ರೋವಿನ ಭುವನ್ ಜಿಯೊ-ಪೋರ್ಟಲ್ ಸಹಾಯದಿಂದ ಮ್ಯಾಪ್ ವೀಕ್ಷಣೆಯನ್ನು ತೋರಿಸಲಿದ್ದು, ಜೊತೆಗೆ ಭಾರತದಲ್ಲಿರುವ 350ಕ್ಕೂ ಹೆಚ್ಚು ನಗರಗಳ 1ಎಂ ರೆಸ್ಯೂಲುಷನ್ ಸಾಟಿಲೈಟ್ ಡೆಟಾ ಮತ್ತು ಬೇರೆ ಪ್ರಾಂತ್ಯಗಳನ್ನು 2.5ಎಂ ರೆಸ್ಯೂಲುಷನ್‍‌ನಲ್ಲಿ ತೋರಿಸಲಿದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಈ ಹೊಸ ಆಪ್ ನಿಮ್ಮ ಮೊಬೈಲ್ ಅಥವಾ ಟ್ಯಾಬ್‍‍ನಲ್ಲಿ ಇನ್ಸ್ಟಾಲ್ ಮಾಡಿ ಓಪೆನ್ ಮಾಡಿದ ನಂತರ, ಸೈನ್ ಅಪ್ ಆಗಲು ಅಲ್ಲಿ ಕೇಳಿದ ವಿವರಗಳನ್ನು ನೀಡಿ ಅಥವಾ ನಿಮ್ಮ ಫೇಸ್‍‍ಬುಕ್ ಖಾತೆಯ ಸಹಾಯದಿಂದ ಲಾಗಿನ್ ಆಗಬಹುದು.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಇನ್ನು ಮ್ಯಾಪ್‍‍ನಲ್ಲಿ ಲೋಕೆಷನ್ ಹುಡುಕಲು MapmyIndia ನ ರಾಷ್ಟ್ರ ವ್ಯಾಪ್ತಿ ಡಿಜಿಟಲ್ ವಿಳಾಸ ವ್ಯವಸ್ಥೆಯು ಪ್ರತಿ ಪ್ರದೇಶಕ್ಕೆ ಆರು ಅಕ್ಷರಗಳ ಡಿಜಿಟಲ್ ವಿಳಾಸವನ್ನು ಒದಗಿಸುತ್ತದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಅಡ್ರೆಸ್ ಹುಡುಕಲು ಆಪ್ ಬಳಕೆದಾರರು ಡಿಟಿಟಲ್ ಅಡ್ರಸ್‍‍ ಅನ್ನು ಸರ್ಚ್ ವಿಂಡೋನಲ್ಲಿ ಟೈಪ್ ಮಾಡಬೇಕು, ಇದಲ್ಲದೆ ಈ ಆಪ್ ವಾಯ್ಸ್ ಗೈಡೆಡ್ ಡೈರೆಕ್ಷನ್, ಟ್ರಾಫಿಕ್ ಮಾಹಿತಿ, ತಲುಪುವ ಸಮಯ ಮತ್ತು ಲೈವ್. ಟ್ರಾಫಿಕ್ ಅಪ್ಡೇಟ್ ಜೊತೆಗೆ ಇನ್ನು ಹಲವು ಆಯ್ಕೆಗಳನ್ನು ನೀಡಲಿದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಇನ್ನು ಗೂಗಲ್ ಮ್ಯಾಪ್‍‍ನಲ್ಲಿ ಹೊಸಗಾಗಿ ಕಂಡುಬಂತಹ ಲೊಕೇಶನ್ ಶೇರಿಂಗ್ ಆಯ್ಕೆಯನ್ನು ಸಹ ಈ ಆಪ್ ಪಡೆದಿದ್ದು, ಇದರ ಅಪ್ಲಿಕೇಷನ್‍‍ನ್ನ ಸುರಕ್ಷಿತ ಲೈವ್ ಸ್ಥಳ ವೈಶಿಷ್ಟ್ಯವು ನಿಮ್ಮ ಸ್ಥಾನವನ್ನು ನಿಯತಕಾಲಿಕವಾಗಿ ಸೆಟ್ ಅವಧಿಯವರೆಗೆ ನವೀಕರಿಸುತ್ತದೆ ನಂತರ ಲಿಂಕ್ ಕೊನೆಗೊಳ್ಳುತ್ತದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಇದಲ್ಲದೇ ಈ ಆಪ್ ಮೊಬೈಲ್ ಟ್ರಾಕಿಂಗ್ ಡಿವೈಸ್ ಆಗಿ ಕೂಡ ಕೆಲ ಮಾಡುತ್ತಲ್ಲದೇ ಇದರಲ್ಲಿನ 'ವರ್ಲ್ಡ್ ವ್ಯೂ' ಮತ್ತೊಂದು ಆಯ್ಕೆಯಾಗಿದೆ. ಅಲ್ಲಿ ಬಳಕೆದಾರರು ನಿರ್ದಿಷ್ಟ ಸ್ಥಳದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದ್ದು, ವರ್ಲ್ಡ್ ವ್ಯೂ ರೇಟಿಂಗ್ಗಳು, ವಿಮರ್ಶೆಗಳು, ಚೆಕ್-ಇನ್ ಮತ್ತು ನಿರ್ದಿಷ್ಟ ಪ್ರದೇಶದ ಪ್ರವಾಸಿಗರಿಗೆ ಆಂತರಿಕ ಸಲಹೆಗಳಂತಹ ಮಾಹಿತಿಯನ್ನು ಒದಗಿಸುತ್ತದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ನಿಮ್ಮ ಸಮೀಪದಲ್ಲಿರುವ ಮೆಟ್ರೋ ನಿಲ್ದಾಣಗಳು, ಸಾರ್ವಜನಿಕ ಶೌಚಾಲಯ, ಪಾರ್ಕಿಂಗ್ ನಿಲ್ದಾಣ ಮತ್ತು ಫ್ಯುಯಲ್ ಸ್ಟೇಷನ್ (ಪೆಟ್ರೋಲ್ ಅಥಾವ ಎಲೆಕ್ಟ್ರಿಕ್ ಚಾರ್ಜ್) ಗಳ ವಿವರವನ್ನು ಸಹ ತೋರಿಸಲಿದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಮಾರ್ಗ, ದೂರ ಮತ್ತು ಕಾಲಾವಧಿಯನ್ನು ತಿಳಿಯಲು ಬಯಸುವ ಸೈಕ್ಲಿಷ್ಟಗಳು ಅಥವಾ ಓಟಗಾರರಿಗೆ ಉಪಯುಕ್ತವಾಗಿರುವ ಬಳಕೆದಾರನ ಇತಿಹಾಸದ ವಿವರವಾದ ಟೈಮ್ಲೈನ್ ಅನ್ನು ಮ್ಯಾಪ್ ಅಪ್ಲಿಕೇಶನ್ ಸಂಗ್ರಹಿಸುತ್ತದೆ.

ಬಂತು ಹೊಸ ನ್ಯಾವಿಗೇಷನ್ ಆಪ್- ಇದರ ಸ್ಪೆಷಲ್ ಏನು ಗೊತ್ತಾ?

ಕೊನೆಯದಾಗಿ ಆಪ್ ಬಳಕೆದಾರರು ರೂಟ್ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾಗಿದ್ದು, ಆಪ್‍ನಲ್ಲಿ ಯಾವುದೇ ರೀತಿಯ ಲೋಪದೋಶಗಳು ಕಂಡುಬಂದಲ್ಲಿ ರಿಪೋರ್ಟ್ ಕೂಡಾ ಮಾಡಬಹುದಾಗಿದೆ.

Most Read Articles

Kannada
Read more on auto news technology
English summary
MapmyIndia Map App Launched In India: Built-in Navigation, Tracking And Locations Analytics.
Story first published: Monday, March 5, 2018, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X