ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಕಾರುಗಳು ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಕಾರುಗಳು ಕಳೆದ ಫೆಬ್ರವರಿ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿದ್ದು, ಮಾರಾಟದಲ್ಲಿ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ ಕಾರ್ ಆಲ್ಟೋ ಮಾದರಿಗಳನ್ನೇ ಹಿಂದಿಕ್ಕಿದೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಮೂರನೇ ತಲೆಮಾರಿನ ಡಿಜೈರ್ 2017ರಲ್ಲಿ ಬಿಡುಗಡೆಗೊಂಡಿದ್ದು, ಕಳೆದ ವರ್ಷದ ಫೆಬ್ರವರಿ ತಿಂಗಳಿಗಿಂತ ಈ ಬಾರಿ ಶೇಕಡಾ 26 ರಷ್ಟು ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ. 2017 ಫೆಬ್ರವರಿ ತಿಂಗಳಿನಲ್ಲಿ 16,613 ಯೂನಿಟ್ ಮಾರಾಟವಾಗಿದ್ದ ಡಿಜೈರ್ ಕಾರುಗಳು 2018 ಫೆಬ್ರವರಿ ತಿಂಗಳಿನಲ್ಲಿ ಬರೊಬ್ಬರಿ 20,941 ಯೂನಿಟ್ ಕಾರುಗಳನ್ನು ಮಾರಾಟಗೊಂಡಿವೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಈ ಹಿಂದಿನಿಂದಲೇ ಮಾರಾಟದಲ್ಲಿ ಆಲ್ಟೋ ಕಾರು ಪ್ರಥಮ ಸ್ಥಾನವನ್ನು ಪಡೆದಿತ್ತು. ಆದ್ರೆ ಈ ಬಾರಿ ಕೇವಲ ಶೇಕಡಾ ಒಂದರಷ್ಟು ಮಾರಾಟವನ್ನು ಹೆಚ್ಚಿಸಿ ತನ್ನ ಪ್ರಥಮ ಸ್ಥಾನವನ್ನು ಕಳೆದುಕೊಂಡಿದೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸಂಸ್ಥೆಯ ಹ್ಯಾಚ್‍ಬ್ಯಾಕ್ ಕಾರು ಸ್ವಿಫ್ಟ್ ಕೂಡಾ 17,291 ಯೂನಿಟ್‍ಗಳನ್ನು ಮಾರಾಟಗೊಳಿಸಿ, ಶೇಕಡಾ 40ರಷ್ಟು ಅಧಿಕ ಮಾರಾಟಗೊಂಡು ಟಾಪ್ 10ರಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಮೂರನೇ ತಲೆಮಾರಿನ ಡಿಜೈರ್ ಕಾರು ಎಕ್ಸ್ ಶೋರಂ ಪ್ರಕಾರ ರೂ. 5.5 ಲಕ್ಷದ ಆರಂಭಿಕ ಬೆಲೆಯನ್ನು ಪಡೆದಿದ್ದು, ಹಿಂದಿನ ವರ್ಷನ್ ಕಾರಿಗಿಂತ ದೊಡ್ಡ ಪ್ರಮಾಣದಲ್ಲಿ ಸುಧಾರಣೆಗಳು ಮತ್ತು ನವೀಕರಣಗಳನ್ನು ಪಡೆದುಕೊಂಡಿವೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಎಂಜಿನ್ ಸಾಮರ್ಥ್ಯ

ಮಾರುತಿ ಸ್ವಿಫ್ಟ್ ಡಿಜೈರ್‌ ಕಾರುಗಳು 1.2-ಲೀಟರ್ ಕೆ ಸಿರೀಸ್ ಎಂಜಿನ್ ಎಂಜಿನ್ ಹೊಂದಿದ್ದು, 89-ಬಿಹೆಚ್‍ಪಿ ಮತ್ತು 114-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುತ್ತವೆ. ಇನ್ನು 1.3 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 74-ಬಿಹೆಚ್‍ಪಿ ಮತ್ತು 190-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಅಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತಿದ್ದು, ಕಾರು ಚಾಲನೆಯಲ್ಲಿ ಹೊಸ ಚಾಲನಾ ಅನುಭೂತಿ ನೀಡಲಿವೆ.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಹೊಸ ಡಿಜೈರ್ ಕಾರುಗಳು ಹಾರ್ಟ್‍ಟೆಕ್ಟ್ ಪ್ಲಾಟ್‍ಫಾರ್ಮ್ ನ ಕಾರಾಗಿದ್ದು, ಇದು ಕಾರಿನ ತೂಕವನ್ನು ಮಿತಗೊಳಿಸಿ, ಫ್ಯುಯಲ್ ದಕ್ಷತೆಯನ್ನು ಉತ್ತಮಗೊಳಿಸುವಲ್ಲಿ ಸಹಾಕಾರಿಯಾಗಿವೆ ಎನ್ನಬಹುದು.

ಮಾರಾಟದಲ್ಲಿ ಆಲ್ಟೋ ಕಾರನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಡಿಜೈರ್

ಇದಲ್ಲದೇ ಡಿಜೈರ್ ಕಾರು ಟ್ವಿನ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಸಿಸ್ಟಂ ಅನ್ನು ಕಾರಿನ ಎಲ್ಲಾ ಆವೃತ್ತಿಗಳಲ್ಲಿ ಬಳಸಲಾಗಿದ್ದು, ಹಿಂದಿನ ವರ್ಷನ್ ಕಾರಿಗೆ ಹೋಲಿಸಿದರೆ ವಿನೂತನ ಮತ್ತು ಐಷಾರಾಮಿ ಒಳವಿನ್ಯಾಸವನ್ನು ಪಡೆದುಕೊಂಡಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

1. ಬಿಡುಗಡೆಯಾಗಲಿರುವ ಮಾರುತಿ ಡಿಜೈರ್ ಟೂರ್ ಎಸ್ ಸಿಎನ್‍ಜಿ ಕಾರಿನ ಬೆಲೆ ಎಷ್ಟು ಗೊತ್ತಾ?

2. ಭಾರತದಲ್ಲಿ ದೊರೆಯುವ ಬೆಸ್ಟ್ ಬೈಕ್ ಆಕ್ಸೆಸರಿಗಳಿವು..

3. 100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

4. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

Most Read Articles

Kannada
Read more on swift
English summary
Maruti Dzire Tops Sales Chart Three Months In A Row.
Story first published: Thursday, March 22, 2018, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X