ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಕಾರು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್ ಕಾರು ಮಾರಾಟ ತುಸು ಹಿನ್ನೆಡೆ ಅನುಭವಿಸಿದಂತೆ ಕಾಣುತ್ತದೆ. ಇದೇ ಕಾರಣಕ್ಕೆ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಇನ್ಮುಂದೆ ಇಗ್ನಿಸ್ ಡಿಸೇಲ್ ವರ್ಷನ್‌ಗಳನ್ನು ಉತ್ಪಾದನೆ ಮಾಡುವುದಿಲ್ಲ ಎಂದಿದೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್ ಪೆಟ್ರೋಲ್ ವರ್ಷನ್ ಕಾರುಗಳ ಉತ್ಪಾದನೆಯನ್ನು ಮುಂದುವರಿಸಲಿದ್ದು, ಬೇಡಿಕೆಯಲ್ಲಿ ಹಿನ್ನೆಡೆ ಅನುಭವಿಸಿರುವ ಡಿಸೇಲ್ ವರ್ಷನ್‌ಗಳನ್ನು ಮಾತ್ರ ಉತ್ಪಾದನೆಯಿಂದ ಮಾತ್ರ ಹಿಂದೆ ಸರಿಯಲಾಗಿದೆ ಎಂದಿದೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾರಾಟಗೊಂಡ ಇಗ್ನಿಸ್ ಕಾರುಗಳಲ್ಲಿ ಶೇ.10ರಷ್ಟು ಡಿಸೇಲ್ ವರ್ಷನ್‌ಗಳು ಮಾರಾಟವಾಗಿದ್ದು, ಇನ್ನುಳಿದ ಶೇ.90ರಷ್ಟು ಇಗ್ನಿಸ್ ಕಾರುಗಳು ಪೆಟ್ರೋಲ್ ವರ್ಷನ್‌ನಲ್ಲಿ ಮಾರಾಟಗೊಂಡಿವೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಇಗ್ನಿಸ್ ಖರೀದಿ ಮಾಡುವ ಬಹುತೇಕ ಗ್ರಾಹಕರು ಪೆಟ್ರೋಲ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಉತ್ತಮ ಮೈಲೇಜ್ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ಪೆಟ್ರೋಲ್ ಮಾದರಿಗಳ ಮೇಲೆ ಒಲವು ತೊರುತ್ತಿರುವುದೇ ಪೆಟ್ರೋಲ್ ಕಾರುಗಳಿಗೆ ಉತ್ತಮ ಬೇಡಿಕೆ ಬಂದಿದೆ ಎನ್ನಬಹುದು.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಡಿಸೇಲ್ ಎಂಜಿನ್ ಹೊಂದಿರುವ ಇಗ್ನಿಸ್ ಕಾರುಗಳು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಸೌಲಭ್ಯದೊಂದಿಗೆ ಖರೀದಿಸಬಹುದಾಗಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳಿಂದಾಗಿ ಖರೀದಿಗೆ ಯೋಗ್ಯವಾದ ಮಾದರಿಯಾಗಿದೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಡ್ಯುಯಲ್ ಏರ್‌ಬ್ಯಾಗ್, 15-ಇಂಚಿನ ಅಲಾಯ್ ಚಕ್ರಗಳು, ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ನೆಕ್ಸಾ ಸೆಫ್ಟಿ ಶಿಲ್ಡ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಿರರ್ ಲಿಂಕ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ವ್ಯವಸ್ಥೆಯು ಇದರಲ್ಲಿದೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

2017ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಇದುವರೆಗೆ ಪೆಟ್ರೋಲ್ ಕಾರುಗಳಿಗೆಯೇ ಹೆಚ್ಚಿನ ಗ್ರಾಹಕರು ಬೇಡಿಕೆ ದಾಖಲಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿರುವ ಮಾರುತಿ ಸುಜುಕಿ ಸಂಸ್ಥೆಯು ಡಿಸೇಲ್ ವರ್ಷನ್‌ಗಳನ್ನು ಬಿಟ್ಟು ಪೆಟ್ರೋಲ್ ಕಾರುಗಳ ಮೇಲಷ್ಟೇ ಹೆಚ್ಚಿನ ಗಮನಹರಿಸಲು ಮುಂದಾಗಿದೆ.

ಇಗ್ನಿಸ್ ಡಿಸೇಲ್ ವರ್ಷನ್‌ಗೆ ಮಾರುತಿ ಸುಜುಕಿ ಗುಡ್ ಬೈ

ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಹೊಂದಿರುವ ಇಗ್ನಿಸ್ ಕಾರುಗಳು ಎಕ್ಸ್‌ಶೋರಂ ಪ್ರಕಾರ 4.66 ಲಕ್ಷದಿಂದ ಆರಂಭಿಕ ಬೆಲೆ ಹೊಂದಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡೈ ಐ10 ಮತ್ತು ಮಹೀಂದ್ರಾ ಕೆಯುವಿ100 ಕಾರುಗಳಿಗೆ ತ್ರೀವ ಪೈಪೋಟಿ ನೀಡುತ್ತಿದೆ.

Most Read Articles

Kannada
Read more on maruti suzuki hatchback
English summary
Maruti Ignis Diesel Version Discontinued In India.
Story first published: Wednesday, June 13, 2018, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X