Just In
- 17 min ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 31 min ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 57 min ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- News ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್-ಕ್ರಾಸ್ ಎಸ್ಯುವಿ ಕಾರಿನ ಬೆಲೆಯನ್ನು ಏರಿಸಿದ ಮಾರುತಿ ಸುಜುಕಿ..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ತಮ್ಮ ಎಸ್-ಕ್ರಾಸ್ ಕಾರಿನ ಮೇಲೆ ಬೆಲೆಯನ್ನು ಏರಿಸಲಾಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯತಗಳನ್ನು ಅಳವಡಿಸಲಾಗಿದೆ. ಬೆಲೆ ಏರಿಕೆಯ ನಂತರ ಮಾರಿತು ಸುಜುಕಿ ಎಸ್-ಕ್ರಾಸ್ ಕಾರಿನ ಬೆಲೆಯು ದೆಹಲಿಯ ಎಕ್
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ತಮ್ಮ ಎಸ್-ಕ್ರಾಸ್ ಕಾರಿನ ಮೇಲೆ ಬೆಲೆಯನ್ನು ಏರಿಸಲಾಗಿದ್ದು, ಈ ಬಾರಿ ಹೊಸ ವೈಶಿಷ್ಟ್ಯತಗಳನ್ನು ಅಳವಡಿಸಲಾಗಿದೆ. ಬೆಲೆ ಏರಿಕೆಯ ನಂತರ ಮಾರಿತು ಸುಜುಕಿ ಎಸ್-ಕ್ರಾಸ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.85 ಲಕ್ಷದಿಂದ ಪ್ರಾರಂಭಗೊಳ್ಳಲಿದೆ.
Variant | Old Price | New Price |
Sigma | Rs 8.61 lakh | Rs 8.85 lakh |
Delta | Rs 9.42 lakh | Rs 9.97 lakh |
Zeta | Rs 9.98 lakh | Rs 10.45 lakh |
Alpha | Rs 11.32 lakh | Rs 11.45 lakh |
ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್ ಲಿಫ್ಟ್ ಕಾರು, ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವಿವಿಧ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ ಹಾಗು ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಈ ಕಾರಿನ ಮಾರಾಟವಾಗಲಿದೆ.
ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು ಹೊಸದಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಜೊತೆಗೆ ಡ್ಯುಯಲ್ ಫ್ರಂಟ್ ಏರ್ಭ್ಯಾಗ್ಸ್, ಎಬಿಡಿನೊಂದಿಗೆ ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂತ್ಸ್ ಮತ್ತು ಸೀಟ್ ಬೆಲ್ಟ್ ಟೆಂಷನರ್ಗಳನ್ನು ಪಡೆದುಕೊಳ್ಳಲಿದೆ.
ಇನ್ನು ಎಸ್-ಕ್ರಾಸ್ ಕಾರಿನ ಮಿಡ್ ಸ್ಪೆಕ್ ಡೆಲ್ಟಾ ಕಾರಿನಲ್ಲಿ ಹೆಚ್ಚುವರಿಯಾಗಿ ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಿದ್ಯುತ್ನಿಂದ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ಒಆರ್ವಿಎಮ್ ಅನ್ನು ಒದಗಿಸಲಾಗಿದೆ.
ನವೀನ ಮಾದರಿಯ ಎಸ್-ಕ್ರಾಸ್ ಹೊಸ ರೀತಿಯ ತಂತುಕೋಶ, ಪ್ರೊಜೆಕ್ಟರ್ ಹೆಡ್ಲೈಟ್, ಪರಿಷ್ಕರಿಸಿದ ಬಂಪರ್ ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಕಾಣಬಹುದಾಗಿದೆ.
ಈ ಹೊಸ ಮಾರುತಿ ಸುಜುಕಿ ಸಂಸ್ಥೆಯ ಈ ಫೇಸ್ ಲಿಫ್ಟ್ ಕಾರು ಹೊಸ ಮಿಶ್ರಲೋಹದ ಚಕ್ರಗಳು, ಸಂಯೋಜಿತ ತಿರುವು ಸೂಚಕಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಓಆರ್ವಿಎಂಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಈ ಕಾರಿನ ವಿನ್ಯಾಸವು ಈ ಹಿಂದಿನ ಮಾದರಿಗಿಂತ ಹೆಚ್ಚು ವಿಶೇಷತೆಗಳನ್ನು ಪಡೆದುಕೊಂಡಿದೆ.
ಕಾರಿನ ಒಳಭಾಗವು ಹೆಚ್ಚು ಕ್ರೋಮ್ ಅಂಶಗಳ ಅಳವಡಿಕೆಯೊಂದಿಗೆ ಬರಲಿದ್ದು, ಕಾರಿನ ಡ್ಯಾಶ್ಬೋರ್ಡ್, ಸೀಟ್ಗಳು ಮತ್ತು ಉಪಕರಣಗಳು ಯಾವುದೇ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುವುದಿಲ್ಲ ಎನ್ನಬಹುದು.
ಇನ್ನು ಅಪ್ಡೇಟ್ಗೊಳಿಸಲಾದ ಈ ಪ್ರೀಮಿಯಂ ಕ್ರಾಸ್ಒವರ್ ಫೇಸ್ಲಿಫ್ಟ್ ಕಾರಿನಲ್ಲಿ ಹೊಸದಾಗಿ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕ ಇರುವಂತಹ ಇನ್ಫೋಟೈನ್ಮೆಂಟ್ ಪರದೆ ವ್ಯವಸ್ಥೆ ನೋಡಬಹುದು.
ಎಸ್-ಕ್ರಾಸ್ ಫೇಸ್ಲಿಫ್ಟ್ ಕಾರು 1.3-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಯಾಗಿದೆ. 5 ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಸ್ಟ್ಯಾಂಡರ್ಡ್ ಆಯ್ಕೆಯಾಗಿದೆ ಮತ್ತು ಸ್ವಯಂಚಾಲಿತ ರೂಪಾಂತರವನ್ನು ಈ ಕಾರಿನಲ್ಲಿ ನೀಡಲಾಗಿಲ್ಲ ಹಾಗು ಮಾರುತಿ ಸುಜುಕಿ 1.6 ಲೀಟರ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.
ಹೊಸ ಮಾರುತಿ ಎಸ್-ಕ್ರಾಸ್ ನೆಕ್ಸಾ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಕ್ಯಾಫೀನ್ ಬ್ರೌನ್, ಪ್ರೀಮಿಯಂ ಸಿಲ್ವರ್ ಮತ್ತು ಗ್ರಾನೈಟ್ ಗ್ರೇ ಎಂಬ ಐದು ಅದ್ಭುತ ಬಣ್ಣಗಳಲ್ಲಿ ಬಿಡುಗಡೆಯಾಗಿದೆ ಹಾಗು ಈ ಕಾರು ಹ್ಯುಂಡೈ ಕ್ರೆಟಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರುಗಳೊಂದಿಗೆ ಸ್ಪರ್ಧೆ ನೀಡಲಿದೆ.