ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ದೇಶಾದ್ಯಂತ ಸದ್ಯ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯ ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ವಾಹನ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ಮಾಲಿನ್ಯ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಈ ಬಗ್ಗೆ ಮಾಹಿತಿ ನೀಡಿರುವ ಮಾರುತಿ ಸುಜುಕಿ ಸಂಸ್ಥೆಯ ಅಧ್ಯಕ್ಷ ಆರ್‌ಸಿ ಭಾರ್ಗವ್ ಅವರು, ಮುಂದಿನ ನಾಲ್ಕು ತಿಂಗಳ ಕಾಲ ಬಿಎಸ್ 6 ವಾಹನಗಳ ಎಂಜಿನ್ ನಿರ್ಮಾಣದ ಕುರಿತು ಹೊಸ ಅಧ್ಯಯನಗಳನ್ನು ನಡೆಸಲಾಗುತ್ತಿದ್ದು, ಹೊಸ ಎಂಜಿನ್ ವೈಶಿಷ್ಟ್ಯತೆಯ ವಾಹನಗಳು 2020ರ ಆರಂಭದಿಂದಲೇ ಮಾರಾಟಕ್ಕೆ ಸಿದ್ದವಾಗಿರಲಿವೆ ಎಂದಿದ್ದಾರೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಹೊಸ ನಿಯಮ ಜಾರಿ ಉದ್ದೇಶ ಏನು?

ವಿಶ್ವಾದ್ಯಂತ ಈಗಾಗಲೇ ಪರಿಸರ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯಲಿವೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಯುರೋಪ್‌ನಲ್ಲಿ ಈ ಹಿಂದೆ 2016ರಿಂದಲೇ ಯುರೋ-6 ತಾಂತ್ರಿಕ ಅಂಶಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಇದು ಬಿಎಸ್-6 ವೈಶಿಷ್ಟ್ಯತೆಗೆ ಸರಿಸಮನಾಗಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣದಲ್ಲಿ ಪರಿಣಾಮಕಾರಿ ತಗ್ಗಿಸಲಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಹೀಗಿರುವಾಗ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದೀಗ ಸುಪ್ರೀಂಕೋರ್ಟ ಕೂಡಾ ಈ ಕುರಿತಂತೆ ಮಹತ್ವದ ಆದೇಶವನ್ನು ಹೊರಡಿಸಿರುವುದು ಕೇಂದ್ರ ಸರ್ಕಾರವು ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ.

MOST READ: ಕಿಸೆಯಲ್ಲಿ 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಈಗ 4 ಕೋಟಿ ಬೆಲೆಯ ಬೆಂಟ್ಲಿ ಒಡೆಯ

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಪ್ರಕಾರ, ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆಯಲು ಬಿಎಸ್-6 ತಾಂತ್ರಿಕ ಅಂಶಗಳ ಅಳವಡಿಕೆ ಅವಶ್ಯವಿದ್ದು, 2020ರ ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿಗೆ ಸಿದ್ದತೆ ಮಾಡಿಕೊಳ್ಳುವಂತೆ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಇದರಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಭಾರೀ ಗಾತ್ರದ ವಾಣಿಜ್ಯ ಬಳಕೆಯ ವಾಹನಗಳಿಗೆ ಕೆಲವು ವಿನಾಯ್ತಿ ನೀಡಲಾಗಿದ್ದು, 2020ರ ಏಪ್ರೀಲ್ 1ರ ಬದಲಾಗಿ 2020ರ ಸೆಪ್ಟೆಂಬರ್ 1ರಿಂದ ಭಾರೀ ಗಾತ್ರದ ಬಿಎಸ್-4 ವಾಹನಗಳಿಗೆ ಹೊಸ ನೀತಿ ಅನ್ವಯವಾಗಲಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಇದಕ್ಕೆ ಕಾರಣ, ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮಾರಾಟ ಪ್ರಕ್ರಿಯೆಯು ಪ್ರಯಾಣಿಕ ವಾಹನಗಳಿಂತ ಕಡಿಮೆ ಪ್ರಮಾಣದಿಂದಾಗಿ ಸುಪ್ರೀಂ ಡೆಡ್‌ಲೈನ್ ಒಳಗಾಗಿ ಸ್ಟಾಕ್ ಮಾರಾಟ ಸಾಧ್ಯವಾಗದು. ಇದರಿಂದ ಇಂತಹ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಹೆಚ್ಚುವರಿ ಅವಕಾಶ ನೀಡಲಾಗಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಆದ್ರೆ ಕಾರು ಉತ್ಪಾದನಾ ಸಂಸ್ಥೆಗಳಿಗೆ ಯಾವುದೇ ವಿನಾಯ್ತಿ ಇಲ್ಲದಿರುವುದರಿಂದ ಡೆಡ್‌ಲೈನ್‌ಗೂ ಮುನ್ನವೇ ಹೊಸ ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸಬೇಕಿದ್ದು, ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮೇಲೂ ಹೆಚ್ಚಿನ ಗಮನಹರಿಸಬೇಕಿದೆ.

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

ಬೆಲೆ ಏರಿಕೆಯ ಬಿಸಿ..!

ಹೌದು, ಬಿಎಸ್ 4 ವಾಹನಗಳಿಂತಲೂ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳ ಎಂಜಿನ್ ಮಾದರಿಯು ಹೆಚ್ಚಿನ ಗುಣಮಟ್ಟ ಪಡೆದುಕೊಂಡಿರಲಿದ್ದು, ಇದರಿಂದ ಸಹಜವಾಗಿಯೇ ಇದೀಗ ರೂ.5 ಲಕ್ಷಕ್ಕೆ ದೊರೆಯುತ್ತಿರುವ ಕಾರುಗಳು ಮುಂಬರುವ ದಿನಗಳಲ್ಲಿ ರೂ. 7 ಲಕ್ಷದಿಂದ ರೂ. 8 ಲಕ್ಷಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಎರ್ಟಿಗಾ ಕಾರಿನ ಚಿತ್ರಗಳು..!

Kannada
English summary
Maruti Suzuki BS-VI Update: Maruti Suzuki To Upgrade All Models To BS-VI Standards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X