ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ದೇಶಿಯ ಮಾರುಕಟ್ಟೆಯಲ್ಲಿನ ಪ್ಯಾಸೆಂಜರ್ ಕಾರುಗಳ ತಯಾರಿಕೆಯಲ್ಲಿ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಕಾರುಗಳಿಗೆ ಮತ್ತಷ್ಟು ಹೊಸತನ ನೀಡಲು ಮುಂದಾಗಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿನ ಪ್ಯಾಸೆಂಜರ್ ಕಾರುಗಳ ತಯಾರಿಕೆಯಲ್ಲಿ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಕಾರುಗಳಿಗೆ ಮತ್ತಷ್ಟು ಹೊಸತನ ನೀಡಲು ಮುಂದಾಗಿದ್ದು, ಆರಂಭಿಕ ಮಾದರಿ ಆಲ್ಟೋದಿಂದ ಸಿಯಾಜ್ ಕಾರುಗಳ ವರೆಗೂ ಮಹತ್ವದ ಬದಲಾವಣೆ ತರಲಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಸದ್ಯ ಮಾರುತಿ ಸುಜುಕಿ ಕಾರುಗಳಲ್ಲಿ ಸದ್ಯ ಲಭ್ಯವಿರುವ 5 ಸ್ಪೀಡ್ ಗೇರ್‍‍‍ಬಾಕ್ಸ್ ಆಯ್ಕೆಯನ್ನು ಹೆಚ್ಚಿಸಲು ಮುಂದಾಗಿದ್ದು, ಮುಂಬರುವ ಹೊಸ ಕಾರುಗಳಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಸಲು ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಮಾರುತಿ ಸುಜುಕಿ ಸಂಸ್ಥೆಯು ಹೊಸದಾಗಿ 6 ಸ್ಪೀಡ್ ಗೇರ್‍‍ಬಾಕ್ಸ್ ಪರಿಚಯಿಸುತ್ತಿದ್ದು, ಎಮ್ಎಫ್30 ಅಳವಡಿಕೆ ಮೂಲಕ ಕಾರಿನ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸಲಿದ್ದು, ಮೊದಲ ಹಂತವಾಗಿ ಸಿಫ್ಟ್ ಕಾರುಗಳಲ್ಲಿ ಈ ಯೋಜನೆಯನ್ನು ಜಾರಿಮಾಡಲಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್, ಮತ್ತು ಎಸ್-ಕ್ರಾಸ್ ಕಾರುಗಳಲ್ಲಿಯೂ ಕೂಡ ಮುಂಬರುವ ದಿನಗಳಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ ಎನ್ನಲಾಗಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಹೊಸ 6-ಸ್ಪೀಡ್ ಗೇರ್‍‍‍ಬಾಕ್ಸ್ ಎಂಜಿನ್‍ಗೆ ಒತ್ತು ನೀಡದೆ ಇಂಧನ ದಕ್ಷತೆಯನ್ನು ಸುಧಾರಿಸಲಿದ್ದು, ಆರಾಮದಾಯಕವಾದ ವೇಗವನ್ನು ನೀಡುವಲ್ಲಿ ನೆರವಾಗುತ್ತದೆ. ಉದಾಹರಣೆಗೆ ಗಂಟೆಗೆ 80ರಿಂದ 100ಕಿಲೋಮೀಟರ್ ಸ್ಪೀಡ್ ಚಲಾಯಿಸಲು ಐದನೇ ಗೇರ್‍‍ನಲ್ಲಿಯೇ ಚಲಾಯಿಸಬಹುದಾಗಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಈ ಹಿಂದೆ ಮಾರುತಿ ಸುಜುಕಿಯು ಮೊದಲಿಗೆ 6ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಮೊದಲನೆ ತಲೆಮಾರಿನ ಎಸ್-ಕ್ರಾಸ್ ಕಾರಿನಲ್ಲಿ ಅಳವಡಿಸಲಾಗಿತ್ತು, ಆದರೆ ಅದರ ಫೇಸ್‍ಲಿಫ್ಟ್ ಕಾರಿನ ಮುಖಾಂತರ 1.6 ಎಂಜಿನ್ ಮತ್ತು 6 ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಕೆಯನ್ನು ನಿಲ್ಲಿಸಲಾಗಿತ್ತು.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಗೊಂಡ ಎಲೈಟ್ ಐ20, ವೆರ್ನಾ, ಕ್ರೆಟಾ, ಮತ್ತು ಎಲಂತ್ರಾ ಕಾರುಗಳಲ್ಲಿ ಈಗಾಗಲೇ 6 ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಸಲಾಗುತ್ತಿದ್ದು, ಇದರಿಂದ ಮಾರುತಿ ಸುಜುಕಿ ಸಂಸ್ಥೆಯು ಕೂಡಾ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಈ ಕಾರ್ಯವನ್ನು ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಮತ್ತಷ್ಟು ಹೊಸ ವೈಶಿಷ್ಟ್ಯತೆಯೊಂದಿಗೆ ಬರಲಿವೆ ಮಾರುತಿ ಸುಜುಕಿ ಕಾರುಗಳು..

ಹ್ಯುಂಡೈ, ಟಾಟಾ ಮೋಟಾರ್ಸ್, ರೆನಾಲ್ಟ್ ಸಂಸ್ಥೆಗಳೂ ಈಗಾಗಲೇ ತಮ್ಮ ಕಾರುಗಳಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಕೆಯನ್ನು ಪ್ರಾಂಭಿಸಿದ್ದು, ಮಾರುತಿ ಸುಜುಕಿ ಸಂಸ್ಥೆಯು ಇದೀಗ 5 ಸ್ಪೀಡ್ ಗೇರ್‍‍ಬಾಕ್ಸ್ ಜೊತೆ ಜೊತೆಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅಳವಡಿಕೆಯನ್ನು ಸಹ ಪ್ರಾರಂಭಿಸಲಿದೆ.

Most Read Articles

Kannada
English summary
Maruti Suzuki Cars To Get New 6-Speed Gearbox.
Story first published: Tuesday, March 13, 2018, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X