ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ತನ್ನೆಲ್ಲಾ ಕಾರು ಮಾದರಿಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂಬರುವ ಜನವರಿ 1ರಿಂದಲೇ ಹೊಸ ದರ ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ಕಾರುಗಳ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರಿನ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು, ಜನವರಿ 1ರಿಂದ ಹೊಸ ದರ ಪಟ್ಟಿಯಂತೆ ಕಾರು ಬೆಲೆಗಳು ಅನ್ವಯವಾಗಿವೆ ಎಂದಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 10 ಸಾವಿರದಿಂದ 12 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 30 ಸಾವಿರದಿಂದ ರೂ. 40 ಸಾವಿರ ಬೆಲೆ ಏರಿಕೆಯಾಗಲಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಡಿಜೈರ್ ಟೂರ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಸ್ವಿಫ್ಟ್ ಬೆಲೆಯಲ್ಲಿ 20 ಸಾವಿರ, ವ್ಯಾಗನ್ ಆರ್, ಬಲೆನೊ, ಇಗ್ನಿಸ್, ಸೆಲೆರಿಯೊ ಬೆಲೆಗಳಲ್ಲಿ 15 ಸಾವಿರದಿಂದ 20 ಸಾವಿರ ಮತ್ತು ಸಿಯಾಜ್ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.25 ಸಾವಿರ ಹೆಚ್ಚಳವಾಗುವುದು ಖಚಿತವಾಗಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಇನ್ನು ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಎರ್ಟಿಗಾ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 4 ರಷ್ಟು ಹೆಚ್ಚಳವಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಮಾಡಲಾಗುತ್ತಿದ್ದು, ಮಾರುತಿ ಸುಜುಕಿ ಬೆಲೆ ಹೆಚ್ಚಳ ಮಾಡುವುದಕ್ಕೂ ಮುನ್ನ ಟೊಯೊಟಾ, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಈಗಾಗಲೇ ಪ್ರತಿಶತ 4ರಷ್ಟು ಬೆಲೆ ಹೆಚ್ಚಳ ಘೋಷಣೆ ಮಾಡಿವೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಹೊಸ ಎರ್ಟಿಗಾ ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್..!

ಗ್ರಾಹಕರ ನೀರಿಕ್ಷೆಗೂ ಮೀರಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಎರ್ಟಿಗಾ ಕಾರು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳಲ್ಲಿ ಎರ್ಟಿಗಾ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಆಸನ ವಿನ್ಯಾಸವನ್ನು ಈ ಬಾರಿ ತುಸು ವಿಸ್ತರಿಸಲಾಗಿದೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

MOST READ: ಬಿಡುಗಡೆಯಾಗಲಿರುವ ಹೊಸ ಆರ್‌ಎಕ್ಸ್100 ಬೈಕ್ ಹೇಗಿರಲಿವೆ ಗೊತ್ತಾ?

ಸದ್ಯದಲ್ಲೇ ಮಾರುತಿ ಸುಜುಕಿ ಕಾರುಗಳಲ್ಲಿ ಬೆಲೆಯಲ್ಲಿ ಭಾರೀ ಏರಿಕೆ ಖಚಿತ..!

ಒಟ್ಟಿನಲ್ಲಿ ಕಾರು ಮಾರಾಟದಲ್ಲಿ ಸದ್ಯ ಶೇ.51ರಷ್ಟು ಮಾರುಕಟ್ಟೆ ಪಾಲುನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಕಾರು ಬೆಲೆ ಹೆಚ್ಚಳ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿದ್ದು, ಇದು ಕಾರು ಮಾರಾಟದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Most Read Articles

Kannada
English summary
Maruti Suzuki To Increase Prices Of Entire Lineup — Fourth Brand To Announce Price Hike.
Story first published: Wednesday, December 5, 2018, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X