ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಬಿಡುಗಡೆಯಾಗುವ ಈ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ಭಾರತೀಯ ಕಾರು ಬ್ರಾಂಡ್ ಒಂದು ಲಗ್ಗೆಯಿಟ್ಟಿರುವುದು ಆಟೋ ಉದ್ಯಮದಲ್ಲಿ ಅಚ್ಚರಿ ತಂದಿದೆ.

By Praveen Sannamani

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಬಿಡುಗಡೆಯಾಗುವ ಈ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ಭಾರತೀಯ ಕಾರು ಬ್ರಾಂಡ್ ಒಂದು ಲಗ್ಗೆಯಿಟ್ಟಿರುವುದು ಆಟೋ ಉದ್ಯಮದಲ್ಲಿ ಅಚ್ಚರಿಗೆ ಕಾರಣವಾಗಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಸದ್ಯ ಜಗತ್ತಿನಾದ್ಯಂತ ನೂರಾರು ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಬಗೆಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ತಮ್ಮದೆ ಆದ ಗ್ರಾಹಕ ವರ್ಗವನ್ನು ಹೊಂದಿದ್ದು, ಇದರಲ್ಲಿ ಟಾಪ್ 10 ಕಾರು ಬ್ರಾಂಡ್‌ಗಳು ವಿಶ್ವದ ಶೇ.70ರಷ್ಟು ಆಟೋ ಉತ್ಪಾದನೆ ಮತ್ತು ಮಾರಾಟ ಪಾಲನ್ನು ತಮ್ಮದಾಗಿಸಿಕೊಂಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಕಾರಿನ ಗುಣಮಟ್ಟದ ವಿಚಾರವಾಗಿ ಬ್ರಾಂಡ್ ಝೆಡ್ ಎನ್ನುವ ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯ ಮೂಲಕ ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಟಾಪ್ 10ರ ಪಟ್ಟಿಯಲ್ಲಿ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಜಾಗತಿಕ ಮನ್ನಣೆ ಗಿಟ್ಟಿಸಿಕೊಂಡಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಕಳೆದ 15 ವರ್ಷಗಳಿಂದ ಬಿಡುಗಡೆಯಾಗುತ್ತಿರುವ ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯೇ ಮೊದಲ ಬಾರಿಗೆ ಆಯ್ಕೆಯಾದ ಸಂಸ್ಥೆಯಾಗಿದ್ದು, 6375 ಮಿಲಿಯನ್ ಡಾಲರ್‌ನಷ್ಟು ಬ್ರಾಂಡ್ ಮೌಲ್ಯವನ್ನು ಹೊಂದಿಯೆಂತೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಕೈಗೆಟುವಕ ದರದಲ್ಲಿ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಮಾಡುವ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸಂಸ್ಥೆಯು, ಭಾರತದಲ್ಲೂ ಸಹ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಬರೋಬ್ಬರಿ 6 ಕಾರು ಮಾದರಿಗಳು ಸ್ಥಾನ ಗಿಟ್ಟಿಸಿಕೊಂಡಿವೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್ ಡಿಜೈರ್, ಸ್ವಿಫ್ಟ್ ಹ್ಯಾಚ್‌ಬ್ಯಾಕ್, ವಿಟಾರಾ ಬ್ರೇಝಾ, ಬಲೆನೊ, ಎರ್ಟಿಗಾ ಕಾರುಗಳು ಅತಿಹೆಚ್ಚು ಮಾರಾಟವಾಗುತ್ತಿರುವ ಕಾರು ಮಾದರಿಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಜನಪ್ರಿಯತೆ ಮತ್ತು ಲಾಭಾಂಶದ ಆಧಾರ ಮೇಲೆ ಜಾಗತಿಕ ಬ್ರಾಂಡ್ ಮೌಲ್ಯವು ಕೂಡಾ ದ್ವಿಗುಣಗೊಳ್ಳುತ್ತಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಬ್ರಾಂಡ್ ಝೆಡ್ ಸಂಸ್ಥೆಯು ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ಜಪಾನ್ ಮೂಲದ ಆಟೋ ಸಂಸ್ಥೆಗಳು ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿದ್ದು, 29,987 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಟೊಯೊಟಾ ಸಂಸ್ಥೆಯು ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಹಾಗೆಯೇ ಮರ್ಸಿಡಿಸ್ ಬೆಂಝ್ ಸಂಸ್ಥೆಯು 25,684 ಮಿಲಿಯನ್ ಡಾಲರ್, ಬಿಎಂಡಬ್ಲ್ಯು 25,624 ಮಿಲಿಯನ್ ಡಾಲರ್, ಫೋರ್ಡ್ 12,742 ಮಿಲಿಯನ್ ಡಾಲರ್, ಹೋಂಡಾ 12,695 ಮಿಲಿಯನ್ ಡಾಲರ್, ನಿಸ್ಸಾನ್ 11,425 ಮಿಲಿಯನ್ ಡಾಲರ್, ಆಡಿ 9,630 ಮಿಲಿಯನ್ ಡಾಲರ್ ಮತ್ತು ಟೆಸ್ಲಾ 9,415 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯವನ್ನು ತಮ್ಮದಾಗಿಸಿಕೊಂಡಿವೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಇವುಗಳಲ್ಲಿ ಹೊಸದಾಗಿ ಮಾರುತಿ ಸುಜುಕಿ 6,375 ಮಿಲಿಯನ್ ಡಾಲರ್ ಮತ್ತು ಫೋರ್ಕ್ಸ್‌ವ್ಯಾಗನ್ 5,986 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಟಾಪ್ 10 ಪಟ್ಟಿಯಲ್ಲಿ ಮೊದಲ ಬಾರಿಗೆ ಲಗ್ಗೆಯಿಟ್ಟಿದ್ದು, ಇವುಗಳಲ್ಲಿ ಟೆಸ್ಲಾ ಮತ್ತು ಮಾರುತಿ ಸುಜುಕಿ ಅತಿ ವೇಗವಾಗಿ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳಾಗಿವೆ ಎಂಬುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ವಿಶ್ವದ ಅತ್ಯಮೂಲ್ಯ ಟಾಪ್ 10 ಕಾರ್ಸ್ ಬ್ರಾಂಡ್‌ ಪಟ್ಟಿ ಬಿಡುಗಡೆ...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮಾರುತಿ ಸುಜುಕಿ ಸಂಸ್ಥೆಯನ್ನು ಹೊರತುಪಡಿಸಿ ಟಾಪ್ 10ರ ಪಟ್ಟಿಯಲ್ಲಿರುವ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಸಹ ಐಷಾರಾಮಿ ಕಾರು ಮಾದರಿಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸುವುದರ ಮೂಲಕ ತಮ್ಮ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದರೇ, ಮಾರುತಿ ಸುಜುಕಿ ಮಾತ್ರ ಕೈಗೆಟುವ ಬೆಲೆಯ ಕಾರು ಮಾದರಿಗಳನ್ನು ಮಾರಾಟ ಮಾಡಿ ಜನಪ್ರಿಯತೆ ಸಾಧಿಸಿರುವುದು ಅಚ್ಚರಿ ತಂದಿದೆ ಎನ್ನಬಹುದು.

Most Read Articles

Kannada
Read more on top 10 maruti suzuki
English summary
Maruti Suzuki Is World’s Ninth Most Valuable Brand; First Indian Car Brand In Global Rankings.
Story first published: Friday, June 1, 2018, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X