ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಸ್ವಿಫ್ಟ್ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲಿಂಗ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸ್ವಿಫ್ಟ್ ಸ್ಪೋರ್ಟ್ ವರ್ಷನ್ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡುವ ಸನಿಹದಲ್ಲಿದೆ.

By Praveen Sannamani

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲಿಂಗ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸ್ವಿಫ್ಟ್ ಸ್ಪೋರ್ಟ್ ವರ್ಷನ್ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡುವ ಸನಿಹದಲ್ಲಿದೆ. ಹೀಗಿರುವುವಾಗಲೇ ಜನಪ್ರಿಯ ಮಾಡಿಫೈ ಸಂಸ್ಥೆಗಳು ಸಾಮಾನ್ಯ ಸ್ವಿಫ್ಟ್ ಕಾರುಗಳನ್ನೇ ಸ್ಪೋರ್ಟಿ ವರ್ಷನ್‌ಗಳಾಗಿ ಅಭಿವೃದ್ಧಿ ಮಾಡುತ್ತಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಿ ಮಾರುಕಟ್ಟೆಗಳಿಗೂ ಲಗ್ಗೆಯಿಡುವ ಸುಳಿವು ನೀಡಿದ್ದು, ಈ ಹಿನ್ನೆಲೆ ಥೈಲ್ಯಾಂಡ್ ಮೂಲದ ಜೆರ್ಕಾನ್ ಎನ್ನುವ ಸಂಸ್ಥೆಯೊಂದು ವಿನೂತನ ಬಾಡಿ ಕಿಟ್ ಒದಗಿಸಿ ಸ್ವಿಫ್ಟ್ ಸ್ಪೋಟಿ ವರ್ಷನ್ ಅಭಿವೃದ್ದಿ ಮಾಡಿದೆ. ಮೆಲ್ನೋಟಕ್ಕೆ ಸುಜುಕಿ ಸಂಸ್ಥೆಯೇ ಈ ವಿನ್ಯಾಸಗಳನ್ನು ಅಭಿವೃದ್ದಿ ಎನ್ನವಷ್ಟು ಆಕರ್ಷಕವಾಗಿದ್ದು, ಸ್ಪೋರ್ಟಿ ಲುಕ್‌ಗಳು ಯುವ ಸಮುದಾಯದ ಹಾಟ್ ಫೇವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಭಾರತೀಯ ಮಾರುಕಟ್ಟೆಯ ವಿನ್ಯಾಸಗಳನ್ನೇ ಪಡೆದಿರುವ ಸ್ವಿಫ್ಟ್ ಕಾರುಗಳನ್ನು ಮಾಡಿಫೈಗಾಗಿ ಬಳಕೆ ಮಾಡಿಕೊಳ್ಳಲಾಗಿದ್ದು,ಫ್ರಂಟ್ ಆ್ಯಂಡ್ ರಿಯರ್ ಬಂಪರ್, ವೀಲ್ಹ್ ಆರ್ಚ್ ಜೊತೆಗೆ ಬ್ಲ್ಯಾಕ್ ಕ್ಲ್ಯಾಂಡಿಂಗ್, ಫ್ರಂಟ್ ಬಂಪರ್‌ಗಳಲ್ಲಿ ಎಲ್‌ಇಡಿ ಪೈಲೆಟ್ ಲ್ಯಾಂಪ್ಸ್ , ಟ್ವಿನ್ ಎಕ್ಸಾಸ್ಟ್ ಮತ್ತು ಕಾರಿನ ಅಂಚುಗಳಲ್ಲಿ ಹಾಗೂ ಮಿರರ್ ಅಂಚುಗಳಲ್ಲಿ ರೆಡ್ ವ್ಯಾರ್ಪ್ ಬಳಕೆ ಮಾಡಲಾಗಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಇದರಲ್ಲದೇ ಭಾರತೀಯ ಆಟೋ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುತ್ತಿರುವ ಪ್ರಮುಖ ಕಾರು ಮಾದರಿಗಳಲ್ಲಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿ ಕೂಡಾ ಒಂದಾಗಿದ್ದು, ಈ ಮಧ್ಯೆ ಹೊಸ ಕಾರಿನ ಕುರಿತು ದಿನಕ್ಕೊಂದು ವಿಚಾರಗಳು ಹೊರಬರುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಸುದ್ದಿ ಮೂಲಗಳ ಪ್ರಕಾರ ಮಾರುತಿ ಸ್ವಿಫ್ಟ್ ಆವೃತ್ತಿಯು ಕಾರ್ ರೇಸ್ ಪ್ರಿಯರಿಗಾಗಿಯೇ ವಿಶೇಷ ತಂತ್ರಜ್ಞಾನ ಬಳಕೆಯ ಸುಧಾರಿತ ಸೀಟುಗಳನ್ನು ಒದಗಿಸಲಾಗುತ್ತಿದ್ದು, ಇದು ಕಾರು ರೇಸ್‌ಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದು ಸುಜುಕಿ ಮೋಟಾರ್ ಸಂಸ್ಥೆ ಹೇಳಿಕೊಂಡಿದೆ. ಜೊತೆಗೆ ಇದೇ ವರ್ಷವೇ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಗ್ಗೆ ಸುಳಿವು ನೀಡಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡ ನಂತರ ಹ್ಯುಂಡೈನ ಬಹುನೀರಿಕ್ಷಿತ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

Via: ZerconOfficial

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಇದರೊಂದಿಗೆ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳಲ್ಲೇ ವಿಶೇಷ ಎನ್ನಿಸಲಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಸ್ಪೈಡರ್ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನೊಂದಿಗೆ ವಿಭಿನ್ನತೆಯನ್ನು ಪಡೆದುಕೊಂಡಿರುವುದು ರೇಸ್ ಪ್ರಿಯರ ಸೆಳೆಯುವಲ್ಲಿ ಸಹಕಾರಿಯಾಗಲಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಬೇಡಿಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಸುಜುಕಿ ಸ್ಪೀಫ್ಟ್ ಸ್ಪೋರ್ಟ್ ಕೂಡಾ ಖರೀದಿಗೆ ಲಭ್ಯವಿರಲಿದ್ದು, ಡ್ಯುಯಲ್ ಏರ್‌ಬ್ಯಾಗ್ ಕಿಟ್, ಸ್ಪೆಷಲ್ ಅಲಾಯ್ ವೀಲ್ಹ್ ಮತ್ತು ಸ್ಪೋರ್ಟ್ ಸ್ಟೈನ್‌ಲೆಸ್ ಸ್ಟಿಲ್ ಪೆಡಲ್ ಅಳವಡಿಕೆ ಮಾಡಲಾಗಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಸ್ಪೋರ್ಟ್ ಆವೃತ್ತಿಯ ಚಿಹ್ನೆ ಕೂಡಾ ಹೊಸ ಕಾರಿನ ಲುಕ್‌ನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.4-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್ ಕೆ14ಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಆದ್ರೆ ಕೆಲವು ವರದಿಗಳ ಪ್ರಕಾರ ಹೊಸ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗಾಗಿ 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಮಾಡಿಫೈ ವಿನ್ಯಾಸದಲ್ಲಿ ಮಿಂಚುತ್ತಿವೆ ಮಾರುತಿ ಸುಜುಕಿ ಸ್ವಿಫ್ಟ್

ಸ್ಪಿಫ್ಟ್ ಸ್ಪೋರ್ಟಿ ಆವೃತ್ತಿಯ ವೈಶಿಷ್ಟ್ಯತೆಗಳು ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೊ ಆರ್‌ಎಸ್, ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಮತ್ತು ಫಿಯೆಟ್ ಅಬಾರ್ತ್ ಕಾರಿನಲ್ಲಿಯೂ ಸಹ ಲಭ್ಯವಿದ್ದು, ಇವುಗಳಿಂತ ಹೇಗೆ ಭಿನ್ನತೆ ಹೊಂದಲಿದೆ ಎಂಬುವುದು ಬಿಡುಗಡೆಯ ನಂತರವಷ್ಟೇ ತಿಳಿಯಲಿದೆ.

Most Read Articles

Kannada
English summary
All new Suzuki Swift with ZERCON body kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X