ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಸ್ಪೆಷಲ್ ಎಡಿಷನ್ ಅನ್ನು ಬಿಡಿಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.99ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಸ್ಪೆಷಲ್ ಎಡಿಷನ್ ಸ್ವಿಫ್ಟ್ ಕಾರಿನ ಎಲ್ಎಕ್ಸ್ಐ ಮತ್ತು ಎಲ್‍‍ಡಿಐ ವೇರಿಯಂಟ್‍‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಸ್ಪೆಷಲ್ ಎಡಿಷನ್ ಸ್ವಿಫ್ಟ್ ಕಾರು ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಬದಲಾವಣೆಗಳನ್ನು ಪಡೆದುಕೊಂಡಿದೆ. ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನ ಹೊರಭಾಗದಲ್ಲಿ ಹೊಸದಾಗಿ ಬಾಡಿ ಕಲ್ಲರ್ಡ್ ಒಆರ್‍‍ವಿಎಮ್, ಡೋರ್ ಹ್ಯಾಂಡಲ್‍‍ಗಳು ಮತ್ತು ವ್ಹೀಲ್ ಕವರ್‍‍ಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಇನ್ನು ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನ ಒಳಭಾಗದಲ್ಲಿ ಸಿಂಗಲ್ ಡಿನ್ ಮ್ಯೂಸಿಕ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಡ್ರೈವರ್ ಮತ್ತು ಫ್ರಂಟ್ ಪ್ಯಾಸಂಜರ್‍‍ಗಾಗಿ ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಹೊಸದಾಗಿ ನೀಡಲಾಗಿದೆ. ಈ ಹೆಚ್ಚುವರಿ ಬಿಡಿಭಾಗಗಳು ಮತ್ತು ಪೆಯಿಂಟ್ ಕೆಲಸವು ಕಂಪೆನಿಯ ವಿತರಕರಿಂದ ಅಳವಡಿಸಲ್ಪಟ್ಟಿವೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರು ಪ್ರಸ್ಥುತ ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್‍ಎಕ್ಸ್ಐ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಪೆಟ್ರೋಲ್ ಆಧಾರಿತ ಸ್ವಿಫ್ಟ್ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 83ಬಿಹೆಚ್‍‍ಪಿ ಮತ್ತು 115ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಇನ್ನು ಡೀಸೆಲ್ ಆಧಾರಿತ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರುಗಳು 1.3 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 74ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ಸ್ವಿಫ್ಟ್ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪರಿಚಯಿಸಲಾಗಿದ್ದು, ಬಿಡುಗಡೆಗೊಂಡಗಿನಿಂದಲೂ ತಿಂಗಳಿಗೆ ಸುಮಾರು 19,000 ಕಾರುಗಳನ್ನು ಮಾರಾಟಗೊಂಳ್ಳುತ್ತಾ ಟಾಪ್ ಸೆಲ್ಲಿಂಗ್ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಮಾರುತಿ ಸುಜುಕಿ ಇತ್ತೀಚೆಗೆ ತಮ್ಮ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಅನ್ನು ಮೊದಲಿಗೆ ಬಿಡುಗಡೆಗೊಳಿ 13ನೆಯ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದು, ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರು ಬೆಲೆಗೆ ತಕ್ಕಂತೆ ವೈಶಿಷ್ಟ್ಯತೆಗಳನ್ನು ಮದ್ದು ಸೌಲತ್ತುಗಳನ್ನು ನೀಡುತ್ತಿದೆ.

ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಸ್ಪೆಷಲ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ಇನ್ನಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ನವೀಕರಣವನ್ನು ಮತ್ತು ಬದಲಾವಣೆಗಳನ್ನು ಪಡೆದು ಬಂದ ಈ ಕಾರು ಮಾರಾಟದ ಸಂಖ್ಯೆಯಲ್ಲಿ ಅಧಿಕಗೊಳ್ಳುವ ಸಾಧ್ಯತೆಗಳಿವೆ.

2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಿದ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..

Most Read Articles

Kannada
English summary
Maruti Suzuki Swift Special Edition Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X