ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಸಿಯಾಜ್ ಸೆಡಾನ್ ಕಾರಿಗೆ ಹೊಸದಾಗಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದ್ದು.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಸಿಯಾಜ್ ಸೆಡಾನ್ ಕಾರಿಗೆ ಹೊಸದಾಗಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದ್ದು, ಈಗಾಗಲೆ ಹೊಸ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿರುವ ಸಿಯಾಜ್ ಕಾರುಗಳನ್ನು ಪರೀಕ್ಷಿಸಲಾಗುತ್ತಿದ್ದು ಉತ್ಪಾದನೆಗೆ ಪ್ರವೇಶಿಸುವ ಅಂತಿಮ ಹಂತದಲ್ಲಿದೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಂಸ್ಥೆಯು ಮುಂದಿನ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಪರಿಚಯಿಸುತ್ತವೆ ಎನ್ನಲಾಗಿದ್ದು, ಇದೀಗ ಪ್ರಸ್ಥುತ ತಲೆಮಾರಿನ ಸಿಯಾಜ್ ಕಾರುಗಳಲ್ಲಿ ಹೊಸ ಎಂಜಿನ್ ಅನ್ನು ಪರೀಕ್ಷಿಸಲಾಗುತ್ತಿದೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಮಾರುತಿ ಸುಜುಕಿ ಸಿಯಾಜ್ ಕಾರುಗಳು ಇದೇ ವರ್ಷದ ಎರಡನೆಯ ತ್ರೈಮಾಸಿಕ ಅವದಿಯಲ್ಲಿ ಬಿಡುಡುಗಡೆಗೊಳ್ಳಲಿದ್ದು, ಸಂಸ್ಥೆಯ ಇನ್ನಿತರೆ ಕಾರುಗಳಲ್ಲಿ ಬಳಸಲಾಗುವ ಹೊಸ ಕೆ15ಬಿ ಎಂಜಿನ್ ಸಂಕೇತ ನಾಮವನ್ನು ಪಡೆದುಕೊಂಡಿದೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್‍‍ಗಳು 1462ಸಿಸಿ ಎಂಜಿನ್ ಸಹಾಯದಿಂದ 104ಬಿಹೆಚ್‍‍ಪಿ ಮತ್ತು 139ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. ಇನ್ನು ಪ್ರಸ್ಥುತ ಸಿಯಾಜ್ ಕಾರುಗಳಲ್ಲಿ ಅಳವಡಿಸಿರುವ 1.4 ಲೀಟರ್ ಪೆಟ್ರೋಲ್ ಎಂಜಿನ್‍‍ಗಳು ಕೇವಲ 92 ಬಿಹೆಚ್‍‍ಯನ್ನು ಮಾತ್ರ ಉತ್ಪಾದಿಸಬಲ್ಲದು.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಪ್ರಸ್ಥುತ ಸಿಯಾಜ್ ಕಾರುಗಳು ಪಡೆದಿರುವ ಪೆಟ್ರೋಲ್ ಎಂಜಿನ್‍‍ಗಳು ತಮ್ಮ ಎದುರಾಳಿ ಕಾರುಗಳಾದ ಹೋಂಡಾ ಸಿಟಿ ಮತ್ತು ಹ್ಯುಂಡಿ ವೆರ್ನಾ ಕಾರುಗಳಿಗಿಂತ ಕಡಿಮೆ ಸಾಮರ್ಥ್ಯವನ್ನೆ ಪಡೆದುಕೊಂಡಿದ್ದು, ಹೊಸ ಎಂಜಿನ್ ಪಡೆಯುವುದರಿಂದ ತಮ್ಮ ಎದುರಾಳಿಯ ಕಾರುಗಳಿಗೆ ಪೈಪೋಟಿಯನ್ನು ನೀಡಲಿವೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಮಾರುಕಟ್ಟೆಯಲ್ಲಿ ಈಗ ಮಾರಾಟಗೊಳ್ಳುತ್ತಿರುವ ಸಿಯಾಜ್ ಪೆಟ್ರೋಲ್ ಆವೃತ್ತಿಯ ಕಾರುಗಳು ಡೀಸೆಲ್ ಆವೃತ್ತಿಯ ಕಾರುಗಳಿಗಿಂತಾ ಕಡಿಮೆ ಜನಪ್ರಿಯತೆಯನ್ನು ಪಡೆದಿದ್ದು, ಹೊಸ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಈ ಹೊಸ ಪೆಟ್ರೋಲ್ ಎಂಜಿನ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳ್ಳುವ ಎರ್ಟಿಗಾ ಕಾರಿನಲ್ಲಿಯೂ ಕೂಡ ಪಡೆಯಲಿದ್ದು, ಜೊತೆಗೆ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರುಗಳು 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಕೂಡ ಪಡೆಯಲಿವೆ.

ಹೊಸ ಎಂಜಿನ್ ಪಡೆದು ಬರಲಿದೆ ಮಾರುತಿ ಸುಜುಕಿ ಸಿಯಾಜ್ ಕಾರು..

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಕಾರುಗಳಿಗೆ ಹೊಸ ಎಂಜಿನ್ ಅನ್ನು ಅಳವಡಿಸುವ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಗಟ್ತಿ ಪೈಪೋಟಿ ನೀಡುವ ತವಕದಲಿದ್ದು, ಪ್ರಸ್ಥುತ ಸಂಸ್ಥೆಯ ಡೀಸೆಲ್ ಎಂಜಿನ್ ಅನ್ನು ಪಡೆದ ಫಿಯಾಟ್, ಸಿಯಾಜ್, ಎರ್ಟಿಗಾ ಕಾರುಗಳು ಮಾತ್ರ ಹೆಚ್ಚು ಮಾರಾಟವಾಗುತ್ತಿದೆ.

Source: Autocar

Most Read Articles

Kannada
Read more on maruti suzuki sedan
English summary
Maruti testing the new 1.5 litre petrol engine in Ciaz.
Story first published: Thursday, May 17, 2018, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X