ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ದೇಶದ ಪ್ರಮುಖ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಆಲ್ಟೋ 800 ಹ್ಯಾಚ್‍‍ಬ್ಯಾಕ್ ಕಾರಿನ ಟ್ಯಾಕ್ಸಿ ವೇರಿಯಂಟ್ ಅನ್ನು ಪರಿಚಯಿಸಲಿದ್ದು, ಕಾರಿಗೆ ಟೂರ್ ಹೆಚ್1 ಎಂದು ಹೆಸರನ್ನು ನಿಗದಿಪಡಿಸಲಾಗಿದೆ.

By Rahul Ts

ದೇಶದ ಪ್ರಮುಖ ಪ್ಯಾಸೆಂಜರ್ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಆಲ್ಟೋ 800 ಹ್ಯಾಚ್‍‍ಬ್ಯಾಕ್ ಕಾರಿನ ಟ್ಯಾಕ್ಸಿ ವೇರಿಯಂಟ್ ಅನ್ನು ಪರಿಚಯಿಸಲಿದ್ದು, ಕಾರಿಗೆ ಟೂರ್ ಹೆಚ್1 ಎಂದು ಹೆಸರನ್ನು ನಿಗದಿಪಡಿಸಲಾಗಿದೆ. ಇದೀಗ ಟೂರ್ ಹೆಚ್1 ಕಾರಿನ ಬ್ರೌಷರ್ ಬಹಿರಂಗಗೊಂಡಿದ್ದು, ವೇರಿಯಂಟ್ ಮತ್ತು ವೈಶಿಷ್ಟ್ಯತೆಗಳ ಕುರಿತಾದ ಮಾಹಿತಿಯು ಹೊರಬಿದ್ದಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಮಾರುತಿ ಟೂರ್ ಹೆಚ್1 ಕಪ್ಪು ಬಣ್ಣದ ಬಂಪರ್‍‍ಗಳು, ಕಪ್ಪು ಬಣ್ಣದ ಒಆರ್‍‍‍ವಿಎಮ್ ಮತ್ತು ಕಪ್ಪು ಬಣ್ಣದ ಡೋರ್ ಹ್ಯಾಂಡಲ್‍‍ಗಳನ್ನು ಪಡೆದಿದ್ದು, ಮಾರುತಿ ಆಲ್ಟೋ 800 ಕಾರಿನ ಟ್ಯಾಕ್ಸಿ ವೇರಿಯಂಟ್ ಸುಪಿರೀಯರ್ ವೈಟ್, ಸಿಲ್ಕಿ ಸಿಲ್ವರ್ ಮತ್ತು ಮಿಡ್‍‍ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಮಾರುತಿ ಟೂರ್ ಹೆಚ್1 ಹೀಟರ್‍‍ನೊಂದಿಗೆ ಏಸಿ, ಮ್ಯಾನುವಲ್ ಕ್ಲೈಮೇಟ್ ಕಂಟ್ರೋಲರ್, ಮ್ಯಾನುವಲ್ಲಿ ಆಪರೇಟ್ ಮಾಡಬಹುದಾದ ಒಆರ್‍‍ವಿಎಮ್, ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೋಸ್ ಮತ್ತು ಬೂಟ್ ಒಪೆನರ್‍‍ನ ಮೇಲೆ ರಿಮೋಟ್ ಫ್ಯುಯಲ್ ಲಿಡ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಡ್ರೈವರ್ ಸೈಡ್ ಏರ್‍‍ಬ್ಯಾಗ್ ಅನ್ನು ಆಯ್ಕೆಯಾಗಿ ಅಳವಡಿಸಲಾಗಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಮಾರುತಿ ಆಲ್ಟೊ ಕಾರಿನ ಟ್ಯಾಕ್ಸಿ ವೇರಿಯಂಟ್ 796ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 47ಬಿಹೆಚ್‍‍ಪಿ ಮತ್ತು 69ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಬಲ್ಲ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಆಲ್ಟೊ 800 ಕಾರಿನ ಟ್ಯಾಕ್ಸಿ ವೇರಿಯಂಟ್‍‍ನ ಪೆಟ್ರೋಲ್ ಮಾದರಿಯು ಕೇವಲ ಒಂದು ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿರಲಿದ್ದು, ಪ್ರತೀ ಲೀಟರ್‍‍ಗೆ 23.95 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಮಾರುತಿ ಟೂರ್ ಹೆಚ್1 ಕಾರಿನ ಸಿಎನ್‍‍ಜಿ ವೇರಿಯಂಟ್ ಅನ್ನು ಭವಿಷ್ಯದ ದಿನಗಳಲ್ಲಿ ಪರಿಚಯಿಸಲಿದೆ ಎಂದು ಊಹಿಸಲಾಗಿದ್ದು, ಸಿಎನ್‍ಜಿ ವೇರಿಯಂಟ್ ಕಾರುಗಳು 40 ಬಿಹೆಚ್‍‍ಪಿ ಮತ್ತು 60ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಆಲ್ಟೋ 800 ಕಾರಿನ ಟ್ಯಾಕ್ಸಿ ವೇರಿಯಂಟ್ ಕಾರುಗಳು ಗಂಟೆಗೆ 80ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿರಲಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಪ್ರಸ್ತುತ ಮಾರುತಿ ಸುಜುಕಿ ಟೂರ್ ಎಂಬ ಹೆಸರಿನಲ್ಲಿ : ಟೂರ್ ಹೆಚ್1 (ಮಾರುತಿ ಆಲ್ಟೊ 800), ಟೂರ್ ಹೆಚ್2 (ಮಾರುತಿ ಸೆಲೆರಿಯೊ), ಟೂರ್ V (ಮಾರುತಿ ಇಕೊ) ಮತ್ತು ಟೂರ್ ಎಸ್ (ಮಾರುತಿ ಡಿಜೈರ್) ಎಂಬ ನಾಲ್ಕು ವೇರಿಯಂಟ್‍‍ಗಳು ಲಭ್ಯವಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಆದರೆ ಪ್ರಸ್ತುತ ಮಾರುತಿ ಎರ್ಟಿಗಾ ಕಾರು ಕೂಡಾ ಟ್ಯಾಕ್ಸಿ ವೇರಿಯಂಟ್ ಅನ್ನು ಪಡೆಯಲಿದ್ದು, ಎರ್ಟಿಗಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಅವಧಿಯಲ್ಲಿ ಸಂಸ್ಥೆಯು ಪರಿಚಯಿಸಲಿದೆ ಎನ್ನಲಾಗಿದೆ.

ಟ್ಯಾಕ್ಸಿ ಡ್ರೈವರ್‍‍ಗಳಿಗಾಗಿ ಹೊಸ ಹ್ಯಾಚ್‍‍ಬ್ಯಾಕ್ ಕಾರನ್ನು ಪರಿಚಯಿಸಲಿದೆ ಮಾರುತಿ ಸುಜುಕಿ..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಮಾರುತಿ ಸುಜುಕಿ ಈಗಾಗಲೇ ತಮ್ಮ ಡಿಜೈರ್ ಕಾರುಗಳಿಂದ ಟ್ಯಾಕ್ಸಿ ಕಾರ್ ಸೆಗ್ಮೆಂಟ್‍‍ನಲ್ಲಿ ಮುಂದಿದ್ದು, ಈಗ ಕಂಪನಿಯು ಹೊಸ ಉತ್ಪನ್ನಗಳ ಸೇರ್ಪಡೆಯೊಂದಿಗೆ ಅದರ ಉತ್ಪನ್ನ ಬಂಡವಾಳವನ್ನು ವಿಸ್ತರಿಸಿದೆ. ಆಲ್ಟೊ ಟ್ಯಾಕ್ಸಿ ಅಥವಾ ಟೂರ್ ಹೆಚ್1 ಕಾರು ಟ್ಯಾಕ್ಸಿ ಚಾಲಕರಿಗೆ ಕೈಗಟ್ಟುವ ಬೆಲೆಯಲ್ಲಿ ದೊರೆಯಲಿದ್ದು, ಕಡಿಮೆ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಕಾರು ಇದಾಗಿದೆ.

Most Read Articles

Kannada
English summary
Maruti Tour H1 (Alto Taxi) Brochure Leaked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X