ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಪ್ರಮುಖ ಕಾರುಗಳಲ್ಲಿ 2018ರ ವ್ಯಾಗನ್ ಆರ್ ಕೂಡಾ ಹೊಸ ಭರವಸೆ ಹುಟ್ಟುಹಾಕಿದೆ.

By Praveen Sannamani

ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಪ್ರಮುಖ ಕಾರುಗಳಲ್ಲಿ 2018ರ ವ್ಯಾಗನ್ ಆರ್ ಕೂಡಾ ಹೊಸ ಭರವಸೆ ಹುಟ್ಟುಹಾಕಿದ್ದು, ಈ ಮಧ್ಯೆ ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಕುರಿತಾಗಿ ಮಹತ್ವದ ಮಾಹಿತಿ ಲಭ್ಯವಾಗಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ 25 ವರ್ಷ ಪೂರೈಸುತ್ತಿರುವ ವ್ಯಾಗನ್ ಆರ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಜನಪ್ರಿಯತೆ ತಂದುಕೊಟ್ಟಿದ್ದಲ್ಲದೇ ಮಧ್ಯಮ ವರ್ಗದ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಬಹುತೇಕರಿಗೆ ಗೊತ್ತಿರುವ ವಿಚಾರ. ಇದೀಗ ವ್ಯಾಗನ್ ಆರ್ ಕಾರುಗಳು ಮತ್ತಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿದ್ದು, ಜಪಾನ್ ಮಾರುಕಟ್ಟೆಯಲ್ಲಿರುವ ವ್ಯಾಗನ್ ಆರ್ ಕಾರುಗಳ ವಿನ್ಯಾಸವನ್ನು ಹೊತ್ತು ಬರುತ್ತಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಹೌದು, ಭಾರತವಷ್ಟೇ ಅಲ್ಲದೇ ಜಪಾನ್ ಮಾರುಕಟ್ಟೆಯಲ್ಲೂ ಕಮಾಲ್ ಮಾಡಿರುವ ವ್ಯಾಗನ್ ಆರ್ ಕಾರುಗಳು ಕಿಯೈ ಕಾರುಗಳಿಂತಲೂ ಕಳೆಮಟ್ಟದಲ್ಲಿ ಮಾರಾಟಗೊಳ್ಳಲಿದ್ದು, 16ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ 660ಸಿಸಿ ಎಂಜಿನ್ ಪಡೆದುಕೊಳ್ಳಲಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಹಾಗೆಯೇ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ವ್ಯಾಗನ್ ಆರ್ ಕಾರುಗಳು 4ನೇ ತಲೆಮಾರಿನ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, 1.0-ಲೀಟರ್(1 ಸಾವಿರ ಸಿಸಿ) ಕೆ10 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಮೂಲಕ ಆಲ್ಟೊ ಮತ್ತು ಸೆಲೆರಿಯೊ ಕಾರುಗಳ ಎಂಜಿನ್‌ಗೆ ಸರಿಸಮನಾಗಿರಲಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಇದರ ಜೊತೆಗೆ ಸಿಎನ್‍ಜಿ ಮತ್ತು ಎಲ್‌ಪಿಜಿ ಎರಡನ್ನು ಬಳಕೆ ಮಾಡಬಹುದಾದ ವ್ಯವಸ್ಥೆಯನ್ನು ಸಹ ಹೊಸ ಮಾದರಿಯ ವ್ಯಾಗನ್ ಆರ್ ಕಾರುಗಳಲ್ಲಿ ಒದಗಿಸಲಾಗಿದ್ದು, ಮುಂಬರುವ ನವೆಂಬರ್‌ ಇಲ್ಲವೇ ಡಿಸೆಂಬರ್ ಅಂತ್ಯಕ್ಕೆ ಹೊಸ ವ್ಯಾಗನ್ ಆರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಹಾಗೆಯೇ ವ್ಯಾಗನ್ ಆರ್ ಕಾರುಗಳಲ್ಲಿ ಡಿಸೇಲ್ ವರ್ಷನ್ ಲಭ್ಯವಾಗುವ ಮಾಹಿತಿಗಳಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತಿ ದೊಡ್ಡಎಂಜಿನ್ ಮಾದರಿಯಾದ 1.3-ಲೀಟರ್ ಡಿಸೇಲ್ ಎಂಜಿನ್ ಮಾದರಿಯನ್ನು ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಇನ್ನು ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ನ್ಯೂ ಜನರೇಷನ್ ಸ್ವಿಫ್ಟ್ ಫ್ಯಾಟ್‌ಫಾರ್ಮ್ ಅಡಿಯಲ್ಲೇ ವ್ಯಾಗನ್ ಆರ್ ಕೂಡಾ ಅಭಿವೃದ್ಧಿಗೊಳ್ಳಲಿದ್ದು, ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿರಲಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಈಗಾಗಲೇ ಸಾಕಷ್ಟು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ವ್ಯಾಗನ್ ಆರ್ ಕಾರಿನ ಹೊರ ಭಾಗದ ವಿನ್ಯಾಸಗಳು ಬಹಿರಂಗವಾಗಿದ್ದು, ಕಾರಿನ ಇಂಟಿರಿಯರ್ ಡಿಸೈನ್ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಆದರೂ ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಶಾರ್ಪ್ ಎಡ್ಜ್‌ಗಳು ಮತ್ತು ಸುರಕ್ಷೆತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಹಿಂದಿನ ವ್ಯಾಗನ್ ಆರ್ ಮಾದರಿಯಲ್ಲೇ ಹೊಸ ವ್ಯಾಗನ್ ಆರ್ ಕಾರುಗಳಲ್ಲೂ ಬಹುತೇಕ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದ್ದರೂ, ಕಾರಿನ ಹೊರ ವಿನ್ಯಾಸದಲ್ಲಿನ ಗುರುತರ ಬದಲಾವಣೆಗಳನ್ನು ಸ್ಪೈ ಚಿತ್ರಗಳಲ್ಲಿ ನೋಡಬಹುದಾಗಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಈ ಮೂಲಕ ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಸುರಕ್ಷತೆ ಮತ್ತು ಮತ್ತು ವಿನ್ಯಾಸಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಉತ್ತಮ ಮಾದರಿಯ ಎಂಟ್ರಿ ಲೆವಲ್ ಕಾರು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಆಕರ್ಷಣೆಯಾಗಲಿದೆ.

MOST READ: ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಬೆಲೆ(ಅಂದಾಜು)

ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೆಚ್ಚಿಸಿರುವ ಹಿನ್ನೆಲೆ ಹೊಸ ಕಾರಿನ ಬೆಲೆಯನ್ನು 4.50 ಲಕ್ಷದಿಂದ 5 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

ಹೊಸ ಸ್ಯಾಂಟ್ರೋ ಹಿಂದಿಕ್ಕಲಿದೆ ನ್ಯೂ ಜನರೇಷನ್ ವ್ಯಾಗನ್ ಆರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 20 ವರ್ಷಗಳ ಹಿಂದೆಯೇ ಭಾರತದಲ್ಲಿ ಬಿಡುಗಡೆಯಾಗಿ ಇದುವರೆಗೂ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ವ್ಯಾಗನ್ ಆರ್ ಕಾರುಗಳು ಕಾಲಕ್ಕೆ ತಕ್ಕಂತೆ ಮಹತ್ತರ ಬದಲಾವಣೆ ಕಂಡುಕೊಂಡು ಬರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕಾರಿನಲ್ಲಿರುವ ಸುರಕ್ಷತೆಗೆ ಗ್ರಾಹಕರು ಹೆಚ್ಚಿನ ಒತ್ತು ನೀಡುತ್ತಿದ್ದು, 2018ರ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಉತ್ತಮ ಆಯ್ಕೆಯಾಗಿರಲಿದೆ.

Most Read Articles

Kannada
Read more on maruti suzuki hatchback
English summary
Maruti Suzuki To Launch The New WagonR In India Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X