ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಯುನೈಟೆಡ್ ಕಿಂಗ್‍ಡಮ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಎಂಜಿ ಮೋಟಾರ್ಸ್ ಭಾರತದಲ್ಲಿ ತಮ್ಮ ಮೊದಲ ಕಾರನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿತ್ತು.

By Rahul Ts

ಯುನೈಟೆಡ್ ಕಿಂಗ್‍ಡಮ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಎಂಜಿ ಮೋಟಾರ್ಸ್ ಭಾರತದಲ್ಲಿ ತಮ್ಮ ಮೊದಲ ಕಾರನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, ಇದೀಗ ಸಂಸ್ಥೆಯ ಎಲೆಕ್ಟ್ರಿಕ್ ಎಸ್‍‍ಯುವಿ ಕಾರೊಂದು ಭಾರತದ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಕಾಣಿಸಿಕೊಂಡಿದೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಹೊಸ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಭಾರತೀಯ ರಸ್ಥೆಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ ಎನ್ನಲಾಗಿದೆ. ಎಂಜಿ ಇಂಡಿಯಾ ಸಂಸ್ಥೆಯ ರೋವೆ ಇ ಆರ್‍ಎಕ್ಸ್5 ಎಲೆಕ್ಟ್ರಿಕ್ ಎಸ್‍‍ಯುವಿ ಕಾರನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತಿದ್ದು, ಲೆಫ್ಟ್ ಹ್ಯಾಂಡ್ ಡ್ರೈವ್ ಕಾರದ ಇದನ್ನು ಚೀನದಿಂದ ಆಮದು ಮಾಡಿಕೊಳ್ಳಲಾಗಿದೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಈಗಾಗಲೆ ಈ ರೋವೆ ಇ ಆರ್‍ಎಕ್ಸ್5 ಎಲೆಕ್ಟ್ರಿಕ್ ಎಸ್‍‍ಯುವಿ ಕಾರನ್ನು ಪಶ್ಚಿಮ ಭಾರತದ ರಸ್ಥೆಗಳಲ್ಲಿ ಪರೀಕ್ಷಿಸಲಾಗುತಿದ್ದು, ಮುಂಬರುವ ದಿನಗಳಲ್ಲಿ ದೇಶದ ಇನ್ನಿತರೆ ಪ್ರದೇಶಗಳಲ್ಲಿನ ರಸ್ಥೆಗಳು ಹಾಗು ವಾತಾವರಣಕ್ಕೆ ಸರಿಹೋಗುವ ಹಾಗೆ ಪರೀಕ್ಷಿಸಲಾಗುತ್ತದೆ ಎಂದು ಎಂಜಿ ಮೋಟಾರ್ಸ್ ಇಂಡಿಯಾದ ಅಧ್ಯಕ್ಷರಾದ ರಾಜೀವ್ ಚಬಾ ಹೇಳಿಕೊಂಡಿದ್ದಾರೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಎಂಜಿ ರೋವೆ ಇ ಆರ್‍ಎಕ್ಸ್5 ಕಾರುಗಳು 85ಕಿಲೋವ್ಯಾಟ್ಸ್ ಸಹಾಯದಿಂಡ 255ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದಲ್ಲದೆ 48.3 ಕಿಲೋವ್ಯಾಟ್ಸ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಸುಮಾರು 320 ಕಿಲೋಮೀಟರ್ ಚಲಿಸಬಲ್ಲ ಶಕ್ತಿಯನ್ನು ಪಡೆದಿದೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಜೊತೆಗೆ ಗಂಟೆಗೆ 60 ವೇಗದಲ್ಲಿ ಕಿಲೋಮೀಟರ್ ಚಲಿಸುವುದಾದರೆ ಸುಮಾರು 425 ಕಿಲೋಮೀಟರ್ ವರೆಗು ಚಲಿಸಬಹುದಂತೆ. ಇನ್ನು ಕಾರಿನ ಬ್ಯಾಟರಿಯನ್ನು ಚಾರ್ಜ್ ಮಾಡಲಿ 7 ಗಂಟೆಗೆಳ ಸಮಯ ಬೇಕಾಗಿದ್ದು, ಫಾಸ್ಟ್ ಚಾರ್ಜಿಂಗ್‍‍ನ ಸಹಾಯದಿಂದ ಕೇವಲ 40 ನಿಮಿಷದಲ್ಲಿ ಸುಮಾರು 80ರಷ್ಟು ಚಾರ್ಜ್ ಆಗಲಿವೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಎಲ್ಲಾ ಎಸ್‍ಯುವಿ ಕಾರುಗಳು ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿರುತ್ತವೆ. ಎಂಜಿ ಮೋಟಾರ್ಸ್ ಸಂಸ್ಥೆಯು ಭವಿಷ್ಯದ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಪರಿಚಯಿಸಲಿದೆ ಎಂದು ಕೂಡ ಸುಳಿವು ನೀಡಿದೆ.

ಜೀಪ್ ಕಂಪಾಸ್‍‍ಗೆ ಟಾಂಗ್ ನೀಡಲು ಬರಲಿದೆ ಎಂಜಿ ಮೋಟಾರ್ಸ್‍‍ನ ಎಲೆಕ್ಟ್ರಿಕ್ ಎಸ್‍ಯುವಿ ಕಾರು

ಇನ್ನು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರೋವೆ ಇ ಆರ್‍ಎಕ್ಸ್5 ಎಸ್‍ಯುವಿ ಕಾರಿನ ಬಗ್ಗೆ ಬೇರಾವ ಮಾಹಿತಿಯು ಬಹಿರಂಗಗೊಂಡಿಲ್ಲ. 2019ರ ಎರಡನೆಯ ತ್ರೈಮಾಸಿಕ ಅವದಿಯಲ್ಲಿ ಬಿಡುಗಡೆಗೊಳಿಸಲಿದ್ದು, ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಜೀಪ್ ಕಾಂಪಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Source : cartoq

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಡಿಜೈರ್ ಹಿಂದಿಕ್ಕುತ್ತಾ ಹೋಂಡಾ ಹೊಸ ಅಮೇಜ್?

ಅತಿ ಹೆಚ್ಚು ಮೈಲೇಜ್ ನೀಡುವ ಟಿವಿಎಸ್ ಸ್ಪೋರ್ಟ್ ಸಿಲ್ವರ್ ಅಲಾಯ್ ಎಡಿಷನ್ ಬಿಡುಗಡೆ

ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಿಸಲಿದೆ ಚೀನಾ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Most Read Articles

Kannada
English summary
MG Motors’ electric SUV spied in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X